ಸುದ್ದಿವಿಜಯ, ಜಗಳೂರು: ತಾಲೂಕಿನ ದೇವಿಕೆರೆ ಗ್ರಾಪಂ ಅಧ್ಯಕ್ಷರ ಸ್ಥಾನಕ್ಕೆ ಸರಕಾರ 2ನೇ ಬಾರಿಗೆ ನಿಗದಿಪಡಿಸಿದ ಮೀಸಲಾತಿ ಆದೇಶದಂತೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಬೇಕಿತ್ತು ಆದರೆ ಸರ್ವ ಸದಸ್ಯರ ಒಮ್ಮತದ ತೀರ್ಮಾನದಂತೆ ಅವಿರೋಧ ಆಯ್ಕೆ ಪ್ರಕ್ರಿಯೆ ನೆಡೆಯುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಶುಕ್ರವಾರ ಚುನಾವಣಾಧಿಕಾರಿಗಳು ಘೋಷಿಸಿದರು.
ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಎಚ್. ರಣದಮ್ಮ ಚಂದ್ರಪ್ಪ ಹಾಗೂ ಉಪಾಧ್ಯಕ್ಷರಾಗಿ ಆರ್.ಎಂ ವೀರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮೀಸಲಿತ್ತು.
ಗ್ರಾ.ಪಂ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ರಣದಮ್ಮ ನಾಮ ಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಆರ್.ಎಂ ವೀರೇಶ್, ಪಿ.ಎಚ್ ಅಂಜಿನಪ್ಪ ಇಬ್ಬರು ನಾಮಪತ್ರ ಸಲ್ಲಿಸಿದ್ದರು.
ಇದರಲ್ಲಿ ಪಿ.ಎಚ್. ಅಂಜಿನಪ್ಪ ನಾಮ ಪತ್ರ ವಾಪಸ್ಸು ಪಡೆದಿದ್ದರಿಂದ ಕಣದಲ್ಲಿ ಎರಡು ಸ್ಥಾನಗಳಿಗೂ ಒಂದೊಂದು ನಾಮ ಪತ್ರ ಇದ್ದಿದ್ದರಿಂದ ಚುನಾವಣಾಧಿಕಾರಿ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ನಿಂಗರಾಜ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.ಒಟ್ಟು 22 ಮಂದಿ ಸದಸ್ಯರಲ್ಲಿ 13 ಮಂದಿ ಚುನಾವಣೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪಿಡಿಒ ಸುನೀತಾ, ಗ್ರಾ.ಪಂ ಸದಸ್ಯರಾದ ಕೆ.ಬಿ ಸದಾಶಿವಪ್ಪ, ಟಿ.ರವಿಕುಮಾರ್, ಓಬಣ್ಣ, ಸಿ. ಶಾಂತಕುಮಾರ್, ಇಂದ್ರಮ್ಮ, ಮಲ್ಲಮ್ಮ, ಅಂಜಿನಮ್ಮ, ಪಾರ್ವತಮ್ಮ, ರೇಖಮ್ಮ, ನೀಲಮ್ಮ ಮುಖಂಡರಾದ ಬಿಳಿಚೋಡು ಮಹೇಶ್,
ಕಲ್ಲೇರುದ್ರೇಶ್, ರುದ್ರೇಶ್, ಜಯವೀರಯ್ಯ, ಐನಳ್ಳಿ ಹನುಮಂತಪ್ಪ, ನಾಗರಾಜ್, ಗುಡ್ಡನಿಂಗನಹಳ್ಳಿ ನಾಗರಾಜ್, ವೀರಭದ್ರಪ್ಪ, ನಾಗರಾಜ್, ಚಂದ್ರಪ್ಪ ಸೇರಿದಂತೆ ಮತ್ತಿತರಿದ್ದರು.