ಜನ ಸಾಮಾನ್ಯರಿಗೆ ಸ್ಪಂದಿಸುವ ಪಕ್ಷ ಕಾಂಗ್ರೆಸ್: ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ

Suddivijaya
Suddivijaya March 15, 2023
Updated 2023/03/15 at 1:41 PM

ಸುದ್ದಿವಿಜಯ, ಜಗಳೂರು: ಬಡವರ, ಶ್ರೀ ಸಾಮಾನ್ಯರ, ದೀನ ದಲಿತರ ಸಮಸ್ಯೆಗಳಿಗೆ ಸ್ಪಂದಿಸಿ ಸಹಕಾರ ನೀಡುವಂತಹ ಏಕೈಕ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಎಂದು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.

ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವ ಯೋಜನೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿ ಮಾತನಾಡಿದರು. ಈ ಹಿಂದೆ ಕಾಂಗ್ರೆಸ್ ಪಕ್ಷದ ಅಧಿಕಾರ ಅವದಿಯಲ್ಲಿ ಮುಖ್ಯಮಂತ್ರಿ ಯಾಗಿದ್ದ ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರು ನುಡಿದಂತೆ ನೆಡೆಯುವ ಮೂಲಕ ಕೊಟ್ಟ ಭರವಸೆಯನ್ನು ಈಡೇರಿಸಿದ್ದರು ಆದರೆ ಬಿಜೆಪಿ ಸರಕಾರ ಕೇವಲ ಸುಳ್ಳು ಭರವಸೆ ನೀಡುವ ಮೂಲಕ ಜನಸಾಮಾನ್ಯರನ್ನ ವಂಚಿಸಿದ್ದಾರೆ ಎಂದು ಹರಿಹಾಯ್ದರು.

ನಮ್ಮ ಸರಕಾರದ ಅಧಿಕಾರಕ್ಕೆ ಬಂದರೆ ಪ್ರಮುಖ ಯೋಜನೆಗಳಾದ ಬಿ.ಪಿ.ಎಲ್.ಕುಟುಂಬಕ್ಕೆ 10 ಕೆ.ಜಿ.ಅಕ್ಕಿ , 200 ಯುನಿಟ್ ಉಚಿತ ವಿದ್ಯುತ್ ಕುಟುಂಬ ಮಹಿಳೆಗೆ ತಿಂಗಳು 2000 ಸಹಾಯಧನ ನೀಡುವಂತ ಯೋಜನೆ ಜಾರಿಗೆ ತರಲಾಗಿದೆ ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

  ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಗ್ಯಾರಂಟಿ ಕಾರ್ಡ್ ವಿತರಿಸಿದರು.
  ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಗ್ಯಾರಂಟಿ ಕಾರ್ಡ್ ವಿತರಿಸಿದರು.

ಈಗಿನ ಶಾಸಕರು ಕ್ಷೇತ್ರದಲ್ಲಿ ಒಂದೇ ಒಂದು ಮನೆ ಕೊಡಲಾಗಿಲ್ಲ. ರೈತರಿಗೆ ಒಂದು ಸೌಲಭ್ಯವಾಗಲಿ, ನೀರಾವರಿ ಸೌಲಭ್ಯವಾಗಲಿ ಮಾಡಲು ಸಾಧ್ಯವಾಗಿಲ್ಲ. ಇಂತಹ ಸುಳ್ಳು ಹೇಳುವಂತಹ ಜನಪ್ರತಿನಿಧಿಗಳನ್ನ ಸೋಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್, ಕೆಪಿಸಿಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷರು ಕೆ.ಪಿ.ಪಾಲಯ್ಯ ಸೇರಿದಂತೆ ನಾನು ಸಹ ಪ್ರಭಲ ಆಕಾಂಕ್ಷಿಗಳು ಇದ್ದೇವೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರೇಮಲ್ಲನಹೊಳೆ ಗ್ರಾಮ ಪಂಚಾಯತಿ ಅದ್ಯಕ್ಷೆ ಶಿವರುದ್ರಮ್ಮ , ಉಪಾಧ್ಯಕ್ಷರು ಅನೂಪ್ ರೆಡ್ಡಿ ಹಾಲೇಹಳ್ಳಿ ಬಿ.ಟಿ.ಮಂಜುನಾಥ್ ರೆಡ್ಡಿ ಸದಸ್ಯರಾದ ಶಿವಣ್ಣ , ರಂಗಪ್ಪ , ಮುಖಂಡರಾದ ಪ್ರಕಾಶ್ ರೆಡ್ಡಿ , ಕೃಷ್ಷಪ್ಪ , ಪೂವಕ್ ನಾಗರಾಜ್ , ಮಾರುತಿ , ಆದರ್ಶ ರೆಡ್ಡಿ , ಬಾಲರಾಜ್ ವಸಂತ್ , ತಿಪ್ಪೇಸ್ವಾಮಿ , ಮಹೇಶ್ , ಮೈಲಾರಿ , ಸೇರಿದಂತೆ ಹಲವರು ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!