Suddivijaya | Kannada News | 3-4-2013
ಸುದ್ದಿವಿಜಯ, ಜಗಳೂರು: ತೀವ್ರ ಕುತೂಲಹ ಮೂಡಿಸಿರುವ ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.
ಈಗಾಗಲೇ 125 ಕ್ಷೇತ್ರಗಳ ಟಿಕೆಟ್ ಹಂಚಿಕೆ ಮಾಡಿರುವ ಹೈ ಕಮಾಂಡ್ ಇಂದು 70 ಲಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಯಾರಿಕೆ ಟಿಕೆಟ್ ಸಿಗಬಹುದು?
ಕ್ಷೇತ್ರದಲ್ಲಿ ಆರು ಜನ ಆಕಾಂಕ್ಷಿಗಳಿದ್ದು ಕೈನಾಯಕರಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಯಾರಿಗೆ ಟಿಕೆಟ್ ಎನ್ನುವ ಅನುಮಾನಕ್ಕೆ ಇಂದು ತೆರೆ ಬೀಳುವ ಸಾಧ್ಯತೆಯಿದೆ. ಮಾಜಿ ಶಾಸಕ ಎಚ್.ಪಿ.ರಾಜೇಶ್ ಟಿಕೆಟ್ ಫೈಟ್ನಲ್ಲಿ ಮುಂಚೂಣೆಯಲ್ಲಿದ್ದಾರೆ. ಅವರಿಗೆ ಸಿದ್ದರಾಮಯ್ಯ ಮತ್ತು ಎಸ್ಟಿ ನಾಯಕರ ಬೆಂಬಲವೂ ಇದೆ ಹೀಗಾಗಿ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದು ಬಂದಿದ್ದು ಈಗಾಗಲೇ ಅವರು ರಾಜಕೀಯ ಶಕ್ತಿ ಕೇಂದ್ರವಾದ ಬೆಂಗಳೂರಿನಲ್ಲಿ ಬೀಡುಬಿಟ್ಟು ಒಂದು ವಾರ ಕಸರತ್ತು ಮಾಡುತ್ತಿದ್ದಾರೆ.
ಇತ್ತ ಪ್ರಭಾವಿ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರು ಟಿಕೆಟ್ ತಂದೇ ತರುತ್ತೇನೆ ಎಂಬ ಆತ್ಮ ವಿಶ್ವಾಸದಲ್ಲಿದ್ದಾರೆ. ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಕೇಂದ್ರದ ಅನೇಕ ನಾಯಕರು ಟಿಕೆಟ್ ಸಿಗುವ ವಿಶ್ವಾಸ ಮತ್ತು ಶೇ.100 ರಷ್ಟು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಕೆಪಿಸಿಸಿ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ, ಮಾಜಿ ಜಿಪಂ ಸದಸ್ಯ ಕೆ.ಪಿ.ಪಾಲಯ್ಯ ಟಿಕೆಟ್ ತರುವಲ್ಲಿ ಹಿಂದೆ ಬಿದ್ದಿಲ್ಲ. ಅವರು ಸಹ ಟಿಕೆಟ್ ತಂದೇ ತರುವ ವಿಶ್ವಾಸದಲ್ಲಿದ್ದು, ಅವರಿಗೆ ಎಸ್ಟಿ ನಾಯಕರಾದ ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕ ನಾಯಕರ ಬೆಂಬಲವಿದ್ದು ಎರಡು ಬಾರಿ ಟಿಕೆಟ್ ಮಿಸ್ ಆಗಿದೆ ಈಬಾರಿ ಪಾಲಯ್ಯ ಅವರಿಗೆ ಟಿಕೆಟ್ ಕೊಡಲೇ ಬೇಕು ಎಂದು ಲಾಬಿ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಎಸ್ಟಿ ಕ್ಷೇತ್ರಗಳ ಮಹಿಳಾ ಮೀಸಲು ಟಿಕೆಟ್ ಕೇಳುವಲ್ಲಿ ಶ್ರೀಮತಿ ಪುಷ್ಪಾ ಲಕ್ಷö್ಮಣಸ್ವಾಮಿ ಅವರು ಹೈಕಮಾಂಡ್ ಮುಂದೆ ತಮ್ಮ ಹಕ್ಕನ್ನು ಮಂಡಿಸಿದ್ದಾರೆ ಎನ್ನಲಾಗಿದೆ. ಟಿಕೆಟ್ ಕೊಟ್ಟರೆ ಗೆದ್ದೇಗೆಲ್ಲುತ್ತೇನೆ ಎನ್ನುವ ವಿಶ್ವಾದಲ್ಲಿದ್ದು ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಬಸವಾಪುರ ರವಿಚಂದ್ರ ಮತ್ತು ಹನುಮಂತಪ್ಪ ಅವರು ಟಿಕೆಟ್ಗಾಗಿ ಅರ್ಜಿ ಹಾಕಿದ್ದರೂ ಟಿಕೆಟ್ಗಾಗಿ ಅಷ್ಟಾಗಿ ಲಾಬಿ ಮಾಡಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಟಿಕೆಟ್ ರೇಸ್ನಲ್ಲಿರುವ ನಾಲ್ವರಲ್ಲಿ ಬಹುತೇಕ ಮಾಜಿ ಶಾಸಕ ಎಚ್.ಪಿ.ರಾಜೇಶ್ ಇಲ್ಲವೇ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.