ಸುದ್ದಿವಿಜಯ, ವಿಶೇಷ (ಇಂಟ್ರಸ್ಟಿಂಗ್ ಕಥೆ): ಆಕೆ ಹೆಸರು ಶಕುಂತಲಾ… ಬೆಂಗಳೂರು ಹುಡುಗಿ. ಯೌವನದ ದಿನಗಳಲ್ಲಿ ಆಕೆಯನ್ನು ಪ್ರೀತಿಸಿದವರಿಗೆ ಆರಾಧಿಸಿದವರಿಗೆ, ಪ್ರೇಮ ಭಿಕ್ಷೆ ಬೇಡಿದವರಿಗೆ ಲೆಕ್ಕವಿಲ್ಲ. ಆದರೆ ಆಕೆ ಯಾರಿಗೂ ಒಲಿಯಲಿಲ್ಲ. ಬದಲಾಗಿ ಅಪ್ಪ- ಅಮ್ಮ ತೋರಿಸಿದ ಹುಡುಗನನ್ನೇ ಮದುವೆಯಾದಳು. ಈಗ ಆಕೆಗೆ 24 ವರ್ಷದ ಮಗನಿದ್ದಾನೆ.
ಮಗ ಪದವಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಬಂದಿದ್ದ. ಆಕೆ ಫಲಿತಾಂಶ ನೋಡಿ ಅತ್ತುಬಿಟ್ಟಳು. ಫಲಿತಾಂಶದ ಸುದ್ದಿ ಗೊತ್ತಾದದ್ದೇ ತಡ ಪೇಪರಿನವರು, ಟೀವಿಯವರು, ಮಗನ ಕಡೆಯ `ಗೆಳತಿಯರು ಬಂದೇ ಬಂದರು. ನಮ್ಮ ಯಜಮಾನರು ಎಲ್ಲವನ್ನೂ ಕೂಲ್ ಆಗಿ ತೆಗೆದುಕೊಂಡರು. ಇಡೀ ಬೀದಿಯೇ ನನ್ನ ಮಗನನ್ನು ಮೆಚ್ಚುಗೆ-ಬೆರಗು ಅಸೂಯೆಯಿಂದ ನೋಡುತ್ತಿದ್ದವರೆಲ್ಲ ಹೊಗಳಲು ಆರಂಭಿಸಿದರು.
ಮಗನ ಗೆಳತಿಯರು ಬಂದ ತಕ್ಷಣ ಶಕುಂತಲೆಗೆ ʼಅವನʼ ನೆನಪಾಯಿತು. ಛೇ. ನಿಮ್ಮೊಂದಿಗೆ ಸುಳ್ಳು ಹೇಳಲಾರೆ.. ಅವನು ಎಂದರೆ ನನ್ನ ಬಾಯ್‌ಫ್ರೆಂಡ್! ತಮಾಷೆಯೆಂದರೆ ನನಗೆ ಅವನ ಹೆಸರೇ ಗೊತ್ತಿಲ್ಲ. ಈಗಲೂ ಗೊತ್ತಿಲ್ಲ. ನಾನು ಅವನನ್ನು ಸ್ಟುಪಿಡ್ ಎಂದೇ ಕರೆಯುತ್ತಿದ್ದೆ. ಹಾಗೆ ಕರದಾಗಲೆಲ್ಲ ಅವನು ʼಹಾಯ್ ಸ್ವೀಟೀʼ ಅನ್ನುತ್ತಿದ್ದ! ಅವನು ಸ್ಟುಪಿಡ್; ನಾನು ಸ್ವೀಟ್!
ಅವನು ಪರಿಚಯವಾದುದು ನನ್ನ ಯೌವನದ, ವೈಭವದ ದಿನಗಳಲ್ಲಿ. ಆಗಲೂ ನಮ್ಮ ಮನೆಗೆ ಫೋನ್ ಇತ್ತು. ಆ ನಂಬರ್ ನನಗೆ ಈಗಲೂ ಚೆನ್ನಾಗಿ ನೆನಪಿದೆ 2224123. ನಾನು ಆಗಷ್ಟೇ ಪಿಯುಸಿ ಮುಗಿಸಿ ಬಿ.ಎಸ್ಸಿಗೆ ಕಾಲಿಟ್ಟಿದ್ದೆ. ಅದೊಂದು ದಿನ, ನನ್ನ ಸೌಂದರ್ಯಕ್ಕೆ ಮರುಳಾಗಿ ಬೆಳಗಿನಿಂದ ಹಿಂದೆಹಿಂದೆಯೇ ಓಡಾಡಿದವರನ್ನು ನೆನಪು ಮಾಡಿಕೊಳ್ಳುತ್ತಾ ನನ್ನೊಳಗೆ ನಾನೇ ನಗುತ್ತಾ ‘ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ’ ಎಂದು ಹಾಡು ತಿದ್ದಾಗಲೇ ಫೋನು ರಿಂಗಾಯಿತು. ನಾನು ‘ಹಲೋ’ ಎನ್ನುವಷ್ಟರಲ್ಲಿ ‘ಕಟ್’ ಆಯಿತು, ನಾನು ಫೋನ್, ಮರೆತೆ, ಹಾಡಿಗೆ ಹೊರಳಿಕೊಂಡ.
ನಿಮಿಷದ ನಂತರ ಮತ್ತೆ ಟ್ರಿಣ್ ಟ್ರಿಣ್, ಟ್ರಿಣ್! ನಾನು ‘ಹಲೋ’ ಅನ್ನುವಷ್ಟರಲ್ಲಿ ಮತ್ತೆ ಕಟ್ಟಾಯಿತು! ಹೀಗೇ ಐದಾರು ಬಾರಿ ಅಯ್ತು ಕಡೆಗೊಮ್ಮೆ ಅದು ಟ್ರಿಣ್ ಅಂದ ತಕ್ಷಣವೇ ಫೋನ್ ಎತ್ತಿಕೊಂಡು ಹ್ಯಾಗೆ ಬೈಯ್ದೆ ಬಿಟ್ಟೆ ಅಂತೀರಾ? ನಾನು ಹತ್ತು ನಿಮಿಷ ಬಯ್ದು ಸುಸ್ತಾದಾಗ, ಆ ಕಡೆಯಿಂದ ಗಂಡಸೊಬ್ಬ ‘ಮೇಡಂ, ರಾಂಗ್ ನಂಬರ್” ಅಂದ ಅವನೇ ಮುಂದಾಗಿ ಸಾರಿ ಕೇಳಿದ. ಆಗಲೂ ನಾನು ಸಿಟ್ಟಿನಲ್ಲಿ ʼಸ್ಟುಪಿಡ್’ ಎಂದು ಗುಡುಗಿದೆರೆ- ಹೌದು ಅಂದ. ಹಿಂದೇನೇ ‘ನೀವು ಸತ್ ಸ್ವೀಟಿ ಕಣ್ರಿ ಅಂದು ಫೋನ್ ಇಟ್ಟ.
ನಾಲ್ಕು ದಿನದ ನಂತರ ಮತ್ತೆ ಅವನ ಫೋನ್ ಬಂತು. ನಾನು ‘ಹಲೋ’ ಅಂದ ತಕ್ಷಣ ನಾನು ಕಣ್ರಿ ‘ಸ್ಟುಪಿಡ್’ ಅಂದುಬಿಟ್ಟ. ಕಳೆದ ಬಾರಿ ಬೈ ಮಿಸ್ಟಿಕ್ ನಿಮಗೆ ಫೋನ್ ಮಾಡಿಬಿಟ್ಟೆ ‘ಸಾರಿ’ ಅಂದ. ಎಂಜಿನಿಯರಿಂಗ್ ಕಡೆಯ ವರ್ಷದಲ್ಲಿದ್ದೀನಿ ಅಂದ. ನನ್ನ ಬಗ್ಗೆ ಕೇಳಿದ, ಹೇಳಿದೆ. ‘ಹೆಸರೇನ್ರಿ’ ಅಂದ. ‘ಹೇಳಲ್ಲ ಅಂದೆ. ತೊಂದರೆ ಇಲ್ಲ, ನಿಮ್ಮನ್ನು ಸ್ವೀಟಿ’ ಅಂತಾನೇ ಕರೀತೀನಿಅಂದ. ಹೌದು ಎರಡನೇ ಬಾರಿಯ ಮಾತುಕತೆಯಲ್ಲೇ ಅವನು ಅವಳಿಗೆ ವಿಪರೀತ ಇಷ್ಟವಾಗಿಬಿಟ್ಟ
ಅವತ್ತಿಂದ ದಿನದಿನವೂ ಫೋನ್ ಮಾಡುವುದು ನಮ್ಮ ಅಭ್ಯಾಸವೇ ಆಗಿಹೋಯ್ತು ಇಬ್ಬರೂ ಹರಟುತ್ತಿದ್ದವು. ಕೋಳಿಜಗಳ ಆಡುತ್ತಿದ್ದವು. ಫೋನ್‌ನಲ್ಲೇ ರಾಜಿಯಾಗುತ್ತಿದ್ದವು. ಒಮ್ಮೊಮ್ಮೆ ಆತ ‘ಸ್ವೀಟಿ, ಒಂದು ಹಾಡು ಫೀಸ್’ ಅನ್ನುತ್ತಿದ್ದ ನಾನು ಹಾಡಾಗುತ್ತಿದ್ದೆ. ನನ್ನ ಸಡಗರ-ಸಂಕಟವನ್ನೆಲ್ಲ ಹೇಳಿಕೊಳ್ಳುತ್ತಿದ್ದೆ. ಹೌದು, ನನಗೇ ಗೊತ್ತಿಲ್ಲದಂತೆ ನಾನು ಅವನನ್ನು ಪ್ರೀತಿಸ್ತಾ ಇದ್ದೆ, ಆದ್ರೆ ಹೇಳಿಕೊಳ್ಳಲು ಭಯ, ನಾಚಿಕೆ, ಸಂಕೋಚ, ಹಾಗೇನೇ ಅವನೇನಾದ್ರೂ ಬೇರೆ ಜಾತಿಯವಾಗಿದೆ?
ಸಖತ್ ಕುರೂಪಿಯಾಗಿದ್ರೆ? ನನಗಿಂತ ಕುಳ್ಳ ಆಗಿಬಿಟ್ಟಿದ್ರೆ ? ಅಥವಾ ಅವನು ನನಗಿಂತ ಚೆನ್ನಾಗಿದ್ದು ಅದೇ ಕಾರಣದಿಂದ ನನ್ನ ಪ್ರೀತೀನ ನಿರಾಕರಿಸಿಬಿಟ್ರೆ…? ಇಂಥವೇ ಅನುಮಾನಗಳ ಮಧ್ಯೆ ನಾನು ಕಂಗಾಲಾಗಿ ಹೋದೆ. ನೆಮ್ಮದಿಯಿಂದ ಉಳೀಬೇಕಾದ್ರೆ ಅವನಿಂದ ದೂರಾಗಬೇಕು ಅಂದುಕೊಂಡೆ. ಮದ್ರಾಸಿಗೆ ಓದಲು ಹೋಗೋಣ ಅಂತ ಯೋಚಿಸಿದೆ. ಅಪ್ಪ ಅಮ್ಮನನ್ನೂ ಒಪ್ಪಿಸಿದೆ. ಕಡೆಗೆ ಅವನಿಗೂ ನನ್ನ ಪಯಣದ ವಿಷಯ ಹೇಳಿದೆ. ಆಗ ಅವನು ಬೇಸರಗೊಂಡ. ಮರುಕ್ಷಣವೇ- ‘ಸರಿ, ಬೆಸ್ಟ್ ಆಫ್ ಲಕ್, ನಂಗೆ ಈಗ ಕೆಲ್ಸ ಸಿಕ್ಕಿದೆ. ಇದು ನನ್ನ ಪರ್ಸನಲ್ ನಂಬರ್. ಮದ್ರಾಸಿಂದ ಫೀಸ್… ಫೀಸ್, ಫೋನ್ ಮಾಡಿ’ ಅಂದ.
ಉಹುಂ, ನಾನು ಅವನಿಗೆ ಫೋನ್ ಮಾಡಲೇ ಇಲ್ಲ. ನಿಧನಿಧಾನವಾಗಿ ಅವನನ್ನು ಮರೆತೆ ಅಥವಾ ಹಾಗಂತ ಭಾವಿಸಿದೆ. ಮುಂದೆ, ಅಪ್ಪ-ಅಮ್ಮ ತೋರಿಸಿದ ಹುಡುಗನನ್ನೇ ಮದುವೆಯಾದೆ. ಅವನೂ ಸಾಫ್ಟ್‌ವೇರ್ ಎಂಜಿನಿಯರ್ ಎಂದು ತಿಳಿದು ಖುಷಿಯಾದೆ. ಆದರೆ, ಗಂಡನ ಪಕ್ಕ ಹೋದಾಗಲೆಲ್ಲ ‘ಅವನು’ ನೆನಪಾಗಿಬಿಡ್ತಿದ್ದ.
`ನನ್ನ ಗಂಡ ಇದ್ದನಲ್ಲ ಒಂಥರಾ ಮೂಡಿ ಪರ್ಸನ್ ಕಣಿ. ಅವನಿಗೆ ನನ್ನ ಭಾವನೆಗಳೇ ಅರ್ಥ ಆಗ್ತಾ ಇರಲಿಲ್ಲ. ಆತ ಯಾವತ್ತೂ ನನ್ನ ಸೌಂದರ್ಯವನ್ನು ಹೊಗಳಲಿಲ್ಲ. ಹಾಡಿಗೆ ತಲೆ ದೂಗಲಿಲ್ಲ. ನನ್ನನ್ನ ಕಾಡಲಿಲ್ಲ ಕೆರಳಿಸಲಿಲ್ಲ. ಜಗಳಕ್ಕೆ ಬರಲೇ ಇಲ್ಲ. ಜೋಕು ಹೇಳಿ ನಗಿಸಲಿಲ್ಲ. ಸುಮ್ಮನೇ ಹೆದರಿಸಲಿಲ್ಲ. ಬದಲಿಗೆ, ತಾನಾಯಿತು ತನ್ನ ಕೆಲಸವಾಯ್ತು ಅಂದುಕೊಂಡು ತೆಪ್ಪಗಿದ್ದರು. ಹೌದು. ನಮಗೆ ಎಲ್ಲ ಇತ್ತು: ಸಾಮರಸ್ಯವೊಂದನ್ನು ಬಿಟ್ಟು… ಯಾಕೋ-ಈತ ನನಗೆ ಸರಿಯಾದ ಜೋಡಿಯಲ್ಲ ಅಂದುಕೊಳ್ಳುವ ವೇಳೆಗೆ ಮಗ ಹುಟ್ಟಿಬಿಟ್ಟ. ನಂತರ ಎಲ್ಲವನ್ನೂ ಸಹಿಸಿಕೊಂಡು, ಟಿಪಿಕಲ್ ಇಂಡಿಯನ್ ಹೆಂಗಸಾಗಿ ನಾನು ಉಳಿದುಬಿಟ್ಟೆ…’
ನನ್ನ ಮಗ ರ್ಯಾಂಕ್ ಬಂದನಲ್ಲಿ. ತಕ್ಷಣವೇ ಹಳೆಯ ಗೆಳೆಯ ನೆನಪಾದ. ಈ ಖುಷಿಯನ್ನು ಅವನೊಂದಿಗೆ ಹೇಳ್ಕೊಬೇಕು ಅನ್ನಿಸಿ ಹಳೆಯ ಡೈರಿಗಳನ್ನು ತಿರುವಿ ಹಾಕಿದ ನೋಡಿ- ಅವನು ಕೊಟ್ಟಿದ್ದ ಪರ್ಸನಲ್ ಫೋನ್ ನಂಬರು ಸಿಕ್ಕೇ ಬಿಡ್ತು. ಉದ್ವೇಗದಿಂದಲೇ ಡಯಲ್ ಮಾಡಿ ‘ಹಲೋ’ ಅಂದರೆ, ಆ ಕಡೆಯಿಂದ ಅವನು ‘ಸ್ವೀಟಿ’ ಅ೦ದ ಅವನ ದನಿಯಲ್ಲಿ ಅದೇ ಹಳೆಯ ಆಸೆ. ಕಾತುರ, ಮೋಹ ನಾನು ನಿಂತಲ್ಲೇ ಕುಣಿದೆ. ನವಿಲಾದ. ಒಮ್ಮೆ ಬಿಕ್ಕಳಿಸಿದೆ. ನನ್ನ ಬದುಕಿನ ಕಥೆ ಹೇಳಿಕೊಂಡೆ. ಅವನು ‘ನನಗೂ ಮದುವೆಯಾಯ್ತು, ಎದೆಯೆತ್ತರ ಬೆಳೆದ ಮಗನಿದ್ದಾನೆ ಅಂದ. ಕಡೆಗೆ-‘ಐ ಲೈಕ್ ಯು ವೆರಿಮಚ್’ ಎಂದು ಫೋನ್ ಇಟ್ಟ.
ಆನಂತರದಲ್ಲಿ ‘ಛೆʼ ಅವನನ್ನು ಮದುವೆಯಾಗದೇ ತಪ್ಪು ಮಾಡಿದೆ’ ಎಂಬ ಭಾವ ನನ್ನನ್ನು ಬಿಡದೇ ಕಾಡಿತು. ಅಂದಿನಿಂದ ದಿನಾಲೂ ನಾನೇ ಮುಂದಾಗಿ ಫೋನು ಮಾಡುತ್ತಿದೆ. ಹೊರಗಡ ಯಿಂದ, ಅಪ್ಪಿ ತಪ್ಪಿ ಕೂಡ ಅವನಿಗೆ ನನ್ನ ಮನೆಯ ನಂಬರು ಕೊಡಲಿಲ್ಲ: ಈ ವಿಷಯ ಆಕಸಾಕ್ ನನ್ನ ಗಂಡನಿಗೆ ಗೊತ್ತಾಗಿಬಿಟ್ಟರೆ…?
ಹೀಗೇ ಒಂದು ದಿನ ನನ್ನ ಸ್ಟುಪಿಡ್ಡು ಗೆಳೆಯನೊಂದಿಗೆ ಮಾತಾಡುತ್ತಾ ಇದ್ದಕ್ಕಿದ್ದಂತೆ ‘ನಾನೂ ನಿಮ್ಮನ್ನು ಪ್ರೀತಿಸಿದ್ದೆ. ಆದ್ರೆ ಹೇಳಿಕೊಳ್ಳಲಿಲ್ಲ. ಸಾರಿ’ ಅಂದುಬಿಟ್ಟೆ. ಹಿಂದೆಯೇ ನನ್ನ ಗಂಡನ ವಿಲಕ್ಷಣ ವರ್ತನೆಯ ಕುರಿತೂ ಹೇಳಿಕೊಂಡೆ. ಆತ ‘ಹೌದಾ?’ Be cool: take it easy ಅಂದ. ಅವನ ಮಾತಿಂದ ಎಂಥದೋ ಸಮಾಧಾನ ಮಾಡಿಕೊಂಡು ಮನೆಗೆ ಬಂದೆನಲ್ಲ? ನಂತರದ ಒಂದೆರಡೇ ನಿಮಿಷಗಳಲ್ಲಿ ತೀರಾ ಕೆಟ್ಟ ಸುದ್ದಿ ಬಂತು- ನನ್ನ ಗಂಡನಿಗೆ ಆ್ಯಕ್ಸಿಡೆಂಟ್ ಆಗಿತ್ತು. ಆತ ಸ್ಥಳದಲ್ಲೇ ತೀರಿಕೊಂಡಿದ್ದ!
ಆ ಕ್ಷಣದಿಂದಲೇ ನನ್ನನ್ನು ಪಾಪಪ್ರಜ್ಞೆ ಕಾಡತೊಡಗಿತು. ಗಂಡನಿಗೆ ನಾನು ಮೋಸ ಮಾಡಿದೆ ಅನ್ನಿಸ್ತು. ಅವನನ್ನು ನಿರ್ಲಕ್ಷಿಸಿದೆ ಅನ್ನಿಸ್ತು. ಆನಂತರ ನಾನು ನನ್ನ ಬಾಯ್ ಫ್ರೆಂಡ್‌ನನ್ನು ಸಂಪೂರ್ಣ ಮರೆತೇಬಿಟ್ಟೆ ಯಾಕೋ ಏನೋ, ಆಮೇಲೆ ಅವನೂ ಫೋನು ಮಾಡಲಿಲ್ಲ…
ಕಾಲಕ್ಕೆ ಯಾವ ತಡೆ? ಪದವಿ ಮುಗಿದ ಮರುವರ್ಷವೇ ನನ್ನ ಮಗನಿಗೆ ಕೆಲಸ ಸಿಕ್ಕು ನಂತರದ ಆರು ತಿಂಗಳಿಗೇ ಒಬ್ಬಳು ಸುಂದರಿಯೊಂದಿಗೆ ಬಂದು ನಿಂತ ಮಗ- ಅಮ್ಮಾ ಇವಳನ್ನು ಮದುವೆ ಆಗ್ತಿನಿ, ಒಪ್ಪಿಕೋ’ ಅಂದ. ನನಗಂತೂ ಧೈರ್ಯ ಇರಲಿಲ್ಲ. ಆದರೆ ನನ್ನ ಮಗನಿಗೆ ಆ ಧೈರ್ಯ ಇದೆ. ಆತ ನೆಮ್ಮದಿಯಿಂದಿರಲಿ ಅಂದುಕೊಂಡೆ. ನಾನು ಅಡುಗೆಮನೆ ಸೇರಿ, ಯುವಜೋಡಿಗೆ ಸ್ವಲ್ಪ ಹೊತ್ತು ಗಂಡನ ರೂಂ ಬಿಟ್ಟುಕೊಡೋಣ ಎಂದುಕೊಂಡೆ. ಆ ರೂಂನ ಕ್ಲೀನ್ ಮಾಡೋಣ ಎಂದು ಹೋದರೆ ‘ಪರ್ಸನಲ್’ ಎಂದು ಬರೆದಿದ್ದ ಡೈರಿ ಗಂಡನ ಟೇಬಲ್ ಒಳಗಿನ ಡ್ರಾವರ್‌ನಲ್ಲಿ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ಕುತೂಹಲದಿಂದ ಅದರ ಪುಟ ತಿರುವಿದರೆ ನನ್ನ ಗಂಡ ತನ್ನ ಮುದ್ದಾದ ಅಕ್ಷರದಲ್ಲಿ ಬರೆದಿದ್ದ ರಾಂಗ್‌ನಂಬರ್ ಸ್ವೀಟಿ… 2224123
ರೀಡರ್ ಡಿಯರ್, ಈಗ ಅರ್ಥವಾಯಿತಲ್ಲ? ನಮಗೆ ಏನು ಬೇಕೋ, ಅದನ್ನು ದೇವರು ಖಂಡಿತ ಕೊಟ್ಟಿದ್ದಾನೆ. ಆದರೆ ನಾವು ಅದನ್ನು ಬೇರೆಲ್ಲೋ ಹುಡುಸ್ತೀವಿ! ನಿಜ ಸಂಗತಿ ತಿಳಿಯುವ ವೇಳೆಗೆ ತುಂಬ ತಡವಾಗಿರುತ್ತೆ ಶಕುಂತಲೆಯ ಕಥೆಯ ಥರಾ.. ನಿಮ್ಮ ಮನೆಯವರನ್ನು ಪೀತಿಸಿ. ನಿಮ್ಮ ಸುತ್ತಮುತ್ತಲ ಜನರನ್ನು ಪ್ರೀತಿಸಿ ಇದೇ ಈ ಕಥೆಯ ಸಾರಾಂಶ.
ಅಂಥದೊಂದು ಪರಿಸ್ಥಿತಿ ನಮಗ್ಯಾರಿಗೂ ಬಾರದಿರಲಿ