suddivijayanews8/07/2024
ಸುದ್ದಿವಿಜಯ, ಜಗಳೂರು: ತಾಲೂಕಿಗೆ ಅಗತ್ಯವಿರುವ ksrtc ಬಸ್ ಡಿಪೋ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ಸೂಕ್ತ ಸ್ಥಳ ಪರಿಶೀಲಿಸಿ ಕೆಎಸ್ಆರ್ಟಿಸಿ ಡಿಪೋ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸೋಮವಾರ ಜಗಳೂರು -ಬೆಂಗಳೂರು ಮಾರ್ಗದ ಕೆಎಸ್ಆರ್ ಟಿಸಿ ಅಶ್ವಮೇಧ ಬಸ್ಗೆ ಹಸಿರು ನಿಶಾನೆ ನೀಡಿದ ನಂತರ ಮಾತನಾಡಿದ ಅವರು, ಒಂದೇ ಸೂರಿನಡಿ ಸರಕಾರಿ ಆಸ್ಪತ್ರೆ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು.
ಶಕ್ತಿ ಯೋಜನೆ ಜಾರಿಗೂ ಮುನ್ನ ಸರಕಾರಿ ಬಸ್ಗಳಿಗೆ ಬೇಡಿಕೆ ಇರಲಿಲ್ಲ, ಆದರೆ ಇದೀಗ ಎಲ್ಲರಿಗೂ ಸರಕಾರಿ ಬಸ್ಗಳೆ ಬೇಕಾಗಿರುವುದರಿಂದ ಬಸ್ಗಳ ಕೊರತೆ ಎದುರಾಗಿದೆ.ಜಗಳೂರು-ದಾವಣಗೆರೆ ಮಾರ್ಗದ ಅಶ್ವಮೇಧ ಬಸ್ಗೆ ಶಾಸಕ ಬಿ. ದೇವೇಂದ್ರಪ್ಪ ಚಾಲನೆ ನೀಡಿದರು.
ದಾವಣಗೆರೆ -ಜಗಳೂರು ಸೇರಿದಂತೆ ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದರ ನಡುವೆ ಖಾಸಗಿ ಬಸ್ ಮಾಲೀಕರ ಸಮಸ್ಯೆಗಳನ್ನು ಆಲಿಸಿ ಎಲ್ಲರಿಗೂ ನ್ಯಾಯ ಒಗಿಸಲಾಗುವುದು ಎಂದರು.
ಜಗಳೂರು- ಬೆಂಗಳೂರಿಗೆ ರಾಜಹಂಸ, ವೋಲ್ವೋ ಬಸ್ ಕೊಡಲು ಕೆಎಸ್ ಆರ್ ಟಿಸಿ ಅಧಿಕಾರಿಗಳು ಒಪ್ಪಿಗೆ ನೀಡಿದ್ದರು. ಆದರೆ ಶಕ್ತಿ ಯೋಜನೆಗೆ ಅನ್ವಯವಾಗುವುದಿಲ್ಲ ಎಲ್ಲರು ಹಣ ಕೊಟ್ಟು ಹೋಗಬೇಕಾಗುತ್ತದೆ.
ಇದರಿಂದ ಮಹಿಳೆಯರು, ಸಾಮಾನ್ಯ ಜನರು ಸಂಚರಿಸಲು ಪ್ರಯಾಣ ದರ ಹೆಚ್ಚಾಗುತ್ತದೆ ಎಂಬ ಉದ್ದೇಶದಿಂದ ಅಶ್ವಮೇಧ ಬಸ್ ಓಡಾಡಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಬೆಳಕ್ಕೆ 5ಗಂಟೆಗೆ ಜಗಳೂರು ಬಿಡಲಿದ್ದು ದೊಣೆಹಳ್ಳಿ ಪೈಪಾಸ್ನಿಂದ ಚಿತ್ರದುರ್ಗ ಮೂಲಕ ಕಚೇರಿ ಸಮಯಕ್ಕೆ ಬೆಂಗಳೂರು ತಲುಪಲಿದೆ. ಸಂಜೆ ಅದೇ ಮಾರ್ಗವಾಗಿ ಬೆಂಗಳೂರಿನಿಂದ ಜಗಳೂರಿಗೆ ಬಸ್ ಬರಲಿದೆ ಎಂದರು.
ಕೆಎಸ್ಆರ್ಟಿಸಿ ಡಿಟಿಒ ಫಕೃದ್ದೀನ್ ಮಾತನಾಡಿ, ಪಟ್ಟಣದಲ್ಲಿ ಡಿಪೋ ನಿರ್ಮಾಣಕ್ಕೆ ಕಳೆದ ಸರಕಾರದಲ್ಲಿಯೇ ಪ್ರಸ್ತಾವನೆ ಕಳಿಸಲಾಗಿತ್ತು. ಈವರೆಗೂ ಬಂದಿಲ್ಲ. ಈಗಿನ ಸರಕಾರ ಅನುಮೋಧನೆ ನೀಡಿದಾಕ್ಷಣವೇ ಕಾಮಗಾರಿ ಶುರುಮಾಡಲಾಗುವುದು.
ಜನ ಸಾಮಾನ್ಯರಿಗೆ ಅನುಕೂಲವಾಗುವ ಉದ್ದೇಶದಿಂದ ಕೆಎಸ್ಆರ್ ಟಿಸಿ ವಿಭಾಗ ಉತ್ತಮವಾದ ಕೆಲಸ ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚರಿಸಲು ಹಂತ ಹಂತವಾಗಿ ವ್ಯವಸ್ಥೆ ಮಾಡಲಾಗುವುದು ಎಂದರು.
SFI ಜಿಲ್ಲಾ ಮುಖಂಡ ಅನಂತ್ ಕುಮಾರ್, ಜಗಳೂರು- ದಾವಣಗೆರೆ ಮಾರ್ಗವಾಗಿ ಕೆಎಸ್ಆರ್ ಬಸ್ಗಳ ಓಡಾಟದಿಂದ ತುಂಬ ಅನುಕೂಲವಾಗಿದೆ. ಆರಂಭದಲ್ಲಿ ಹೊಸ ಬಸ್ಗಳು ಸಂಚರಿಸಿದವು ಆದರೆ ಇತ್ತೀಚಿಗೆ ಹಳೆ ಹಾಗೂ ಟಕೋಟ ಬಸ್ಗಳು ಹೆಚ್ಚಾಗಿವೆ.
ಕಿಟಕಿ, ಬಾಗಿಲು ಬಿಗಿಯಾಗಿಲ್ಲ. ಆಸನಗಳು ಸರಿ ಇಲ್ಲ. 50 ಕಿ.ಮೀ ಕೂತು ಪ್ರಯಾಣಿಸಲು ಕಷ್ಟವಾಗುತ್ತಿದೆ. ಆದ್ದರಿಂದ ತಕ್ಷಣವೇ ಹೊಸ ಬಸ್ ಗಳನ್ನು ಓಡಿಸಬೇಕು, ಗ್ರಾಮೀಣ ಪ್ರದೇಶಕ್ಕೂ ಕಳಿಸಬೇಕು ಎಂದು ಒತ್ತಾಯಿಸಿದರು.
ಜಿ.ಪಂ ಮಾಜಿ ಸದಸ್ಯ ಕೆ.ಪಿ ಪಾಲಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಮಹಮದ್, ಮಾಜಿ ಅಧ್ಯಕ್ಷ ಸುರೇಶ್ಗೌಡ್ರು, ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ,
ಪ.ಪಂ ಸದಸ್ಯರಾದ ಮಂಜುನಾಥ್, ರಮೇಶ್ರೆಡ್ಡಿ, ರವಿಕುಮಾರ್, ಸಣ್ಣ ತಾನಾಜಿ ಗೋಸಾಯಿ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಹಮದ್ ಅಲಿ, ಕಾರ್ಮಿಕ ಘಟಕದ ಕಾರ್ಯದರ್ಶಿ ರುದ್ರೇಶ್ ಗುತ್ತಿದುರ್ಗ,
ಜಿ ಜಿ.ಪಂ ಸದಸ್ಯ ಸಿ.ಲಕ್ಷ್ಮಣ್, ಮುಖಂಡ ಸತೀಶ್ರೆಡ್ಡಿ, ಮಾಳಮ್ಮನಹಳ್ಳಿ ವೆಂಕಟೇಶ್, ವೀರನಗೌಡ, ಪ್ರಕಾಶ್ಗೌಡ ಸೇರಿದಂತೆ ಮತ್ತಿತರರಿದ್ದರು.