‘ವಿದ್ಯಾರತ್ನ’ ದಿ.ತಿಪ್ಪೇಸ್ವಾಮಿ ನೆನೆದು ಭಾವುಕರಾದ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ

Suddivijaya
Suddivijaya April 24, 2023
Updated 2023/04/24 at 1:20 PM

ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಪಕ್ಷದಿಂದಲೇ ಮಾಜಿ ಶಾಸಕ ಎಚ್.ಪಿ.ರಾಜೇಶ್ ಮತ್ತು ಶಾಸಕ ಎಸ್.ವಿ.ರಾಮಚಂದ್ರ ಆಯ್ಕೆಯಾಗಿ ಹೋಗಿದ್ದಾರೆ. ಅಧಿಕಾರ ಹಪಹಪಿತನದಿಂದ ಅವರು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಗಳಿಗೆ ಹೋದರು. ಆದರೆ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು ಜನಪರವಾಗಿದ್ದೇನೆ. ನನಗೆ ಜನಸೇವೆ ಮಾಡಲು ಒಂದು ಅವಕಾಶ ಕೊಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮತದಾರರಲ್ಲಿ ಮನವಿ ಮಾಡಿಕೊಂಡರು.

ಜಗಳೂರು ತಾಲೂಕಿನ ಚಿಕ್ಕ ಉಜ್ಜಿನಿ ಗ್ರಾಮದಲ್ಲಿ ಸೋವಾರದಿಂದ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದರು. ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳಿಬ್ಬರನ್ನೂ ಗೆಲ್ಲಿಸಿದ್ದೀರಾ. ಕಾಂಗ್ರೆಸ್ ಪಕ್ಷ ನನಗೆ ಬಿಫಾರಂ ನೀಡಿದ್ದು ನನಗೂ ಶಾಸಕನಾಗಲು ಒಂದುಬಾರಿ ಅವಕಾಶ ಕೊಡಿ. ಕ್ಷೇತ್ರದ ಅಭಿವೃದ್ದಿ ಗಂಟೆ ಬಾರಿಸಿ ಕಸಗುಡಿಸಿ ಸೇವೆಮಾಡುವೆ ಎಂದರು.

ಕಣ್ಣೀರು ಹಾಕಿದ ದೇವೇಂದ್ರಪ್ಪ

ನೆಲೆ ನೆರಳಿಲ್ಲದ ನನಗೆ ಅಮರಭಾರತಿ ಕಾಲೇಜಿನ ಸಂಸ್ಥಾಪಕರಾದ ವಿದ್ಯಾರತ್ನ ಡಾ. ತಿಪ್ಪೇಸ್ವಾಮಿ ಅವರು ಶಿಕ್ಷಣ, ಉದ್ಯೋಗ ಒದಗಿಸಿ ಈ ಮಟ್ಟಕ್ಕೆ ಬೆಳೆಸಿದರು. ಅವರು ನನ್ನ ಭಾಗ್ಯದ ದೇವರು. 33ವರ್ಷಗಳ ಕಾಲ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸೇವೆ ಮಾಡಿದ್ದೇನೆ. ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿದರೆ ಜನರ ಸೇವೆ ಮಾಡುತ್ತೇನೆ ಎಂದು ಭಾವುಕರಾಗಿ ಕಣ್ಣೀರಿಟ್ಟರು. 

ನನಗೂ ಶಾಸಕನಾಗಬೇಕು ಎಂಬ ಆಸೆಯಿದೆ. ನನ್ನ ಸ್ವಾರ್ಥಕ್ಕಾಗಿ ಅಲ್ಲ. ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷದ ಗೆಲುವು ಮುಖ್ಯ. ರಾಜ್ಯದಲ್ಲಿ ಬಡವರ ಜಾತ್ಯಾತೀತವಾದ ಜನಪರ ಆಡಳಿತ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಿದೆ. ಮತದಾರರು ಮೈಮರೆಯಬಾರದು. ಬಿಜೆಪಿ ಆಡಳಿತಾವಧಿಯಲ್ಲಿ ದೇಶದ ಸಂವಿಧಾನಬದ್ದ ಸ್ವಾತಂತ್ರ್ಯದ ಹಕ್ಕುಗಳನ್ನು ಕಸಿದುಕೊಳ್ಳುವ ಬಿಜೆಪಿ ಕೋಮುವಾದ ಪಕ್ಷವನ್ನು ಸೋಲಿಸಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಿಡಿಯದ ಮಾಜಿ ಶಾಸಕ ಎಚ್.ಪಿ.ರಾಜೇಶ್‍ಗೆ ಎರಡು ಬಾರಿ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡಿ ಒಂದು ಬಾರಿ ಶಾಸಕರನ್ನಾಗಿಸಿದೆ. ಕ್ಷೇತ್ರದವರಲ್ಲದ ಶಾಸಕ ಎಸ್.ವಿ.ರಾಮಚಂದ್ರ ಅವರನ್ನು ಮೂರು ಬಾರಿ ಶಾಸಕರನ್ನಾಗಿಸಿ ಆಯ್ಕೆಮಾಡಿದ್ದೇವೆ. ಈ ಬಾರಿ ಕಷ್ಟಗಳ ಮಧ್ಯೆ ಬೆಳೆದ ಕಾಂಗ್ರೆಸ್ ಅಭ್ಯರ್ಥಿ ಬಿ.ದೆವೇಂದ್ರಪ್ಪ ಅವರನ್ನು ಗೆಲ್ಲಿಸೋಣ ಎಂದರು.

57 ಕೆರೆ ತುಂಬಿಸುವ ಯೋಜನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿರಿಗೆರೆ ಶ್ರೀಗಳ ಸಹಕಾರವಿದೆ. ಆದರೆ ನೀರಾವರಿ ಯೋಜನೆಗಳನ್ನು ಹಾಲಿ, ಮಾಜಿ ಶಾಸಕರು ಸ್ವಯಂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಹೆಚ್ಚಿನ ಮತ ಹಾಕಿಸಿ. ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿರುವ ಬಿಜೆಪಿ ಪಕ್ಷಕ್ಕೆ ಮುಕ್ತಿ ನೀಡಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತನಾಡಿ, ಬಡವರ್ಗದವರ ಧ್ವನಿಯಾಗಿದ್ದ ಅಶ್ವತ್ಥರೆಡ್ಡಿ, ಚನ್ನಯ್ಯ ಒಡೆಯರ್, ಅವರಂತಹ ಜನಪರ ಮುತ್ಸದ್ಧಿ ರಾಜಕಾರಣಿಗಳು ಸ್ಮರಿಸಬೇಕಿದೆ. ಅವರ ಸಹಕಾರ, ಕಾಂಗ್ರೆಸ್ ಪಕ್ಷದಿಂದ ನಾನು ರಾಜ್ಯ ನಾಯಕನಾಗಿರುವೆ. ಕಳೆದ ಬಾರಿ ಸ್ಪರ್ಧಿಸಿದ ಮಾಜಿ ಶಾಸಕರು 30 ಸಾವಿರ ಅಂತರದಿಂದ ಸೋಲು ಅನುಭವಿಸಿದ್ದನ್ನು ಕೆಪಿಸಿಸಿ ಕಚೇರಿಯಲ್ಲಿ ರಾಷ್ಟ್ರ ನಾಯಕರಾದ ಸುರ್ಜೇವಾಲ ಅವರು ಪ್ರಶ್ನಿಸಿದ್ದರು. ಟಿಕೇಟ್ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ಸಜ್ಜನಿಕೆ ವ್ಯಕ್ತಿತ್ವದ ಕೆ.ಪಿ.ಪಾಲಯ್ಯ ಎಲ್ಲಾ ಧರ್ಮ ಜಾತಿಗಳ ಮನೆಯ ಮಗ ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ಪ್ರಶಂಸಿದರು.

ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಆಡಳಿತಾವಧಿಯಲ್ಲಿ 159 ಪ್ರಣಾಳಿಕೆಗಳನ್ನು ಈಡೇರಿಸಿದ ಹೆಗ್ಗಳಿಕೆ ನಮಗಿದೆ ಎಂದರು.

ಅಮರ ಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಮಧುಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿದರು. ಈವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್, ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ, ಶಕೀಲ್ ಅಹಮ್ಮದ್, ಮಹಮ್ಮದ್ ಅಲಿ, ಪಲ್ಲಾಗಟ್ಟೆ ಶೇಖರಪ್ಪ, ಓಮಣ್ಣ, ಅಹಮ್ಮದ್ ಅಲಿ, ಸಾವಿತ್ರಮ್ಮ, ರುದ್ರೇಶ್ ಸೇರಿದಂತೆ ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!