ಸುದ್ದಿವಿಜಯ ಜಗಳೂರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟು ಹಬ್ಬದ ಹಿನ್ನೆಲೆ ಶನಿವಾರ ತಾಲೂಕು ಬಿಜೆಪಿ ಘಟಕದಿಂದ ಜಗಳೂರಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಿಸಿ, ಕೆಲವೆಡೆ ಸಸಿಗಳನ್ನು ನೆಡುವ ಮೂಲಕ ಪ್ರಧಾನಿ ಹಟ್ಟುಹಬ್ಬವನ್ನು ಆಚರಿಸಲಾಯಿತು.
ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ನರೇಂದ್ರ ಮೋದಿ ದೇಶ ಕಂಡ ಅಪರೂಪ ಪ್ರಧಾನ ಮಂತ್ರಿಯಾಗಿದ್ದಾರೆ. ಮೂರು ಬಾರಿ ಗುಜರಾತಿನ ಸಿ.ಎಂ ಆಗಿ, ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಆಡಳಿತವನ್ನೇ ಇಡೀ ರಾಷ್ಟçದ ಜನರೇ ಒಪ್ಪಿಕೊಂಡಿದ್ದಾರೆ ಎಂದರು.
ಜನರಿಗೆ ಆರೋಗ್ಯದಲ್ಲಿ ಅನುಕೂಲವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ೨೦೧೮ರಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಆರಂಭಿಸಿತು. ಈ ಯೋಜನೆ ಪ್ರತಿ ಬಡ ಕುಟುಂಬಕ್ಕೆ ೫ಲಕ್ಷರೂ ವಿಮಾ ಭದ್ರತೆ ಸಿಕ್ಕಿತು. ದೇಶದ ೧೦ ಕೋಟಿಗೂ ಹೆಚ್ಚು ಜನರು ಇದರ ಲಾಭ ಪಡೆದುಕೊಂಡಿದ್ದಾರೆ. ಉಜ್ವಲ ಯೋಜನೆ ಜಾರಿಗೆ ತಂದು ಹೊಗೆಮುಕ್ತ ದೇಶ ಮಾಡಲಾಗಿದೆ. ಜನಧನ್ ಯೋಜನೆಯಿಂದ ೪೪ ಕೋಟಿ ಖಾತೆಗಳನ್ನು ತೆರೆದು ಬ್ಯಾಂಕ್ ವ್ಯವಹಾರ ನಡೆಸಲಾಗಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ತುಂಬ ಅನುಕೂಲವಾಗಿದೆ. ಮೂರು ಕಂತುಗಳಲ್ಲಿ ಪ್ರತಿ ರೈತರ ಖಾತೆಗಳಿಗೆ ೨ ಸಾವಿರ ರೂಗಳನ್ನು ನೀಡಲಾಗುತ್ತಿದೆ. ಅಟಲ್ ಪಿಂಚಣಿ ಯೋಜನೆಯಡಿ ೬೦ ವರ್ಷ ಮೇಲ್ಪಟ್ಟ ವರಿಗೆ ಪ್ರತಿ ತಿಂಗಳು ಒಂದು ಸಾವಿರದಿಂದ ೫ ಸಾವಿರದವರೆಗೂ ಪಿಂಚಣಿ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಎಚ್.ಸಿ ಮಹೇಶ್, ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲಕುಮಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ ನಾಗಪ್ಪ, ಪ.ಪಂ ಸದಸ್ಯರಾದ ನವೀನ್, ಆರ್. ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ಓಬಣ್ಣ, ಮಾಜಿ ತಾ.ಪಂ ಸದಸ್ಯ ಸಿದ್ದೇಶ್, ಮುಖಂಡ ಕಟ್ಟಿಗೆಹಳ್ಳಿ ಮಂಜಣ್ಣ, ಆಸ್ಪತ್ರೆ ವೈದ್ಯಾಧಿಕಾರಿ ಡಾ. ನೀರಜ್ ಸೇರಿದಂತೆ ಮತ್ತಿತರಿದ್ದರು.