ಸುದ್ದಿವಿಜಯ, ಜಗಳೂರು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಲಬುರಗಿಯ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಪಟ್ಟಣದ ಮಹಾತ್ಮಾ ಗಾಂಧೀ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪಟಾಕಿಸಿಡಿಸಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಪಿ.ಪಾಲಯ್ಯ, ಸಂಸದ ಶಶಿತರೂರ್ ಎದುರು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧಿಸಿದ್ದು ಕನ್ನಡಿಗೊಬ್ಬರು ಎಐಸಿಸಿ ಸ್ಥಾನಕ್ಕೇರಿರುವುದು ಅತ್ಯಂತ ಸಂಭ್ರಮದ ಕ್ಷಣವಾಗಿದೆ.
55 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲೇ ಇರುವ ಖರ್ಗೆ ಅವರು ಪಕ್ಷಕ್ಕಾಗಿ ದುಡಿದು ರಾಜ್ಯ ವಿರೋಧ ಪಕ್ಷದ ನಾಯಕರಾಗಿ, ಕೇಂದ್ರ ವಿರೋಧ ವಿಪಕ್ಷ ನಾಯಕರಾಗಿ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಅವರ ಕಾಯಕ ನಿಷ್ಠೆಯನ್ನು ಗುರುತಿಸಿ ಎಐಸಿಸಿ ಐಕಮಾಂಡ್ ಅಂತರಿಕ ಚುನಾವಣೆ ನಡೆಸುವ ಮೂಲಕ 7897 ಮತಗಳಿಂದ ಖರ್ಗೆ ಆಯ್ಕೆ ಮಾಡಿದ್ದು ಪಕ್ಷದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆ ಬಲವಾಗಿ ಬೇರೂರಿರುವುದು ಸಾಕ್ಷಿಯಾಗಿದೆ. ಭವಿಷ್ಯದಲ್ಲಿ ಖರ್ಗೆ ಪ್ರಧಾನಿ ಸ್ಥಾನಕ್ಕೇರುವುದರಲ್ಲಿ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷಿರ್ ಅಹ್ಮದ್ ಖಾನ್ ಮಾತನಾಡಿ, ವಿಪಕ್ಷಗಳು ನಮ್ಮ ಪಕ್ಷದ ಅಂತರೀಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದವು. ಆದರೆ ಪ್ರಸ್ತುತ ನಡೆದ ಆಂತರೀಕ ಚುನಾವಣೆಯಲ್ಲಿ ಸಂಸದ ಶಶಿತರೂರ್ ಎದುರು ಗೆಲುವು ಸಾಧಿಸಿರುವ ಖರ್ಗೆ ಅವರಿಗೆ ಕಾರ್ಯಕರ್ತರೆಲ್ಲರೂ ಅಭಿನಂದನೆ ಸಲ್ಲಿಸುತ್ತೇವೆ.
ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಖರ್ಗೆ ಗೆಲುವು ಪಕ್ಷದಲ್ಲಿ ವಿದ್ಯುತ್ ಸಂಚಲ ಮೂಡಿಸಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಕಾರ್ಯಕರ್ತರಾದ ಲಕ್ಷ್ಮಣ, ವೆಂಕಟೇಶ್, ಸುರೇಶ್ ನಾಯ್ಕ, ಕುಬೇರಪ್ಪ, ರುದ್ರೇಶ್, ರಮೇಶ್, ಮುಸ್ಟೂರು ಪುಟ್ಟಣ್ಣ, ವಿಜಯ ಕೆಂಚೋಳ್, ಗೊಲ್ಲರಹಟ್ಟಿ ರಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಖರ್ಗೆ ಗೆಲುವಿಗೆ ಸಂಭ್ರಮಿಸಿದರು.