suddivijayanews26/08/2024
ಸುದ್ದಿವಿಜಯ, ಜಗಳೂರು: ಕನ್ನಡ ನಾಡು ನುಡಿ ಕಟ್ಟಲು ಜಾತಿ ಧರ್ಮ ಭೇದ ಭಾವಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟಿನ ಮೂಲಕ ಕೆಲಸ ಮಾಡಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಯೋಗದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನೆಡೆಸುವ ಕುರಿತು ಸಭೆ ಉದ್ದೇಶಿಸಿ ಮಾತನಾಡಿದರು.
ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೂ ಸಹ ನಮ್ಮ ನಾಡು ನುಡಿ ಸಾಂಸ್ಕೃತಿಕ ಆಚಾರ ವಿಚಾರಗಳನ್ನು ಬಿಡಬಾರದು. ಗ್ರಾಮೀಣ ಭಾಗದಿಂದ ಬಂದಂತಹ ನಾವುಗಳೇ ಕನ್ನಡ ಕಟ್ಟುವ ಭಾಷೆ ಮತ್ತು ಸಾಹಿತ್ಯ ಬೆಳೆಸುವ ಕಾರ್ಯವನ್ನು ಪೋಷಿಸುವ ಮೂಲಕ ಭವಿಷ್ಯದ ಜನಾಂಗಕ್ಕೆ ಉಳಿಸುವ ಕಾರ್ಯ ಮಾಡಬೇಕು.
ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಇಂಗಿತ ವ್ಯಕ್ತಪಡಿಸಿದ ಜಿಲ್ಲಾ ಘಟಕಕ್ಕೆ ತನು ಮನ ಧನ ಸಹಾಯ ನೀಡಿ ಅದ್ದೂರಿ ಜಿಲ್ಲಾ ಸಮ್ಮೇಳನ ನೆಡೆಸಲು ಸಹಕಾರ ನೀಡುತ್ತೇನೆ ಎಂದರು.ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಸಾಪ ವತಿಯಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಶಾಸಕ ಬಿ.ದೇವೇಂದ್ರಪ್ಪ ಜೊತೆ ಚರ್ಚಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ವಾಮದೇವಪ್ಪ ಮಾತನಾಡಿ, ಜಗಳೂರು ಬರದ ತಾಲ್ಲೂಕು ಆದರು ಐತಿಹಾಸಿಕ ಹಿನ್ನಲೆಯಿದೆ ಕಲೆ ಸಾಹಿತ್ಯ ಸಂಗೀತ, ರಂಗಭೂಮಿ ಯಂತಹ ಕ್ಷೇತ್ರದಲ್ಲಿ ತನ್ನದೇ ಸಾಧನೆ ಮಾಡಿದೆ.
ಶಿಕ್ಷಣ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸ್ವತಹ ಸಾಹಿತ್ಯ ಆಸಕ್ತಿಯನ್ನು ಮೈಗೂಡಿಸಿಕೊಂಡಿರುವ ಶಾಸಕರು ಕ್ಷೇತ್ರ ಪ್ರತಿನಿಧಿಸಿರುವುದು ನಮ್ಮೆಲ್ಲರ ಭಾಗ್ಯ. ಅವರ ನೇತೃತ್ವದಲ್ಲಿ ಅದ್ದೂರಿ ಜಿಲ್ಲಾ ಮಟ್ಟದ ಸಮ್ಮೇಳನ ಮಾಡಲು ಎಲ್ಲರ ಸಹಕಾರ ಮುಖ್ಯ ಎಂದರು.
ದಾವಣಗೆರೆ ತಾಲ್ಲೂಕು ಕ.ಸಾ.ಪ ಅಧ್ಯಕ್ಷೆ ಸುಮತಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಿ.ದಳ್ಯಪ್ಪ, ರೇವಣಸಿದ್ದಪ್ಪ, ಜಗಳೂರು ತಾಲ್ಲೂಕು ಕಸಾಪ ಅಧ್ಯಕ್ಷೆ ಸುಜಾತಮ್ಮ, ಹಿರಿಯ ಸಾಹಿತಿ ಎನ್.ಟಿ.ಯರ್ರಿಸ್ವಾಮಿ,
ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ.ಮಹೇಶ್ವರಪ್ಪ, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಎನ್.ಎಸ್.ರಾಜು, ಷಡಕ್ಷರಪ್ಪ, ಜಿಗಳಿ ಪ್ರಕಾಶ್, ಜಿಲ್ಲಾ ಸಂ.ಕಾರ್ಯದರ್ಶಿ ಜಗದೀಶ್ ಕೂಲಂಬಿ,
ಬಿಳಿಚೊಡು ಹೋಬಳಿ ಘಟಕ ಅಧ್ಯಕ್ಷರು ಎಂ.ರಾಜಪ್ಪ, ಪರಿಮಳ ಜಗದೀಶ್, ಗೀತಾ, ಡಿ.ಸಿ.ಮಲ್ಲಿಕಾರ್ಜುನಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಪ್ರಾಂಶುಪಾಲರು ನಾಗಲಿಂಗಪ್ಪ, ಮುಖಂಡ ಗ್ಯಾಸ್ ಓಬಣ್ಣ, ಧನ್ಯಕುಮಾರ್, ಡಿ.ಟಿ.ಆದಂ ಸೇರಿದಂತೆ ಹಲವರು ಇದ್ದರು.