ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಬೃಹತ್ ವೀರಾಂಜನೇಯ ಸ್ವಾಮಿ ದೇವಸ್ಥಾನ ಲೋಕಾರ್ಪಣೆ

Suddivijaya
Suddivijaya February 18, 2023
Updated 2023/02/18 at 12:56 PM

ಸುದ್ದಿವಿಜಯ, ಜಗಳೂರು: ರಾಮಾಯಣದಲ್ಲಿ ವೀರಾಂಜನೇಯನ ಸಾಹಸ ದೊಡ್ಡದು. ರಾಮನ ಭಂಟನಾಗಿ ಸೀತೆಯನ್ನು ರಕ್ಷಿಸಿದ. ಲಕ್ಷಣ ಮೂರ್ಛೆ ಹೋದಾಗ ಸಂಜೀವನಿ ಸಸ್ಯಕ್ಕಾಗಿ ಬೆಟ್ಟವನ್ನೇ ಹೊತ್ತು ತಂದ ವೀರ ಹನುಮನ ಸಾಹಸ ಒಂದೆರಡಲ್ಲ ಎಂದು ಚಿತ್ರದುರ್ಗ ತಾಲೂಕಿನ ಬೆಳ್ಳಕಟ್ಟೆ ಗ್ರಾಮದ ಓಂಕಾರ ಹುಚ್ಚನಾಗಲಿಂಗ ಸ್ವಾಮಿ ಹೇಳಿದರು.

ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಬೋವಿ ಕಾಲೋನಿಯಲ್ಲಿ ಶಿವರಾತ್ರಿ ಅಂಗವಾಗಿ ಶನಿವಾರ ವೀರಾಂಜನೇಯ ಸ್ವಾಮಿ ನೂತನ ದೇವಸ್ಥಾನ ಉದ್ಘಾಟನೆ, ಕಳಶಾರೋಹಣ ನೆರವೇರಿಸಿ ಅವರು ಮಾತನಾಡಿದರು.

ರಾಮನ ಆದರ್ಶಗಳನ್ನು ಪಾಲಿಸಿದ ಹನುಮ ಧೀರತೆಗೆ ಸಂಕೇತ. ದುಷ್ಟರ ಸಂಹಾರಕ್ಕೆ ಲಂಕೆಯನ್ನೇ ಸುಟ್ಟ. ಅಂದರೆ ದುಷ್ಟರನ್ನು ಮಟ್ಟಹಾಕಿದ. ಯುವಕರು ತಮ್ಮ ಮನದಲ್ಲಿರುವ ದುಷ್ಟತನ. ಸಮಾಜದಲ್ಲಿರುವ ಮೌಢ್ಯ, ಅನಿಷ್ಠಗಳನ್ನು ಮಟ್ಟಹಾಕಿ ಎಂದು ಕರೆನೀಡಿದರು.

ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿಯ ಬೋವಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಲೋಕಾರ್ಪಣೆ, ಕಳಸಾರೋಹಣ ಕಾರ್ಯಕ್ರಮ ನೆರವೇರಿತು. ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿದರು.
ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿಯ ಬೋವಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಲೋಕಾರ್ಪಣೆ, ಕಳಸಾರೋಹಣ ಕಾರ್ಯಕ್ರಮ ನೆರವೇರಿತು. ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಇತಿಹಾಸಿಕ ಹಿನ್ನೆಲೆಯುಳ್ಳ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಧಾರ್ಮಿಕ ನಂಬಿಕೆ ಶ್ರದ್ಧಾ ಕೇಂದ್ರವಾಗಿದೆ. ಬೋವಿ ಕಾಲೋನಿಯಲ್ಲಿ ನಿರ್ಮಾಣವಾಗಿರುವ  ವೀರಾಂಜನೇಯ ದೇವಸ್ಥಾನಕ್ಕೆ ಸರಕಾರದ ಯಾವದೇ ಸಹಾಯಧನವಿಲ್ಲದೇ ಭಕ್ತರೇ ಹಣ ಸಂಗ್ರಹಿಸಿ ಇಂತಹ ಬೃಹತ್ ದೇವಸ್ಥಾನ ನಿರ್ಮಿಸಿರುವುದು ಸಂತೋಷ ತಂದಿದೆ ಎಂದರು. ಸಾಮರಸ್ಯದಿಂದ ಸಮಾಜದಲ್ಲಿ ಬದುವಕುವುದು ಸಹ ವೀರಾಂಜನೇಯನ ಆದರ್ಶ ಎಂದರು ಸ್ಮರಿಸಿದಿರು.

ಕೆಪಿಸಿಸಿ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಬೋವಿ ಜನಾಂಗದಲ್ಲಿ ಇತ್ತೀಚಿಗೆ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿಯಾಗುತ್ತಿದ್ದಾರೆ. ಧಾರ್ಮಿಕ ಭಕ್ತಿಕೇಂದ್ರವಾದ ಕಟ್ಟಿಗೆಹಳ್ಳಿ ಬಸವೇಶ್ವರ ಇಡೀ ಮಧ್ಯ ಕರ್ನಾಟದಲ್ಲೇ ಪ್ರಸಿದ್ಧವಾಗಿದೆ. ಈಗ ವೀರಾಂಜನೇಯ ದೇವಸ್ಥಾನ ಉದ್ಘಾಟನೆಯಾಗಿದ್ದು ಧಾರ್ಮಿಕ ಸಂಗಮವಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಮಂಜಪ್ಪ, ಗ್ರಾಪಂ ಸದಸ್ಯ ಭಾರತೀ ಮಂಜುನಾಥ್, ಬೋವಿ ಸಮುದಾಯದ ಮುಖಂಡರಾದ ರಾಜಪ್ಪ, ತಿಪ್ಪಣ್ಣ, ಎಂ.ಟಿ.ವೀರೇಶ್, ಕೆ.ಇ.ಚಂದ್ರಪ್ಪ, ಸಾದರಹಳ್ಳಿ ನಾಗರಾಜ್, ಗುರುಮೂರ್ತಿ, ಎ.ಕೆ.ರಂಗಪ್ಪ, ಎ.ಡಿ.ತಿಪ್ಪೇಸ್ವಾಮಿ, ಉಮೇಶ್, ಎಚ್.ಜಿ.ಮಂಜುನಾಥ್, ಸಂಜೀವಪ್ಪ, ಮಂಜಪ್ಪ,ಕೆ.ಪಿ.ತಿಮ್ಮಪ್ಪ, ಎನ್.ಎಸ್.ಸೋಮನಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!