ಸುದ್ದಿವಿಜಯ,ದಾವಣಗೆರೆ : ಸಾಮಾನ್ಯವಾಗಿ ಚಿರತೆ, ಕರಡಿ, ನಾಯಿ ಹೀಗೆ ನಾನಾ ಪ್ರಾಣಿಗಳು ಮಾನವನ ಹತ್ಯೆ ಮಾಡಿರುವುದನ್ನು ನಾವು ನೀವು ಕೇಳಿದ್ದೇವೆ. ಆದರೆ ದೇವರಿಗೆ ಬಿಟ್ಟ ಕೋಣವೊಂದು ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದೆ.. ಅಷ್ಟಕ್ಕೂ ಆ ಕೋಣಕ್ಕೆ ಇದ್ದ ದ್ವೇಷದ ಬಗ್ಗೆ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.
ಪ್ರತಿಯೊಂದು ಊರಿನಲ್ಲಿ ದೇವರಿಗಾಗಿ ಕೋಣವೊಂದನ್ನು ಬಿಟ್ಟಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಂತೆ ಈ ಊರಿನಲ್ಲಿ ಸಹ ಕೋಣವನ್ನು ದೇವರಿಗಾಗಿ ಬಿಡಲಾಗಿತ್ತು. ಆದರೆ ಈ ಕೋಣದ ಆಗುಹೋಗುಗಳ ಬಗ್ಗೆ ಯಾರೊಬ್ಬರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸಿಕ್ಕಿದ್ದನ್ನು ತಿನ್ನುತ್ತಾ, ಹೊಲಗಳನ್ನು ಅಡ್ಡಾಡುತ್ತಾ ಆರಾಮವಾಗಿ ಇತ್ತು.
ಈ ನಡುವೆ ತನಗೆ ಎದುರಿಗೆ ಅಡ್ಡ ಬಂದ ಎಮ್ಮೆಗಳನ್ನು ಕಂಡ್ರೆ ಅದಕ್ಕೆ ಆಗುತ್ತಿರಲಿಲ್ಲ.ಅವುಗಳ ಮೇಲೆ ಅದು ಏರಿ ಹೋಗುತ್ತಿತ್ತು. ಮಾಲೀಕರು ಕೋಣ ಓಡಿಸಲು ಹರಸಾಹಸ ಪಡುತ್ತಿದ್ದರು. ಇದೇ ದ್ವೇಷವನ್ನು ಕೋಣ ಇಟ್ಟುಕೊಂಡಿದ್ದು, ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದೆ.
ಚನ್ನಗಿರಿ ತಾಲೂಕಿನ ಎನ್ ಬಸವನಹಳ್ಳಿ ಗ್ರಾಮದ ಕೋಣವೇ ಈ ಸ್ಟೋರಿಯ ಕಥಾನಾಯಕನಾಗಿದ್ದು, ಇದೇ ಊರಿನ ನೀರಗಂಟಿ ಜಯಣ್ಣ (48) ಎಂಬುವರನ್ನು ಹತ್ಯೆ ಮಾಡಿದೆ.ಹಿಂದೊಂದು ಕಾಲವಿತ್ತು ಎಮ್ಮೆ ಗರ್ಭಧರಿಸಲು ಕೋಣವನ್ನು ಬಿಡಲಾಗುತ್ತಿತ್ತು.
ಕಾಲ ಬದಲಾದಂತೆ ಎಮ್ಮೆ ಗರ್ಭಧರಿಸಲು ಪಶು ವೈದ್ಯರು ಎಂಜಿಕ್ಷನ್ ಕೊಡಲು ಮುಂದಾದರು. ಆದರೆ ಕೋಣ ತನ್ನ ಲೈಂಗಿಕ ದಾಹ ತೀರಿಸಿಕೊಳ್ಳಲು ಎಮ್ಮೆಗಳ ಮೇಲೆ ಎಗರುತ್ತಿತ್ತು. ಎಮ್ಮೆಗಳ ಹಿಂಡಿನ ಜೊತೆ ಸೇರಿ ಹಾಯುವುದು, ಹತ್ತುವುದನ್ನು ಈ ಕೋಣ ಮುಂದುವರಿಸಿತ್ತು.
ಈ ಕೋಣದ ಆವಾಸ ಸ್ಥಾನ ಬಸವನಹಳ್ಳಿಯಾಗಿದ್ದು ಇಲ್ಲಿ ಸಾಕಷ್ಟು ದಾಂದಲೆ ಮಾಡುತಿತ್ತು. ಅಲ್ಲದೇ ಬಸವನಹಳ್ಳಿ ಎಮ್ಮೆಗಳ ಜೊತೆ ಸೇರಿ ದಾಂದಲೆ ಮಾಡುತ್ತಿತ್ತು. ಅಷ್ಟೆ ಯಾಕೆ ಹೊಲ ಗದ್ದೆಗಳನ್ನ ನಾಶ ಪಡಿಸುತ್ತಿತ್ತು. ಅಡಕೆ, ತೆಂಗು ಗಿಡಗಳನ್ನ ಕೊಂಬಿನಿಂದ ಗುದ್ದಿ ಬೀಳಿಸುತ್ತಿತ್ತು.ಕೋಣನ ಉಪಟಳಕ್ಕೆ ಬೇಸತ್ತು ಸಿಟ್ಟಿಗೆದ್ದಿದ್ದ ಜಯಣ್ಣ ದೊಣ್ಣೆಯಿಂದ ಹೊಡೆದು ಓಡಿಸುತ್ತಿದ್ದರು.
ಆದರೂ ಮನೆ ಬಳಿ ಬಂದು ಜಯ್ಯಣ್ಣನ ಎಮ್ಮೆಗಳಿಗೆ ತೊಂದರೆ ಕೊಡ್ತಾ ಇತ್ತು. ಇದರಿಂದ ಎಮ್ಮೆ ಜೊತೆ ಸೇರಲು ಬಿಡದ ಜಯಣ್ಣನ ಮೇಲೆ ಕೋಣ ದ್ವೇಷ ಸಾಧಿಸುತ್ತಲೇ ಬರುತ್ತಿತ್ತು. ದ್ವೇಷದ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಜಯಣ್ಣನ ಮೇಲೆ ಕೋಣ ದಾಳಿ ಮಾಡಿತ್ತು. ಆದರೆ, ಅದೃಷ್ಟವಶಾತ್ ಹಿಂದಿನ ದಾಳಿಗಳಲ್ಲಿ ಜಯ್ಯಣ್ಣ ಪಾರಾಗಿದ್ದರು.
ಈ ಕೋಣ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಾಗಿದ್ದು, ದೇವರಿಗಾಗಿ ಬಿಡಲಾಗಿತ್ತು. ತಾನೇ ನಡೆದಿದ್ದೇ ದಾರಿ ಎಂದು ತನ್ನ ಪಾಡಿಗೆ ತನ್ನ ಹೋಗುತ್ತಿತ್ತು. ಆದರೆ ಎಮ್ಮೆ ಕಂಡ್ರೆ ಮಾತ್ರ ಸುಮ್ಮನೆ ಇರುತ್ತಿರಲಿಲ್ಲ. ಅಂತೆಯೇ ಈ ಕೋಣ ಬಸವನಹಳ್ಳಿಯಲ್ಲಿ ಸಾಕಷ್ಟು ದಾಂಧಲೆ ಮಾಡುತ್ತಿತ್ತು.
ಬಸವನಹಳ್ಳಿ ಎಮ್ಮೆಗಳ ಜೊತೆ ಸೇರಲು ಬಂದರೆ ಊರಿನ ನೀರಗಂಟಿಯಾಗಿದ್ದ ಜಯಣ್ಣ ದೊಣ್ಣೆಯಿಂದ ಹೊಡೆದು ಓಡಿಸುತಿದ್ದರು. ಇದರಿಂದ ಎಮ್ಮೆ ಜೊತೆ ಸೇರಲು ಬಿಡದ ಜಯಣ್ಣನ ಮೇಲೆ ಕೋಣ ದ್ವೇಷ ಸಾಧಿಸುತ್ತಿತ್ತು ಎಂಬ ಮಾತಿದೆ.
ಅಲ್ಲದೇ ಜನರ ಮೇಲೆ ಪದೇ ಪದೇ ದಾಳಿ ನಡೆಸುತ್ತಿದ್ದ ದೇವರ ಕೋಣದ ಬಗ್ಗೆ ಲಿಂಗದಹಳ್ಳಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯವಹಿಸಿದ್ದರು. ಹೀಗಿರುವಾಗ ಜಯಣ್ಣ ಜಮೀನಿನಲ್ಲಿ ಕೆಲಸ ಮಾಡುವಾಗ ಏಕಾಏಕಿ ಕೋಣ ದಾಳಿ ನಡೆಸಿದೆ. ದಾಳಿಯಲ್ಲಿ ಗಂಭೀರ ಗಾಯಗೊಂಡ ಜಯಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಒಟ್ಟಾರೆ ಕೋಣದ ದ್ವೇಷಕ್ಕೆ ವ್ಯಕ್ತಿ ಬಲಿಯಾಗಿದ್ದು ಕುಟುಂಬಸ್ಥರ ಆಂಕ್ರದನ ಮುಗಿಲು ಮುಟ್ಟಿದೆ. ಒಟ್ಟಾರೆ ಕೋಣದ ರಾಕ್ಷಸತನಕ್ಕೆ ವ್ಯಕ್ತಿ ಬಲಿಯಾಗಿದ್ದಾನೆ. ಚನ್ನಗಿರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಕೋಣವನ್ನು ಅರೆಸ್ಟ್ ಮಾಡಿದ್ದು, ಗೋ ಶಾಲೆಯಲ್ಲಿ ಕೂಡಿಹಾಕಲಾಗಿದೆ.