ಸುದ್ದಿ ವಿಜಯ ವಿಶೇಷ, ಜಗಳೂರು: ಯಜಮಾನನ ಕುರಿಗಳ ಬಾಡಿಗಾರ್ಡ್ ಅಂದ್ರೆ ಅದು ‘ರಾಖಿ’. ಗುರ್… ಗುರ್… ಅನ್ನುತ್ತಲೇ ಜನರನ್ನು ಕುರಿಗಳ ಹತ್ತಿರಕ್ಕೂ ಬಿಡದೇ ಭಯಗೊಳಿಸುವ ಈ ಶ್ವನಕ್ಕೆ ಪ್ರೀತಿಯಿಂದ ಮಾಲೀಕ ಇಟ್ಟಿರುವ ಹೆಸರು ‘ರಾಖಿ’… ರಾಖಿ ಬಾ ಇಲ್ಲಿ ಎಂದ್ರೆ ಸಾಕು ಓಡೋಡಿ ಬರುವ ಇದು ಮಾಲೀಕನ ಅಚ್ಚುಮೆಚ್ಚಿನ ಶ್ವಾನ.
ಜಗಳೂರು ತಾಲೂಕಿನ ಲಿಂಗಣ್ಣನಹಳ್ಳಿ ಗ್ರಾಮದ ಪ್ರದೀಪ್ ಎಂಬುವರು ಸಾಕಿರುವ ಮುದೋಳದ ಶ್ವಾನ. ರಾಷ್ಟçಮಟ್ಟದಲ್ಲಿ ಮುದೋಳ ತಳಿಯ ನಾಯಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಈಗ ಈ ಹೆಣ್ಣು ನಾಯಿಯ ಮರಿಗಳಿಗೆ ಪ್ರಸ್ತುತ ಡಿಮ್ಯಾಂಡ್ ಹೆಚ್ಚಾಗುತ್ತಿದೆ.
ಹೌದು, ಮೂರು ವರ್ಷದ ಹಿಂದೆ ಒಂದು ಹೆಣ್ಣು ಮರಿಯನ್ನು 9 ಸಾವಿರಕ್ಕೆ ತಂದಿದ್ದ ಮಾಲೀಕ ಪ್ರದೀಪ್ ಅವರಿಗೆ ಈಗ ಈ ತಳಿಯ ಬಾಗಲಕೋಟೆ ಜಿಲ್ಲೆಯ ಮುದೋಳ ‘ರಾಖಿ’ ಶ್ವಾನದ ಮರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಮೂರು ವರ್ಷ ಪ್ರಾಯದ ಈ ಶ್ವಾನ ಮೊದಲ ವರ್ಷ 6 ಮರಿಗಳಿಗೆ ಜನ್ಮ ನೀಡಿತ್ತು. ಒಂದು ನಾಯಿ ಮರಿ 12 ಸಾವಿರದಂತೆ ಮಾರಾಟವಾಗಿದ್ದವು. ಆದೇಕೋ ಏನೋ ರಾಖಿ ಪರಿಸರದ ಅಸಮತೋಲನತೆಯಿಂದ ಮತ್ತು ಎರಡು ಬಾರಿ ಕಂದು ಹಾಕಿದೆ. ಇದರಿಂದ ನಾಯಿ ಮರಿಗಳಿಗೆ ಬೇಡಿಕೆಯಿಟ್ಟಿದ್ದ ಶ್ವಾನ ಪ್ರಿಯರಿಗೆ ನಿರಾಶೆಯಾಗಿದೆ.
ಜಗಳೂರು ಪಟ್ಟಣದಲ್ಲಿ ಇದೇ ತಳಿಯ ಗಂಡು ನಾಯಿ ಇದೆ. ಅದರ ಜೊತೆ ಸಹಜ ನೈಸರ್ಗಿಕ ಗರ್ಭದಾರಣೆ ಮಾಡಿಸುತ್ತಾರೆ. ಕೃತಕ ಗರ್ಭದಾರಣೆ ಮಾಡಿಸಿದರೆ ಸ್ಥಳೀಯ ನಾಯಿಗಳ ಜಿನ್ಸ್(ವಂಶವಾಹಿ) ಸೇರುತ್ತದೆ ಎನ್ನುವ ಕಾರಣಕ್ಕೆ ಈ ನಾಯಿಗೆ ನೈಸರ್ಗಿಕವಾಗಿಯೇ ಗರ್ಭದಾರಣೆ ಮಾಡಿಸಲಾಗುತ್ತಿದೆ. ಇದರ ವೇಗ ಮತ್ತು ಚುರುಕುತನಕ್ಕೆ ಮನಸೋತಿರುವ ಜನರು ಇದರ ಮರಿಗಳಿಗಾಗಿ ಕಾಯುತ್ತಿದ್ದಾರೆ.
ಬೇಟೆಯಾಡುವುದರಲ್ಲಿ ‘ರಾಖಿ’ ಫೇಮಸ್:
ರಾತ್ರಿಯ ಹೊತ್ತು ಕಾಡು ಮೊದಲ ಬೇಟೆಗೆ ರಾಖಿಯನ್ನು ಕರೆದೊಯ್ಯಲಾಗುತ್ತದೆ. ಮೊಲಗಳನ್ನು ಕಂಡರೆ ಎರಡು ಮೀಟರ್ ದೂರ ಜಿಗಿದು ‘ಚಿತ್’ ಮಾಡುವ ಗುಣವೇ ಮುದೋಳ ಶ್ವಾನದ ಚಾಣಾಕ್ಷತನ. ಕುರಿಗಳ ಬೇಟೆಗೆ ಬರುವ ತೋಳ ಮತ್ತು ಕಳ್ಳರನ್ನು ಹತ್ತಿರಕ್ಕೂ ಸುಳಿಯದೇ ರಾತ್ರಿಯಲ್ಲಾ ಎಚ್ಚರವಾಗಿದ್ದು ಕಾಪಾಡವುದು ಈ ನಾಯಿಯ ನಿಯತ್ತಾಗಿದೆ.
ಮುದೋಳ ನಾಯಿಯ ವಿಶೇಷತೆ:
ಭಾರತೀಯ ಸೇನೆಯು ಸಾಮಾನ್ಯವಾಗಿ ಜರ್ಮನ್ ಶೆಪರ್ಡ್, ಲ್ಯಾಬಡಾರ್ ಮತ್ತು ಗ್ರೇಟ್ ಸ್ವಿಸ್ ಮೌಂಟನ್ ನಂತಹ ವಿದೇಶಿ ತಳಿಗಳ ಶ್ವಾನಗಳನ್ನು ಮಾತ್ರ ಸೇರ್ಪಡೆಗೊಳಿಸಿಕೊಳ್ಳಲಾಗುತ್ತದೆ. ಆದರೆ 2017ರಲ್ಲಿ ಮೊದಲ ಬಾರಿಗೆ ನಮ್ಮ ರಾಜ್ಯದ ಹೆಸರಾಂತ ಮುದೋಳ ಶ್ವಾನ ಭಾರತೀಯ ಸೇನೆಗೆ ಸೇರಿರುವುದು ಹೆಮ್ಮೆಯ ವಿಷಯವಾಗಿದೆ.
ಕ್ರಿ.ಪೂ.500 ರಲ್ಲಿ ಈ ತಳಿಯ ನಾಯಿ ಕರ್ನಾಟಕದವರಿಗೆ ಪರಿಚಯವಾಗಿತ್ತು. ಏಷ್ಯಾ ಹಾಗೂ ಅರೇಬಿಯದಿಂದ ಹಲಗಲಿ ಬೇಡರು ತಮ್ಮ ಬೇಟೆಗಾಗಿ ಈ ನಾಯಿಯನ್ನು ಬಳಸಿಕೊಳ್ಳುತ್ತಿದ್ದರು. ಈ ತಳಿಯ ನಾಯಿಗಳಿಗೆ ಕನ್ನಡ ಮತ್ತು ಮರಾಠಿ ಭಾಷೆ ಬೇಗನೇ ಅರ್ಥಮಾಡಿಕೊಳ್ಳುತ್ತವೆ.
ಯಾವಾಗಲೂ ಗಂಭೀರವಾಗಿರುತ್ತವೆ. ಚಲ್ಲಾಟವಾಡುವುದಿಲ್ಲ. ಮಾಲೀನ ಆಜ್ಞೆಗಾಗಿ ಮಾಲೀಕನನ್ನೇ ಸೂಕ್ಷö್ಮವಾಗಿ ಗಮನಿಸುತ್ತವೆ. ಸಾದಾರಣವಾಗಿ 18 ರಿಂದ 20 ಕೆಜಿ ತೂಕುರುವ ಈ ಮುದೋಳ ತಳಿಯ ನಾಯಿಗಳ ಓಟವು ವೈಶಿಷ್ಟö್ಯತೆ ಏನೆಂದರೆ ಓಡುವುದಕ್ಕಿಂತ ಜಿಗಿಯುವುದೇ ಹೆಚ್ಚು. ಈ ರೀತಿ ಜಿಗಿಯುವುದು ಚಿರತೆ ಮಾತ್ರ. ಅದೇ ಮಾದರಿಯಲ್ಲಿ ಓಡುವ ನಾಯಿಗಳು ಬೇಟೆ ಆಡುವುದರಲ್ಲಿ ಅತಿ ಸೂಕ್ಷö್ಮ. ಅದರ ಕಣ್ಣುಗಳ ಅತ್ಯಂತ ಸೂಕ್ಷಾö್ಮತಿ ಸೂಕ್ಷö್ಮವಾಗಿರುತ್ತವೆ.
ಹೀಗಾಗಿ ಯಾವುದೇ ಬೇಟೆಯು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇಯಿಲ್ಲ. ಇತ್ತೀಚೆಗೆ ರಾಜ್ಯದ ಎಲ್ಲಾ ಕಡೆ ಮುದೋಳ ಶ್ವಾನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಲಿಂಗಣ್ಣನಹಳ್ಳಿಯ ಯುವಕ ಪ್ರದೀಪ್ ಈ ತಳಿಯ ನಾಯಿ ಸಾಕಿದ್ದು ಅದರ ಮರಿಗಳಿಗೂ ಬೇಡಿಕೆ ಹೆಚ್ಚುತ್ತಲೇ ಇದೆ.
ಇದು ನನ್ನ ಮನೆಯ ಪ್ರೀತಿಯ ನಾಯಿ. ನಾವು ಹೇಳಿದಂತೆ ಕೇಳುತ್ತದೆ. ಇದಕ್ಕೆ ಇಂತದ್ದೇ ಆಹಾರ ಬೇಕು ಅಂತಿಲ್ಲ. ಮುದ್ದೆ, ಹಾಲು, ಮಾಂಸ ಹೀಗೆ ನಾವು ತಿನ್ನುವ ಆಹಾರವನ್ನೇ ಅದು ತಿನ್ನುತ್ತದೆ. ಬೇರೆ ನಾಯಿಗಳಿಗಿಂತ ಅತಿಯಾಗಿ ಓಡುತ್ತದೆ. ಬೇರೆ ಶ್ವಾನಗಳ ಜೊತೆ ಹೋಗುವುದಿಲ್ಲ. ನಿಯತ್ತಿಗೆ ಇದು ಹೆಸರಾಗಿದೆ.
–ಪ್ರದೀಪ್, ಮುದೋಳ ತಳಿ ಶ್ವಾನದ ಮಾಲೀಕ
ದೇಶದ ಯಾವುದೇ ಹವಮಾನಕ್ಕೂ ಹೊಂದಿಕೊಳ್ಳುವ ಜಾತಿ ಶ್ವಾನ ಎಂದರೆ ಅದು ಮುದೋಳ ನಾಯಿ ಮಾತ್ರ. ಅದರ ಕಣ್ಣುಗಳ ಅತ್ಯಂತ ಸೂಕ್ಷö್ಮವಾದುದು. ಈ ಜಿನ್‌ನ ನಾಯಿಗೆ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಈ ತಳಿಯ ನಾಯಿಗಳ ಆಯಸ್ಸು ಸುಮಾರು 13 ರಿಂದ 14 ವರ್ಷ. ಒಟ್ಟು 18 ತಿಂಗಳಲ್ಲಿ ಈ ನಾಯಿ ಪೂರ್ಣ ಬೆಳವಣಿಗೆಯಾಗುತ್ತದೆ. ನಾಯಿಯ ಒಟ್ಟು ಮೆ`ಕಟ್ಟು 1.8 ರೊಂದ 2.3 ಅಡಿಗಳಷ್ಟು. ಇದರ ವೇಗ ಮತ್ತು ಸೂಕ್ಷö್ಮತೆ ಬೇರೆ ನಾಯಿಗಳಿಗಿಂತೂ ಹೆಚ್ಚು. ಅಷ್ಟೇ ಅಲ್ಲ ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ಕಾರಣ ಮರಿಗಳಿಗೆ ಹೆಚ್ಚು ಡಿಮ್ಯಾಂಡ್ ಬರುತ್ತಿದೆ.
-ಡಾ.ಶಾಂತಕುಮಾರ್, ಪಶುವೈದ್ಯ ಪರೀಕ್ಷಕರು, ಜಗಳೂರು