ಸುದ್ದಿವಿಜಯ ಜಗಳೂರು.ತಾಲೂಕಿನ ಬಸವನಕೋಟೆ ಗ್ರಾಮದ ಬೀದಿಗಳಲ್ಲಿ ಚರಂಡಿ ಸ್ವಚ್ಛತೆ ಮಾಡುತ್ತಿದ್ದ ಇಬ್ಬರು ಕೂಲಿಕಾರರು ಅಸ್ವಸ್ಥಗೊಂಡು ಸೋಮವಾರ ನಡೆದಿದ್ದು ಅನುಮಾನ ಮೂಡಿಸಿದೆ.
ಗ್ರಾಮದ ಸತ್ಯಪ್ಪ(50), ಮೈಲಪ್ಪ(41) ಮೃತ ಕೂಲಿಕಾರ್ಮಿಕರು.
ಬಸವನಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯುಗಾದಿ ಹಬ್ಬದ ಹಿನ್ನೆಲೆ ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಲು ಮೃತರಿಬ್ಬರಿಗೆ ಕೆಲಸಕ್ಕೆ ಕಳಿಸಲಾಗಿತ್ತು.
ಹೊಸ ಸಂವತ್ಸರದ ಅಮಾವಾಸ್ಯೆಯ ಮುನ್ನಾದಿನವೇ ಈ ಘೋರ ದುರಂತ ಮೃತ ಸಂತ್ರಸ್ತರ ಕುಟುಂಬಗಳಿಗೆ ಬರ ಸಿಡಿಲು ಬಡಿದಂತಾಗಿದೆ.
ಈ ಇಬ್ಬರು ಮಧ್ಯೆ ಸೇವನೆ ಮಾಡಿ ಕೆಲಸ ಹೋಗಿದ್ದಾರೆ. ಮಧ್ಯಾಹ್ನದ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡು ತುಂಬ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಸಮೀಪದ ಅರಸಿಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಆದರೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಶೀಧರ್ ಪಟೇಲ್ ಅವರ ನಿರ್ಲಕ್ಷ ತೋರಿದ್ದಾರೆ. ಕಚೇರಿಗೆ ಬೇಕಾಬಿಟ್ಟಿಯಾಗಿ ಬರುತ್ತಿದ್ದು ಎಲ್ಲಾ ಜವಾಬ್ದಾರಿಯನ್ನು ಸಿಬ್ಬಂದಿಗಳ ಮೇಲೆ ಹಾಕುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆಗೆ ಕುಟುಂಬಸ್ಥರು ಖಂಡಿಸಿದ್ದು ಸಾವಿನ ಬಗ್ಗೆ ಅನುಮಾನವಿದೆ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.