suddivijayanews10/7/2024
ಸುದ್ದಿವಿಜಯ, ಜಗಳೂರು: ತಾಲೂಕಿನ ಹೊನ್ನಮರಡಿ ಗ್ರಾಮದಲ್ಲಿ ವಿಂಡ್ ಫ್ಯಾನ್ ಕಂಪನಿಂಯಿಂದ ಎನ್‍ಜೆವೈ ಟಿಸಿಗೆ ಹಾನಿಯಾದಾಗ ಮೇಲಾಧಿಕಾರಿಗಳ ಗಮನಕ್ಕೂ ತಾರದೇ ವಿಂಡ್ ಫ್ಯಾನ್ ಕಂಪನಿಯವರ ಜೊತೆ ಶಾಮೀಲಾಗಿ ಏಕ ಪಕ್ಷೀಯ ನಿರ್ಧಾರ ಕೈಗೊಂಡು ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆ ಜಮ್ಮಾಪುರ ಲೈನ್ ಮನ್ ರುದ್ರಗೌಡ ಕಕ್ಕಳಮೇಲಿ ಅವರನ್ನು ಚನ್ನಗಿರಿ ತಾಲೂಕಿನ ನಲ್ಲೂರು ವಿಭಾಗಕ್ಕೆ ವರ್ಗಾಣೆ ಮಾಡಲಾಗಿದೆ.
ಕಳೆದ ಜೂನ್ 30 ರಂದು ಹೊನ್ನಮರಡಿ ಗ್ರಾಮದ ಬಳಿ ಕ್ಲೀನ್ ಮ್ಯಾಕ್ಸ್ ವಿಂಡ್ ಫ್ಯಾನ್ ಸ್ಥಾವರ ನಿರ್ಮಾಣಕ್ಕೆ ಬೃಹತ್ ಲಾರಿಗಳಲ್ಲಿ ವಿದ್ಯುತ್ ಉಪಕರಣಗಳನ್ನು ಸಾಗಿಸುವಾಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಟ್ರಾನ್ಸ್ ಫಾರ್ಮರ್ ಮತ್ತು ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು.
ಆ ಅವಘಡವನ್ನು ಬೆಸ್ಕಾಂ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೇ ಕಂಪನಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಗುತ್ತಿಗೆದಾರನ ಮೂಲಕ ಕಾಮಗಾರಿ ಮುಗಿಸಿದ್ದಾರೆ ಮತ್ತು ಗ್ರಾಮಗಳಲ್ಲಿ ಕೆಲ ಮನೆಗಳಲ್ಲಿ ಬೇಸ್ಕಾಂ ಟಿಸಿಗಳನ್ನು ಬಚ್ಚಿಟ್ಟಿದ್ದರು ಎಂದು ರೈತರು ಆರೋಪ ಮಾಡಿದ್ದ ಹಿನ್ನೆಲೆ ಸುದ್ದಿವಿಜಯ ವರದಿ ಮಾಡಿತ್ತು.
ವರದಿ ಪ್ರಕಟವಾದ ಮರುದಿನ ಬೆಸ್ಕಾಂ ಎಕ್ಸಿಕಿಟ್ಯೂವ್ ಎಂಜಿನಿಯರ್ ಎಸ್.ಕೆ.ಪಾಟೀಲ್ ಸೂಚನೆ ಮೇರೆಗೆ ದಾವಣಗೆರೆಯಿಂದ ಎಂಜಿನಿಯರ್ ರಾಮಚಂದ್ರಪ್ಪ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ನಂತರ ಸತ್ಯಾ ಸತ್ಯತೆ ಪರಿಶೀಲಿಸಿ ಲೈನ್ ಮನ್ ರುದ್ರಗೌಡ ಕಕ್ಕಳಮೇಲಿ ಅವರನ್ನು ನಲ್ಲೂರು ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ಅಮಾನತು ಮಾಡಿ ಅಕ್ರಮ ಎಸಗಿದ ಲೈನ್ ಮನ್ ರುದ್ರಗೌಡ ಕಕ್ಕಳಮೇಲಿ ವಿರುದ್ಧ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರಿಂದ ಹಿರಿಯ ಅಧಿಕಾರಿಗಳು ಎಚ್ಚೆತ್ತು, ತನಿಖೆ ಮಾಡಿಸಿ ಇಲ್ಲಿಂದ ಅವರನ್ನು ಬಿಡುಗಡೆ ಗೊಳಿಸಿದ್ದಾರೆ.
ಆದರೆ ಹಿರಿಯ ಅಧಿಕಾರಿಗಳು ಅವರನ್ನು ರುದ್ರಗೌಡರನ್ನು ಅಮಾನತು ಮಾಡಬೇಕಿತ್ತು. ಕೇವಲ ವರ್ಗಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ರೈತರಾದ ಈಶ್ವರಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಅನೇಕ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.