ಸುದ್ದಿವಿಜಯ:ಜಗಳೂರು: ಬಿಜೆಪಿ ಜನ ಸಂಕಲ್ಪ ಯಾತ್ರೆ ಇದೇ ನ.23ರಂದು ಬುಧವಾರ ಜಗಳೂರಿನ ಬಯಲು ರಂಗ ಮಂದಿರದಲ್ಲಿ ನಡೆಯಲಿದ್ದು 35 ಸಾವಿರ ಜನ ಕೂರಲು ಬೃಹತ್ ವೇದಿಕೆ ಸಿದ್ಧವಾಗಿದೆ.
ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿಜೆಪಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಗೆ ಸೆಡ್ಡು ಹೊಡೆದು ರಾಜ್ಯದಾದ್ಯಂತ ಜನ ಸಂಕಲ್ಪ ಯಾತ್ರೆ ಮಾಡಲು ತೀರ್ಮಾನಿಸಿದ್ದು ಕಳೆದ ತಿಂಗಳಿಂದ ಈಗಾಗಲೇ ರಾಜ್ಯದಾದ್ಯಂತ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆಯ ಮೂಲಕ ತಮ್ಮ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಜನತೆಯ ಮುಂದಿಡಲು ತೀರ್ಮಾನಿಸಿದೆ.

ಹೀಗಾಗಿ ನ.23ರಂದು ಜಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಅನೇಕ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದ್ದಾರೆ.
ಎರಡನೇ ಬೃಹತ್ ಕಾರ್ಯಕ್ರಮ: ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಿ.ಎಂ.ಯಡಿಯೂರಪ್ಪ ಸೇರಿದಂತೆ ಅನೇಕ ಸಚಿವರನ್ನು ಕರೆಸಿ 1336 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ್ದ ಶಾಸಕ ಎಸ್.ವಿ.ರಾಮಚಂದ್ರ ಈ ಭಾರಿ ಮತ್ತೆ ದೊಡ್ಡ ಕಾರ್ಯಕ್ರಮ ಮಾಡುವ ಮೂಲಕ ಕ್ಷೇತ್ರದಲ್ಲಿ ಕಮಲ ಹರಳಿಸಲು ಸಿದ್ಧವಾಗಿದ್ದಾರೆ.

ಕೇಸರಿ ಕಮಾಲ್: ಮೊಳಕಾಲ್ಮೂರು-ಮಲ್ಪೆ ರಾಜ್ಯ ಹೆದ್ದಾರಿ, ಜಗಳೂರು-ಚಿತ್ರದುರ್ಗ ರಸ್ತೆ ಸೇರಿದಂತೆ ಪಟ್ಟಣದ ಮುಖ್ಯ ರಸ್ತೆಗಳ ಪಕ್ಕದಲ್ಲಿ ಕೇಸರಿ ಬಣ್ಣದ ಬಿಜೆಪಿ ಧ್ವಜ ಸ್ತಂಭಗಳು ರಾರಾಜಿಸುತ್ತಿವೆ. ಬೊಮ್ಮಾಯಿ, ಬಿಎಸ್‍ವೈ ಸೇರಿದಂತೆ ಸಚಿವರ ಜೊತೆ ಶಾಸಕ ರಾಮಚಂದ್ರ ಅವರ ಫ್ಲಕ್ಸ್‍ಗಳು ಇಡೀ ಪಟ್ಟಣವನ್ನೇ ಕೇಸರಿ ಮಯವನ್ನಾಗಿಸಿವೆ. ಎಲ್ಲಿ ನೋಡಿದರೂ ಫ್ಲಕ್ಸ್, ಬ್ಯಾನರ್‍ಗಳು ಸದ್ದು ಮಾಡುತ್ತಿವೆ.
ಬೃಹತ್ ವೇದಿಕೆ: ಗಣ್ಯಾತಿ ಗಣ್ಯರು ಬಂದು ಕೂರುವ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಜೊತೆಗೆ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಬೃಹತ್ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಜನರು ಬಿಸಿಲಿನಿಂದ ಬಸವಳಿಯಬಾರದು ಎಂಬ ಕಾರಣಕ್ಕೆ ದೊಡ್ಡ ನೆರಳಿನ ವ್ಯವಸ್ಥೆಯ ಪೆಂಡಾಲ್ ಹಾಕಲಾಗಿದೆ. ಬಂದೋಬಸ್ತ್‍ಗಾಗಿ ಹೆಚ್ಚಿನ ಪೆÇಲೀಸರನ್ನು ನಿಯೋಜನೆ ಮಾಡಲಾಗಿದೆ.
ಸಾಂಸ್ಕøತಿಕ ಕಾರ್ಯಕ್ರಮ: ಬುಧವಾರ ಸಂಚೆ ಜನರನ್ನು ಮನರಂಜಿಸಲು ಶಾಸಕ ಎಸ್.ವಿ.ರಾಮಚಂದ್ರ ಮುಂದಾಗಿದ್ದಾರೆ. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ನೇತೃತ್ವದಲ್ಲಿ ಅನೇಕ ಗಾಯಕರು ಕನ್ನಡದ ಹಾಡುಗಳನ್ನು ಹಾಡಲು ಬರುತ್ತಿದ್ದಾರೆ. ಖ್ಯಾತ ಗಾಯಕಿ ಶ್ರಯಾಘೋಷಾಲ್, ಶಮಿತಾ ಮಲ್ನಾಡ್, ಕಲಾವತಿ ಸೇರಿದಂತೆ ಅನೇಕ ಗಾಯಕ, ಗಾಯಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಭದ್ರತೆ ಮೂಲಸೌಕರ್ಯ ವೃದ್ಧಿ: ಪಟ್ಟಣದ ಅನೇಕ ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳನ್ನು ಭರ್ತಿ ಮಾಡಲಾಗಿದೆ. ತಾಲೂಕು ಕ್ರೀಡಾಂಗಣದಲ್ಲಿ ಎರಡು ಹೆಲಿಕಾಪ್ಟರ್ ನಿಲ್ಲುಂತೆ ಮಾಡಲು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಗಣ್ಯಾತಿ ಗಣ್ಯರು ತಂಗುವ ವಿಐಪಿ ವಸತಿ ಗೃಹಗಳಲ್ಲಿ ಸಚ್ಛತೆ, ನೈರ್ಮಲ್ಯ ಸೇರಿದಂತೆ ಅನೇಕ ಜಾವಬ್ದಾರಿಗಳನ್ನು ಆಯಾ ಇಲಾಖೆಗಳ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.