ಸುದ್ದಿವಿಜಯ, ಜಗಳೂರು: ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರನ್ನು ಈ ಬಾರಿ 50 ಸಾವಿರ ಮತಗಳ ಅಂತರದಿಂದ ಸೋಲಿಸುವೆ ಎಂದು ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಭಾನುವಾರ ಬಸವಜಯಂತಿ ಪ್ರಯುಕ್ತ ಐತಿಹಾಸಿ ಕಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಸಾಂಕೇತಿವಾಗಿ ಚುನಾವಣಾ ಪ್ರಚಾರ ಆರಂಭಿಸಿದರು.
ಶಾಸಕ ರಾಮಚಂದ್ರ ಅವರು ಈ ಬಾರಿ ಸೋಲುವುದು ಪಕ್ಕ. ಇದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಜನರ ಅಪಾರ ಬೆಂಬಲವಿದೆ.
ಪ್ರತಿಗ್ರಾಮದಲ್ಲಿ ಸಾಕಷ್ಟು ಅಭಿಮಾನಿಗಳು ಮತಪ್ರಚಾರ ಮಾಡುತ್ತಿದ್ದಾರೆ ಎಂದರು.
ವ್ಯಾಪಾರ ಕೇಂದ್ರ ಮಾಡಿಕೊಂಡ ಶಾಸಕ:
15ನೇ ಹಣಕಾಸು ದುರ್ಬಳಕೆ, ಕಳಪೆ ಕಾಮಗಾರಿಗಳು, ಕೆರೆಗಳು ಹೂಳೆತ್ತುವ ನೆಪದಲ್ಲಿಲೂಟಿ ಮಾಡಿರುವ ಎಸ್.ವಿ.ರಾಮಚಂದ್ರ ಅವರು ಕ್ಷೇತ್ರವನ್ನು ವ್ಯಾಪರ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ನಾನು ದಾವಣಗೆರೆಯಲ್ಲಿ ಮನೆ ಮಾಡಿಲ್ಲ.
ಬಿದರಕೆರೆ ಗ್ರಾಮದಲ್ಲಿ ಹಳ್ಳಿಯಲ್ಲಿ ವಾಸವಾಗಿದ್ದೇನೆ. ಸೋತರೂ ಗೆದ್ದರೂ ಜನರ ಮಧ್ಯೆಯೇ ಬದುಕುತ್ತಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿಯನ್ನು ಟೀಕಿಸಿದರು.
ವರಿಷ್ಠರ ಒತ್ತಡಕ್ಕೆ ಮಣಿಯುವುದಿಲ್ಲ:
ಹೈಕಮಾಂಡ್ ನಿಂದ ನನಗೆ ನಿತ್ಯ ಒತ್ತಡವಿದೆ. ಆದರೆ ನಾನು ಮಣಿಯುವ ಪ್ರಶ್ನೆಯೇ ಇಲ್ಲ. ಈ ಬಾರಿ ನಾನು ಗೆಲ್ಲಿಸುತ್ತೇನೆ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುತ್ತೇನೆ.
ಜನ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಬಿಜೆಪಿ ಪಕ್ಷದ ಅಭ್ಯರ್ಥಿಗೆ ನಡುಕ ಉಂಟಾಗಿದೆ. ಈ ಬಾರಿ ಸ್ವಾಭಿಮಾನದ ಅಲೆ ಕೆಲಸ ಮಾಡುತ್ತದೆ. ಹಣಬಲ ಕೆಲಸ ಮಾಡಲ್ಲ. ಈ ಬಾರಿ ಗೆಲ್ಲುತ್ತೇನೆ ಎಂಬ ಭ್ರಮೆಯಲ್ಲಿ ಅವರು ಇದ್ದಾರೆ. ಈ ಬಾರಿಗೆ ನನಗೆ ಆತ್ಮವಿಶ್ವಾಸವಿದೆ ಗೆಲ್ಲುತ್ತೇನೆ.
ಜಾತ್ಯತೀತವಾಗಿ, ಪಕ್ಷತೀತವಾಗಿ ಜನರು ನನ್ನನ್ನು ಬೆಂಬಲಿಸುತ್ತಿದ್ದಾರೆ. ತಳ ಮಟ್ಟದಿಂದ ಪಕ್ಷವನ್ನು ಸಂಘಟಿಸಿದ್ದೆ. ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಎಲ್ಲರಿಗೂ ನೋವಾಗಿದೆ. ಬಸವಣ್ಣನವರ ತತ್ವದಂತೆ ಕಾಯಕವೇ ಕೈಲಾಸದ ಅಡಿ ಕೆಲಸ ಮಾಡುತ್ತೇನೆ.
ಎಲ್ಲರೂ ನಮ್ಮವರೇ ಎಂದು ನಂಬಿದ್ದೇನೆ. ಎಲ್ಲ ಸಮಾಜಗಳು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಯೋಜನೆಗಳು:
ನಾನು ಶಾಸಕನಾಗಿ ಆಯ್ಕೆಯಾದರೆ ಅರ್ಧಕ್ಕೆ ನಿಂತಿರುವ 57 ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸುತ್ತೇನೆ. ಜೊತೆಗೆ ಅಪ್ಪರ್ ಭದ್ರಾ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನನ್ನ ಅವಧಿಯಲ್ಲಿ ಆಗಿದ್ದು ಈಗ ಜಾರಿಗೆ ಬಂದಿದೆ ಅದನ್ನು ಪೂರ್ಣಗೊಳಿಸುವೆ.
ಜೊತೆಗೆ ಕ್ಷೇತ್ರದಲ್ಲಿ ಸಾಮರಸ್ಯ, ಸಹಬಾಳೆ, ಮನೆ, ಶಾಲೆಗಳ ಅಭಿವೃದ್ಧಿ, ಸಾಮಾಜಿ ನ್ಯಾಯದ ಪರಿಕಲ್ಪನೆಯ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ ಎಂದರು.