ಜಗಳೂರು: ತಾಲೂಕಿನ ಜನರೇ ಎಚ್ಚರ, ನಾಳೆ ಎಲ್ಲೆಲ್ಲಿ ಪವರ್ ಇರೋಲ್ಲ ಗೊತ್ತಾ?

Suddivijaya
Suddivijaya January 10, 2023
Updated 2023/01/10 at 2:51 PM

ಸುದ್ದಿವಿಜಯ, ಜಗಳೂರು: ತಾಲೂಕಿನ ಬಿದರಕೆರೆ ವಿವಿ ಕೇಂದ್ರದಲ್ಲಿ  ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಣೆ ಇರುವುದರಿಂದ ಬೆಳ್ಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

ಬೆಸ್ಕಾಂ ಎಇಇ ಗಿರೀಶ್ ನಾಯ್ಕ್
ಬೆಸ್ಕಾಂ ಎಇಇ ಗಿರೀಶ್ ನಾಯ್ಕ್

ಬಿದರಕೆರೆ, ನಿಗಬೂರು, ಹೊಸಹಟ್ಟಿ, ಕಟ್ಟಿಗೆಹಳ್ಳಿ, ಜಗಳೂರು ಪಟ್ಟಣದ ಕೆಲವೆಡೆ, ಹನುಂತಾಪುರ, ಕೆಚ್ಚೇನಾಹಳ್ಳಿ, ತಮಲೇಹಳ್ಳಿ, ತೋರಣಗಟ್ಟೆ, ಉದ್ದಗಟ್ಟ, ಗೋಗುದ್ದು, ಜಮ್ಮಾಪುರ, ಮರೇನಾಹಳ್ಳಿ, ಬೊಮ್ಮಕ್ಕನಹಳ್ಳಿ, ಅರಿಶಿಣಗುಂಡಿ, ಲಿಂಗಣ್ಣನಹಳ್ಳಿ, ಗೋಪಗೊಂಡನಹಳ್ಳಿ, ಬಿಸ್ತುವಳ್ಳಿ, ರಸ್ತೆಮಾಕುಂಟೆ, ಜ್ಯೋತಿಪುರ,

ಅಣಬೂರು, ಕೆಳಗೋಟೆ, ಕಣ್ವಕುಪ್ಪೆ, ಚಿಕ್ಕಮ್ಮನಹಟ್ಟಿ, ದೇವಿಕೆರೆ, ಗುತ್ತಿದುರ್ಗ, ಸಾಗಲಗಟ್ಟೆ, ರಸ್ತೆಮಾಚಿಕೆರೆ, ಮಾಳಮ್ಮನಹಳ್ಳಿ,  ರಾಜನಹಟ್ಟಿ, ಗಿಡ್ಡನಕಟ್ಟೆ, ಬುಳ್ಳನಹಳ್ಳಿ, ಬೈರನಾಯಕನಹಳ್ಳಿ, ಗವಿಮಠ, ಸಂತೇಮುದ್ದಾಪುರ, ಗಾಂಧೀನಗರ, ಆಲನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರು ಗಂಟೆಯ ನಂತರ ತ್ರೀಪೇಸ್ ವಿದ್ಯುತ್ ನೀಡಲಾಗುವುದು. ವಿದ್ಯುತ್ ಇಲ್ಲದಿರುವುದರಿಂದ ಸಹಕರಿಸಿ ಎಂದು ಬೆಸ್ಕಾಂ ಎಇಇ ಮನವಿ ಮಾಡಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!