ಸುದ್ದಿವಿಜಯ, ಜಗಳೂರು: ಬರುವ ಫೆ.25ರಂದು ಅದ್ಧೂರಿಯಾಗಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸೋಮವಾರ ನಡೆದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆ ಹಾಗೂ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಬಯಲು ರಂಗಮಂದಿರಲ್ಲಿ ಪುಸ್ತಕಮಳಿಗೆ, ಆಹಾರ, ಸ್ವಾಗತ, ಹಣಕಾಸು, ಮೆರವಣಿಗೆ ಸೇರಿದಂತೆ ತಲಾ 10 ಜನರ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು. ಸಮಿತಿಗೆ ಶಾಸಕ ಎಸ್.ವಿ.ರಾಮಚಂದ್ರ ಅವರು ಅಧ್ಯಕ್ಷತೆವಹಿಸುವರು.
ಕಾರ್ಯಕಾರಿ ಸಮಿತಿಯಲ್ಲಿ ತಹಶೀಲ್ದಾರ್, ತಾ.ಪಂ ಇಓ, ಪೊಲೀಸ್ ವೃತ್ತ ನಿರೀಕ್ಷಕ, ಬಿಇಓ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಜವಾಬ್ದಾರಿ ಹೊಂದಿರುತ್ತಾರೆ.
ಕನ್ನಡ ಎಲ್ಲಾ ವರ್ಗದ ಆಸ್ತಿ,ಪ್ರತಿಯೊಬ್ಬರೂ ಕೈಜೋಡಿಸಬೇಕು.ಜಿಲ್ಲೆಯ ನೀರಾವರಿ ಸಂಪನ್ಮೂಲವಿರುವ ಕೆಲ ತಾಲೂಕು ಗಳಲ್ಲಿ ಆರ್ಥಿಕ ಅಡಚಣೆವಿಲ್ಲ. ಆದರೆ ಬರದನಾಡಿನಲ್ಲಿ ಕಾರ್ಮಿಕ, ರೈತ, ಬಡ ಕೂಲಿಕಾರ್ಮಿಕರಿಂದ, ಕನ್ನಡಪರ ಅಭಿಮಾನಿಗಳಿಂದ ದೇಣಿಗೆ ಸಂಗ್ರಹಣೆ ಅಗತ್ಯವಿದೆ ಎಂದು ಚರ್ಚಿಸಿದರು.
ಪ್ರಾಂಶುಪಾಲ ನಾಗಲಿಂಗಪ್ಪ ಮಾತನಾಡಿ,ಕಸಾಪ ಸಾಹಿತ್ಯ ಸಮ್ಮೇಳನದಲ್ಲಿ ಯುವಕರಿಗೆ ಆದ್ಯತೆಕೊಡಿ,ಕಾರ್ಯಕ್ರಮ ಕೇವಲ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೀಮಿತವಾಗದೆ ಕನ್ನಡ ಹಬ್ಬವಾಗಲಿ,ವಿದ್ಯಾರ್ಥಿಯುವಜನರ,ರೈತಕಾರ್ಮಿಕರ ಸಮಸ್ಯೆಗಳನ್ನು ,ಜನಸಾಮಾನ್ಯರ ಬದುಕಿಗೆ ಸಾಮ್ಯತೆ ಹೊಂದುವ ಗೋಷ್ಠಿಯಾಗಬೇಕು ಎಂದರು.
ತಹಶೀಲ್ದಾರ್ ಸಂತೋಷ್ ಕುಮಾರ ಮಾತನಾಡಿ,ಎಲ್ಲರ ಅಭಿಪ್ರಾಯದಂತೆ ಶಾಸಕರ ಅನುಪಸ್ಥಿತಿಯಲ್ಲಿ ತುರ್ತಾಗಿ ಕಸಾಪ ತಾಲೂಕು ಸಮ್ಮೇಳನದಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ತಮ್ಮಸಮಿತಿಗಳ ಸಲಹೆಯಂತೆ ನಾವು ಬದ್ದವಾಗಿದ್ದೇವೆ. ತಾಲೂಕಿನ ಸಮಾಜ, ಸಂಘಟನೆ, ಸಾಹಿತ್ಯಾಭಿಮಾನಿಗಳನ್ನು ಒಳಗೊಂಡು ಜವಾಬ್ದಾರಿವಹಿಸಿದರೆ ಕಾರ್ಯಕ್ರಮ ಅನುಷ್ಠಾನ ಸಾಧ್ಯ. ಮನಸ್ಥಾಪಗಳು ಆಗಮಿಸದಂತೆ ನೋಡಿಕೊಳ್ಳೋಣ ಎಂದರು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ ,ಜಾತ್ಯಾತೀತವಾಗಿ ಯೋಗ್ಯತೆ ಅರ್ಹತೆ ಇರುವ ಸಾಧಕರಿಗೆ ಪ್ರಶಸ್ತಿಗೆ ಭಾಜನರಾಗಲಿ,ಚುನಾವಣೆ ಒತ್ತಡ ಮಧ್ಯೆ ಅದ್ದೂರಿಯಾಗಿ ಆಚರಿಸೋಣ ನೌಕರರ ಸಂಘದಿಂದ ತನುಮನ ಧನ ಸಹಾಯ ವಿದೆ ಎಂದರು.
ಕಸಾಪ ಅಧ್ಯಕ್ಷೆ ಸುಜಾತಮ್ಮ ಮಾತನಾಡಿ,ಕನ್ನಡದ ಪರಿಚಾರಕಿಯಾಗಿ ಭುವನೇಶ್ವರಿ ತಾಯಿ ಸೇವೆ ಗೈಯಲು ಮುಂದಾಗಿರುವೆ. ತಾಲೂಕು ಸಮ್ಮೇಳನದ ಯಶಸ್ವಿಗೆ ಸರ್ವ ಸಂಘಸಂಸ್ಥೆಗಳ ಸಹೋದರ ಸಹೋದರಿಯರು ಕೈಜೋಡಿಸಬೇಕು.
ಸಮ್ಮೇಳನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅನುದಾನ 1 ಲಕ್ಷ ರೂ ಮಾತ್ರ ಲಭ್ಯವಿದ್ದು. ಸಮ್ಮೇಳನಕ್ಕೆ ಹೆಚ್ಚಿನ ಆರ್ಥಿಕ ಸಂಪನ್ಮೂಲದ ಅಗತ್ಯವಿದೆ. ಸಂಘಸಂಸ್ಥೆ,ಅಧಿಕಾರಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ.ಪಂ ಮುಖ್ಯಾಧಿಕಾರಿ ಲೊಕ್ಯಾನಾಯ್ಕ,ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ಪ್ರಾಂಶುಪಾಲ ಬಿ. ನಾಗಲಿಂಗಪ್ಪ, ಪ.ಪಂ ಸದಸ್ಯ ಲುಕ್ಮಾನ್ ಖಾನ್, ಸಾಹಿತಿ ಗೀತಾ ಮಂಜು,
ಕಸಾಪ ಸದಸ್ಯ ಕೃಷ್ಣ ಮೂರ್ತಿ, ರವಿಕುಮಾರ್, ಗೌರಮ್ಮ, ಹಿರಿಯ ನಾಗರಿಕ, ವೀರಸ್ವಾಮಿ, ಸಂಘದ ತಾಲೂಕು ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಮಹಾಲಿಂಗಪ್ಪ, ಕುಮಾರ್, ಮಲೆಮಾಚಿಕೆರೆ ಸತೀಶ್, ತಾಲೂಕು ಮಟ್ಟದ ಅಧಿಕಾರಿಗಳಾದ ವೆಂಕಟೇಶ್ ಮೂರ್ತಿ, ಮಿಥುನ್ ಕಿಮಾವತ್ ಸೇರಿ ಅನೇಕರು ಇದ್ದರು.