ಸುದ್ದಿವಿಜಯ, ದಾವಣಗೆರೆ : ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ, ಕಳ್ಳರ ಕಾಟ, ಭದ್ರತೆ ದೃಷ್ಟಿಯಿಂದ ಅಂಚೆ ಇಲಾಖೆ ಚಿನ್ನದ ರೂಪದಲ್ಲಿ ಬಾಂಡ್ ತಂದಿದೆ. ಇದರಿಂದ ಕೇವಲ ಲಾಭ ಮಾತ್ರವಲ್ಲದೇ, ಜನರಿಗೆ ಉಪಯೋಗವಾಗಲಿದೆ ಎಂದು ಅಂಚೆ ಅಧೀಕ್ಷಕ ಚಂದ್ರಶೇಖರ್ ತಿಳಿಸಿದ್ದಾರೆ.
ಸೆಪ್ಟೆಂಬರ್ 11ರಿಂದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ (ಎಸ್ಜಿಬಿ)ನ 2023-24ರ ಎರಡನೇ ಸರಣಿ ಆರಂಭವಾಗಿದ್ದು, ಸೆ.15 ಕಡೆ ದಿನ. ಯಾರು ಬೇಕಾದರೂ ಬಾಂಡ್ ತೆಗೆದುಕೊಳ್ಳಬಹುದಾಗಿದ್ದು, ರೂ.5923 ದಿಂದ ಆರಂಭವಾಗಲಿದೆ.
ಆನ್‍ಲೈನ್ ಹಾಗೂ ಆನ್ ಲೈನ್‍ನಲ್ಲಿ ಅಂಚೆಕಚೇರಿಗೆ ಹೋಗಿ ಹೂಡಿಕೆ ಮಾಡಬಹುದಾಗಿದ್ದು,ಚಿನ್ನದ ರೂಪದಲ್ಲಿ ಬಾಂಡ್ ಸಿಗಲಿದೆ.ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವರಿಗೆ 50 ರೂ.ಗಳ ವಿಶೇಷ ರಿಯಾಯಿತಿಯೂ ಇದೆ. ಅಂದರೆ ನಿಮಗೆ 5,873 ರೂ.ನಲ್ಲಿ ಪ್ರತಿ ಗ್ರಾಂ ಸಾವರಿನ್ ಗೋಲ್ಡ್ ಬಾಂಡ್ ಸಿಗಲಿದ್ದು, 24 ಕ್ಯಾರೆಟ್ ಅಂದರೆ ಶೇ. 99.9 ಶುದ್ಧತೆ ಚಿನ್ನ ಇದಾಗಿದೆ. ಸಾವರಿನ್ ಗೋಲ್ಡ್ ಬಾಂಡ್ ಸರ್ಕಾರಿ ಬಾಂಡ್ ಆಗಿದೆ. ಈ ಬಾಂಡ್ ನ್ನು ಇದನ್ನು ಡಿಮ್ಯಾಟ್ ರೂಪದಲ್ಲಿ ಪರಿವರ್ತಿಸಬಹುದಾಗಿದ್ದು, ಆರ್‍ಬಿಐ ನೀಡುತ್ತದೆ.ಸಾವರಿನ್ ಗೋಲ್ಡ್ ಬಾಂಡ್ ಮೇಲಿನ ಹೂಡಿಕೆಗೆ ವಾರ್ಷಿಕ ಶೇ. 2.5ರಷ್ಟು ಬಡ್ಡಿ ಸಿಗಲಿದೆ. ಹಣದ ಅಗತ್ಯವಿದ್ದರೆ ಈ ಬಾಂಡ್ ಮೇಲೆ ಸಾಲವನ್ನೂ ಪಡೆಯಬಹುದು. ಭಾರತೀಯ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ಲಿ. ಅಂದರೆ ಐಜಿಬಿಎ ಪ್ರಕಟಿತ ದರದ ಆಧಾರದ ಮೇಲೆ ಬಾಂಡ್‍ಬೆಲೆಯನ್ನು ನಿರ್ಧರಿಸಲಾಗುತ್ತದೆ. ಇದರಲ್ಲಿ, ಚಂದಾದಾರಿಕೆ ಅವಧಿಯ ಹಿಂದಿನ ವಾರದ ಕೊನೆಯ ಮೂರು ದಿನಗಳ ಸರಾಸರಿ ದರವನ್ನು ಪರಿಗಣಿಸಲಾಗುತ್ತದೆ.
ಶುದ್ಧತೆ, ಸುರಕ್ಷತೆಯ ಚಿಂತೆ ಇಲ್ಲ : ಸಾವರಿನ್ ಗೋಲ್ಡ್ ಬಾಂಡ್‍ನ ಅನುಕೂಲಗಳಲ್ಲಿ ಇದೂ ಒಂದು. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್‍ಎಸ್‍ಇ)ಪ್ರಕಾರ ಭಾರತೀಯ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ (ಐಬಿಜೆಎ) ಪ್ರಕಟಿಸಿದ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯೊಂದಿಗೆ ಚಿನ್ನದ ಬಾಂಡ್‍ಗಳ ಬೆಲೆಯನ್ನು ನಿಗದಿಪಡಿಸಲಾಗಿದೆ. ಇದರೊಂದಿಗೆ, ಇದನ್ನು ಡಿಮ್ಯಾಟ್ ರೂಪದಲ್ಲಿ ಇರಿಸಬಹುದು. ಇದನ್ನು ಸ್ವತಃ ಆರ್‍ಬಿಐ ನೀಡುವುದರಿಂದ, ಇದು ಸಂಪೂರ್ಣ ಸುರಕ್ಷಿತವಾಗಿದೆ.
ಎಷ್ಟು ಬಡ್ಡಿ ಸಿಗುತ್ತದೆ? :
ಹೂಡಿಕೆದಾರರು ಈ ಯೋಜನೆಯ ಅಡಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ, ಜನರಿಗೆ ಅರ್ಧ ವಾರ್ಷಿಕ ಆಧಾರದ ಮೇಲೆ ನಿಗದಿತ ಬೆಲೆಯ ಮೇಲೆ ಶೇ. 2.50ಯಷ್ಟು ಬಡ್ಡಿಯನ್ನು ಸಹ ನೀಡಲಾಗುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ಮುಕ್ತಾಯ ಅವಧಿ 8 ವರ್ಷಗಳಾಗಿದ್ದು, ಐದು ವರ್ಷಗಳ ನಂತರ, ಗ್ರಾಹಕರು ಆಯ್ಕೆಯಿಂದ ಹೊರಗುಳಿಯಬಹುದು. ಈ ಮೂಲಕ ಬಾಂಡ್ ಮಾರಾಟ ಮಾಡಿ ಹಣ ಪಡೆಯಬಹುದು.
ಸಾವರಿನ್ ಗೋಲ್ಡ್ ಬಾಂಡ್ ಖರೀದಿ ಹೇಗೆ? :
ಸ್ಟಾಕ್ ಹೋಲ್ಡಿಂಗ್ ಕಾಪೆರ್Çರೇಷನ್ ಇಂಡಿಯಾ ಲಿಮಿಟೆಡ್, ಅಂಚೆ ಕಚೇರಿ ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್ಚೇಂಜ್, ಎನ್‍ಎಸ್‍ಇ ಮತ್ತು ಬಿಎಸ್‍ಇ ಮೂಲಕ ಈ ಬಾಂಡ್ ಖರೀದಿಸಬಹುದು. ಭಾರತೀಯ ನಿವಾಸಿಗಳು, ಹಿಂದೂ ಅವಿಭಜಿತ ಕುಟುಂಬಗಳು ಟ್ರಸ್ಟ್ರಿಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳು ಇದರಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿಗೆ ವರ್ಷದಲ್ಲಿ ಗರಿಷ್ಠ 4 ಕೆಜಿ ಚಿನ್ನ ಖರೀದಿಸಲು ಅವಕಾಶವಿದೆ. ಟ್ರಸ್ಟ್‍ಗಳು ಮತ್ತು ಸಂಸ್ಥೆಗಳು ಒಂದು ವರ್ಷದಲ್ಲಿ 20 ಕೆಜಿವರೆಗೂ ಚಿನ್ನವನ್ನು ಖರೀದಿಸಬಹುದು ಎಂದು ಚಂದ್ರಶೇಖರ್ ಹೇಳುತ್ತಾರೆ.