ಸುದ್ದಿ ವಿಜಯ, ಜಗಳೂರು: ಪಟ್ಟಣದ ಜೆಸಿಆರ್ ಬಡಾವಣೆಯ ಶಿಕ್ಷಕರಾದ ಡಿ.ವಿ.ಅಂಬುಜಾ ಮತ್ತು ನಾಗರಾಜ್ ಪುತ್ರಿ ಲಿಖಿತಾ ಮತ್ತು ಹತ್ತು ತಿಂಗಳ ಮಗು ಆತ್ಮಹತ್ಯೆಗೆ ಪ್ರಕರಣದ ಎ೧ ಆರೋಪಿ ಡಿ. ಮನೋಜ್ ಕುಮಾರ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ನಡೆದ ನಂತರ ತಲೆಮರೆಸಿಕೊಂಡಿದ್ದ ಆರೋಪಿ ಮನೋಜ್‌ಕುಮಾರ್‌ ನನ್ನು ಚಿತ್ರದುರ್ಗದಲ್ಲಿ ಬುಧವಾರ ಬಂಧಿಸಿದ್ದಾರೆ. ಬಂಧನದ ನಂತರ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿದ ನಂತರ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

ಮತ್ತಿಬ್ಬರು ಆರೋಪಿಗಳಾದ ಮನೋಜ್ ಕುಮಾರ್ ತಾಯಿ ಲೀಲಾವತಿ ಮತ್ತು ತಂದೆ ದೇವೇಂದ್ರಪ್ಪ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮನೋಜ್‌ ಕುಮಾರ್‌ ಅವರ ಮಾನಸಿಕ ಮತ್ತು ದೈಹಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು  ಮೃತ ಲಿಖಿತಾ ತಾಯಿ ಅಂಬುಜಾ ಮತ್ತು ತಂದೆ ನಾಗರಾಜ್‌ ಜಗಳೂರು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ. ಮನೋಜ್‌ಕುಮಾರ್‌ ಮೇಲೆ ಆರೋಪ ಮಾಡಿದ್ದರು.

ಲಿಖಿತಾ ಆತ್ಮಹತ್ಯೆ ನಂತರ ತಲೆ ಮರೆಸಿಕೊಂಡಿದ್ದ ಆರೋಪಿ ಮನೋಜ್ ಕುಮಾರ್ ನನ್ನ ಪ್ರಕರಣ ನಡೆದ 24 ಗಂಟೆಗಳಲ್ಲಿ ಅರೆಸ್ಟ್‌ ಮಾಡಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!