ಸುದ್ದಿವಿಜಯ,ಜಗಳೂರು: ಎಂಬಿಬಿಎಸ್ ಓದುವ ಮಹಾತ್ವಾಕಾಂಕ್ಷೆಯಿಟ್ಟುಕೊಂಡಿದ್ದ ವಿದ್ಯಾರ್ಥಿನಿ ಚೈತ್ರ (18) ಸಿಇಟಿಯಲ್ಲಿ ಕಡಿಮೆ ರ್ಯಾಂಕ್ ಬಂದಿದ್ದರಿಂದ ಮನನೊಂದು ಕಳೆದ ಸೆ.6ರಂದು ಮಂಗಳವಾರ ಪಟ್ಟಣದ ಮುಸ್ಲಿಂ ಕಾಲೋನಿಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿಕ್ಷಕ ಟಿ.ಎಚ್.ಸೋಮಪ್ಪ ಅವರ ಪುತ್ರಿ ಚೈತ್ರ ಎಂಬಿಬಿಎಸ್ ಮಾಡುವ ಉದ್ದೇಶದಿಂದ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ್ದರು. ಆದರೆ ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕಿಂಗ್ ಕಡಿಮೆಯಾಗಿದ್ದರಿಂದ ಮನ ನೊಂದು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸಿಇಟಿಯಲ್ಲಿ ಕಡಿಮೆ ರ್ಯಾಂಕ್ ಬಂದಿದ್ದರಿಂದ ನಾನು ಮನ ನೊಂದಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ತಂದೆ ಟಿ.ಎಚ್.ಸೋಮಪ್ಪ ಅವರು ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪಿಎಸ್‍ಐ ಮಹೇಶ್ ಹೊಸಪೇಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.