ಸುದ್ದಿವಿಜಯ, ಬೆಂಗಳೂರು: ನೂತನ ಶಾಸಕ ಬಿ.ದೇವೇಂದ್ರಪ್ಪ ಅವರು ಸೋಮವಾರ ವಿಧಾನೌಧದಲ್ಲಿ ಶಾಸಕರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನವ ಸ್ವೀಕರಿಸಿದರು.
“ಬಿ.ದೇವೇಂದ್ರಪ್ಪ ಹೆಸರಿನವನಾದ ನಾನು ವಿಧಾನ ಸಭಾ ಸದಸ್ಯನಾಗಿ ನಿರ್ವಾಚನ ಹೊಂದಿದವನಾಗಿ ವಿಧಿದ್ವಾರ ಸ್ಥಾಪಿತವಾದ ಭಾರತದ ಸಂವಿಧಾನದ
ವಿಚಾರದಲ್ಲಿ ಶ್ರದ್ಧೆಯಿಂದಲೂ, ನಿಷ್ಠೆಯಿಂದಲೂ ಕೂಡಿರುತ್ತೇನೆ ಎಂದು ಭಾರತದ ಪರಮಾಧಿಕಾರ ಮತ್ತು ಸಮಗ್ರತೆಯನ್ನು ಸಮರ್ಥಿಸುತ್ತೇನೆ ಎಂದು ನಾನು ಕೈಗೊಳ್ಳುವ ಕಾರ್ಯವನ್ನು ಶ್ರದ್ಧಾ ಪೂರ್ವಕವಾಗಿ ನಿರ್ವಹಿಸುತ್ತೇನೆ ಎಂದು ಭಗವಂತನ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ.ಸತ್ಯ ನಿಷ್ಠೆಯಿಂದ ಪ್ರತಿಜ್ಞೆ ಮಾಡುತ್ತೇನೆ” ಎಂದು ಪ್ರಮಾಣ ವಚನ ಸ್ವೀಕರಿಸಿದರು.

ನಂತರ ಹಂಗಾಮಿ ಸ್ವೀಕರ್ ಆರ್.ವಿ.ದೇಶಪಾಂಡೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.