ಸುದ್ದಿವಿಜಯ, ದಾವಣಗೆರೆ: ಇಲ್ಲಿನ ಮಹಾಲಕ್ಷ್ಮಿ ಲೇಔಟ್‍ನ ರಶ್ಮಿ ಹಾಸ್ಟೆಲ್‍ನಲ್ಲಿ ವಾರ್ಡನ್ 4ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ್ದಾರೆ. ಹಾಸ್ಟೆಲ್ ವಾರ್ಡನ್ ಸುಮರಶ್ಮಿ ಹಲ್ಲೆ ಮಾಡಿದವರು. ಹಾಸ್ಟೆಲ್‍ನಲ್ಲಿ ಇದ್ದ ವಿದ್ಯಾರ್ಥಿನಿ ಹೂವಿನಹಡಗಲಿ ತಾಲ್ಲೂಕಿನ ಹ್ಯಾರಡ ಗ್ರಾಮದ ಹಲ್ಲೆಗೊಳಗಾದ ವಿದ್ಯಾರ್ಥಿನಿ.ಆಗಸ್ಟ್ 26ರಂದು ರಾತ್ರಿ ಕೀರ್ತನಾಗೆ ವಾರ್ಡನ್ ಬಟ್ಟೆಯನ್ನು ಒಣಗಿಹಾಕಲು ಹೇಳಿದ್ದು, ಈ ವೇಳೆ ಬಟ್ಟೆ ಒಣಗಿ ಹಾಕುವಾಗ ಗಾಳಿಗೆ ಹಾರಿ ಹೋಗಿದ್ದರಿಂದ ಕುಪಿತಗೊಂಡಿದ್ದ ವಾರ್ಡನ್ ಕೋಲಿನಿಂದ ಹೊಟ್ಟೆಯ ಕೆಳಭಾಗಕ್ಕೆ ಹೊಡೆದು ಗಾಯಗೊಳಿಸಿದ್ದಾರೆ.
ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಈ ಬಗ್ಗೆ ಮನೆಯಲ್ಲಿ ಯಾರಿಗೂ ಹೇಳಬೇಡ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಬಾಲಕಿಯ ತಂದೆ ಮಂಜಪ್ಪ ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾರೆ. ಹರಿಹರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಸಿ.ಜಿ. ಆಸ್ಪತ್ರೆಗೆ ದಾಖಲಿಸಿದ್ದಾರೆ.