ಜಗಳೂರು: ವಿವಿಧ ಯೋಜನೆಗಳನ್ನು ಗುತ್ತಿಗೆ ನೀಡುವ ವಿಚಾರ-ಬೆಸ್ಕಾಂ ಎಇಇ, ಗುತ್ತಿಗೆದಾರರ ಮಧ್ಯೆ ಮಾತಿನ ಚಕಮಕಿ!

Suddivijaya
Suddivijaya September 16, 2022
Updated 2022/09/16 at 5:53 AM

ಸುದ್ದಿವಿಜಯ, ಜಗಳೂರು: ವಿವಿಧ ಯೋಜನೆಗಳನ್ನು ಗುತ್ತಿಗೆ ನೀಡುವ ವಿಚಾರದಲ್ಲಿ ಪಟ್ಟಣದ ಬೆಸ್ಕಾಂ ಎಇಇ ಎಚ್.ಗಿರೀಶ್ ನಾಯ್ಕ ಮತ್ತು ಕೆಪಿಟಿಸಿಎಲ್‍ನ 22 ಗುತ್ತಿಗೆದಾರರ ಮಧ್ಯೆ ಗುರುವಾರ ಮಾತಿನ ಚಕಮಕಿ ನಡೆದು ಏಕ ವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಇಂಧನ ಮತ್ತು ಕನ್ನಡ ಮತ್ತು ಸಂಸ್ಕøತಿ ಸಚಿವರ ಆದೇಶದಂತೆ ಕೆಪಿಟಿಸಿಎಲ್‍ನಲ್ಲಿ ಐದು ಲಕ್ಷ ರೂ ಮೀರದ ಕುಡಿಯುವ ನೀರು ಯೋಜನೆಯ ವಿದ್ಯುದ್ದೀಕರಣದ ಮೂಲ ಸೌಲಭ್ಯ ಕಾಮಗಾರಿಗಳಿಗೆ ರಾಜ್ಯ ಸಂಚಿತ ನಿಧಿಯಿಂದ ಅನುದಾನವನ್ನು ಸ್ವೀಕರಿಸುವ ಸಂಗ್ರಹ ಘಟಕದ ಕಾಯ್ದೆಯ ವಿನಾಯಿತಿನೀಡಲಾಗಿದೆ.

ಐದು ಲಕ್ಷ ರೂ. ಮೀರದ ನಿರ್ಮಾಣ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ಸಚಿವರ ಆದೇಶವನ್ನು ಉಲ್ಲಂಘಿಸಿ ಎಇಇ ಗಿರೀಶ್ ನಾಯ್ಕ ಅವರು ತಮಗೆ ಅನುಕೂಲವಾಗುವಂತೆ ದಾವಣಗೆರೆ ತಾಲೂಕಿನ ಗುತ್ತಿಗೆದಾರೊಬ್ಬರಿಗೆ ಗಂಗಾ ಕಲ್ಯಾಣ ಮತ್ತು ಬೆಳಕು ಯೋಜನೆಯ ಕಾಮಗಾರಿಗಳನ್ನು ಒಬ್ಬರಿಗೆ ಗುತ್ತಿಗೆ ನೀಡಿದ್ದಾರೆ ಎಂದು ಕೆಪಿಟಿಸಿಎಲ್ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ್ ಸೇರಿದಂತೆ 22 ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದರು.

 ಜಗಳೂರು ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಗುತ್ತಿಗೆದಾರರ ಮತ್ತು ಎಇಇ ಗಿರೀಶ್ ನಾಯ್ಕ ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು.
 ಜಗಳೂರು ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಗುತ್ತಿಗೆದಾರರ ಮತ್ತು ಎಇಇ ಗಿರೀಶ್ ನಾಯ್ಕ ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಒಂದು ಲಕ್ಷದಿಂದ 5 ಲಕ್ಷದವರೆಗೆ ಸ್ಥಳೀಯ ಗುತ್ತಿಗೆ ದಾರರಿಗೆ ನೀಡಬೇಕು ಎಂದು ಸಚಿವರ ಆದೇಶದಂತೆ ಪ್ರಧಾನ ವ್ಯವಸ್ಥಾಪಕಾರದ ಟಿ.ಎಂ. ಶಿವಪ್ರಕಾಶ್ ಅವರು ಗೆಜೆಟ್ ನೋಟಿಫಿಕೇಷ್ ಹೊರಡಿಸಿದ್ದಾರೆ. ಈ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೇ ತಾಲೂಕಿನಲ್ಲಿ ಕೊರೆಸಲಾಗಿರುವ ಗಂಗಾ ಕಲ್ಯಾಣ ಯೋಜನೆಯ 83 ಕಾಮಗಾರಿಗಳಲ್ಲಿ ಕೇವಲ ಐದು ಮಾತ್ರ ಸ್ಥಳೀಯವಾಗಿ ನೀಡಿದ್ದಾರೆ. ಉಳಿದ 78 ಕಾಮಗಾರಿಗಳನ್ನು ತಮಗೆ ಬೇಕಾದವರಿಗೆ ಎಇಇ ಗಿರೀಶ್ ನಾಯ್ಕ ಅವರು ಗುತ್ತಿಗೆ ನೀಡಲು ಹೊರಟಿದ್ದಾರೆ. ಇದರ ಬಗ್ಗೆ ಕೇಳಿದರೆ ದೌರ್ಜನ್ಯ ಮಾಡುತ್ತಾರೆ.

ಸರಕಾರದ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ದಾವಣಗೆರೆ ಕೆಪಿಟಿಸಿಎಲ್ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ ಆದರೂ ಇವರು ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಗುತ್ತಿಗೆದಾರ ಸನಾವುಲ್ಲ ಮಾತನಾಡಿ, ಸರಕಾರಿ ಆದೇಶವನ್ನು ಅವರು ಉಲ್ಲಂಘಿಸಿ ಎಇಇ ಅವರು ನಮಗೆ ಗುತ್ತಿಗೆ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ನಾವು ಗುತ್ತಿಗೆ ಕೆಲಸ ಮಾಡುತ್ತೇವೆ ಎಂದು ಮುಂದೆ ಬಂದರೂ ಇಲ್ಲ ಸಲ್ಲದ ನಿಯಮಗಳನ್ನು ಹೇರುತ್ತಾರೆ. ಕಾಮಗಾರಿಗಳನ್ನು ಒಬ್ಬರಿಗೆ ಗುತ್ತಿಗೆ ಕೊಡುವ ಅವರ ಉದ್ದೇಶವಾದರು ಏನು ಎಂದು ಸ್ಪಷ್ಟಪಡಿಸಬೇಕು. ಬೇರೆ ತಾಲೂಕಿನವರಿಗೆ ಗುತ್ತಿಗೆ ನೀಡಿ ಪರ್ಸೆಂಟೇಜ್ ಪಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪ ಮಾಡಿದರು.

ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ಗುತ್ತಿಗೆ ನೀಡಿ ಎಂದು ಎಇಇ ಗಿರೀಶ್ ನಾಯ್ಕ ಅವರಿಗೆ ಸೂಚನೆ ನೀಡಿದ್ದೇನೆ. ಆದರೂ ಅವರು ಈ ರೀತಿ ಮಾಡಿದ್ದಾರೆ ಎಂಬ ಮಾಹಿತಿ ನನಗೆ ತಿಳಿದಿರಲಿಲ್ಲ. ವಿಧಾನಸಭೆ ಕಲಾಪ ಮುಗಿದ ತಕ್ಷಣ ಶನಿವಾರ ಜಗಳೂರಿಗೆ ಆಗಮಿಸಿ ಸಮಸ್ಯೆ ಏನೆಂದು ಗಮನ ಹರಿಸುತ್ತೇನೆ.

-ಎಸ್.ವಿ.ರಾಮಚಂದ್ರ, ಶಾಸಕ ಜಗಳೂರು

ಕೆಲಸ ಮಾಡಿ ಎಂದರೆ ಬಾರದ ಗುತ್ತಿಗೆದಾರರು ಏಕಾ ಏಕಿ ಗುಂಪುಕಟ್ಟಿಕೊಂಡು ಬಂದು ಕೆಲಸ ಮಾಡಲು ಬಿಡುತ್ತಿಲ್ಲ. ವೈಯಕ್ತಿಕವಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಎಲ್ಲ ಕಾಮಗಾರಿಗಳನ್ನು ದಾವಣಗೆರೆ ಮೂಲದ ಗುತ್ತಿಗೆದಾರರಿಗೆ ನೀಡಿದ್ದೇನೆ ಎಂಬ ಆರೋಪ ಸುಳ್ಳು. ನನ್ನ ಮೇಲೆ ಇವರೆಲ್ಲ ಸೇರಿ ದೌರ್ಜನ್ಯ ಮಾಡುತ್ತಿದ್ದಾರೆ. ಈಗಲು ಅವರು ಕಾಮಗಾರಿಗಳನ್ನು ಗುತ್ತಿಗೆ ಪಡೆದು ಕೆಲಸ ಮಾಡಿದರೆ ಅದಕ್ಕೆ ಸಹಕಾರ ನೀಡುತ್ತೇವೆ

-ಎಇಇ ಎಚ್.ಗಿರೀಶ್ ನಾಯ್ಕ ಹೇಳಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!