ಸುದ್ದಿವಿಜಯ, ಜಗಳೂರು: ಕ್ಷೇತ್ರದ ಮತದಾರರ ಅನನ್ಯ ಪ್ರೀತಿ, ವಿಶ್ವಾಸ, ಆಶೀರ್ವಾದ ನನ್ನ ಮೇಲಿರುವಾಗ ನಾನು ಯಾವುದೇ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಪ್ರಕಟಣೆಯಲ್ಲಿ ತಮ್ಮ ಅಭಿಪಾಯ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಪಟ್ಟಣದಲ್ಲಿ ಬಹಿರಂಗ ಸಮಾವೇಶದಲ್ಲಿ ರಾಜೇಶ್ ಅವರನ್ನು ಟೀಕಿಸಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಕರಣೆಯಲ್ಲಿ ಉಲ್ಲೇಖಿಸದೇ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಜನರ ಮೇಲೆ ವಿಶ್ವಾಸವಿದೆ. ಜಯದ ಭರವಸೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದೇನೆ. ಅದು ಕ್ಷೇತ್ರದ ಮತದಾರರು ಅಂತರ್ಗತವಾಗಿ ನನಗೆ ಕೊಟ್ಟಿರುವ ಬಹುದೊಡ್ಡ ಆನೆ ಬಲ ಎಂದು ನಂಬಿದ್ದೇನೆ.
ನನ್ನದೇನಿದ್ದರೂ ಜನಪರವಾದ ಮತ್ತು ನನ್ನ ಕ್ಷೇತ್ರದ ಅಭಿವೃದ್ಧಿ ಪರವಾದ ನಿಷ್ಟೆ. ಈ ನಿಷ್ಟೆಯನ್ನು ನಾನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಕ್ಷೇತ್ರದ ಸರ್ವ ಜನಾಂಗದ ಪ್ರೀತಿ, ವಿಶ್ವಾಸವನ್ನು ಪಡೆದುಕೊಂಡಿರುವ ನಾನು ಎಂತಹ ನಿಷ್ಟಾವಂತ ಎಂಬುದನ್ನು ಮತದಾರರೇ ಈಗಾಗಲೇ ತೀರ್ಮಾನ ಮಾಡಿದ್ದು, ಅದು ಮೇ.13 ರಂದು ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ.
ಜನರನ್ನು ನಾನು ಯಾವುದೇ ಆಮಿಷಗಳಿಂದ ಕಟ್ಟಿಹಾಕಿಲ್ಲ. ನನ್ನ ನಿಷ್ಟೆ ಮತ್ತು ಸೇವೆಯ ನನ್ನ ಗೆಲುವಿನ ಗುಟ್ಟು. ರಾಷ್ಟ್ರೀಯ ಪಕ್ಷಗಳು ಮತ್ತು ಸರಕಾರಿ ಸಂಸ್ಥೆಗಳು ನಡೆಸಿದ ಐದು ಸಮೀಕ್ಷೆಗಳಲ್ಲಿ ನನ್ನ ಪರವಾದ ಗೆಲುವಿನ ಅಲೆ ವ್ಯಕ್ತವಾಗಿದೆ.
ಸತ್ಯ ಹೀಗಿದ್ದರೂ ಯಾವ ಮಾನದಂಡದ ಮೇಲೆ ಯಾರಿಗೆ ಏಕೆ ಟಿಕೆಟ್ ಕೊಟ್ಟಿದ್ದಾರೆ ಎಂಬುದು ಈಗಾಗಲೇ ಬಯಲಾಗಿದೆ. ನಾನು ನಂಬಿರುವ ಸರಳ ಸತ್ಯವೆಂದರೆ ಜನರ ಪ್ರೀತಿ ವಿಶ್ವಾಸವನ್ನು ನಾನು ಎಂದಿಗೂ ಖರೀದಿಸಲು ಸಾಧ್ಯವಿಲ್ಲ. ಪ್ರೀತಿ, ವಿಶ್ವಾಸ ವಿನಯವೇ ನನ್ನನ್ನು ಅಭೂತಪೂರ್ವವಾಗಿ ಗೆಲುವಿನ ದಡ ಮುಟ್ಟಿಸುತ್ತದೆ ಎಂಬುದು ನನ್ನ ಅಛಲ ವಿಶ್ವಾಸ ಮಾತ್ರವಲ್ಲ, ಕ್ಷೇತ್ರದ ಜನತೆಯ ದೊಡ್ಡಮಟ್ಟದ ಆತ್ಮವಿಶ್ವಾಸ ಎಂದು ಹೇಳಿದ್ದಾರೆ.