ಸುದ್ದಿವಿಜಯ, ಜಗಳೂರು: ತಾಲ್ಲೂಕಿನ ಕ್ಯಾಸೆನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಬಸಮ್ಮ ಮಂಜಣ್ಣ ಮತ್ತು ಉಪಾಧ್ಯಕ್ಷರಾಗಿ ಹನುಮಂತಪ್ಪ ಅವಿರೋಧವಾಗಿ ಆಯ್ಕೆಯಾದರು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಸಮ್ಮ ಮಂಜಪ್ಪ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮಿಸಲಾದ ಹಿನ್ನೆಲೆ ಹನುಮಂತಪ್ಪ ಶುಕ್ರವಾರ ಆಯ್ಕೆಯಾದರು.
ಗ್ರಾಮ ಪಂಚಾಯಿತಿಯಲ್ಲಿ 18 ಮಂದಿ ಸದಸ್ಯರ ಬಲ ಹೊಂದಿದ್ದು, ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಎರಡನೆ ಅವದಿಗೆ ಚುನಾವಣೆ ಶುಕ್ರವಾರ ನಡೆಯಿತು. ಎರಡು ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರು.
ಪ್ರತಿ ಸ್ಪರ್ಧಿಗಳಾಗಿ ಯಾರು ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯೂ ಆದ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಅಧ್ಯಕ್ಷರಾಗಿ ಬಸಮ್ಮ ಹಾಗೂ ಉಪಾಧ್ಯಕ್ಷರಾಗಿ ಹನುಮಂತಪ್ಪ ಅವರು ಆಯ್ಕೆಯಾಗಿದ್ದಾರೆ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಶೋಕ್, ಮಾಜಿ ಗ್ರಾಮ ಅಧ್ಯಕ್ಷರುಗಳಾದ ಡಿ.ಎಚ್ ಬಸವರಾಜ್, .ಮಂಜಮ್ಮ, ಅಂಜಿನಮ್ಮ, .ರೇಣುಕಮ್ಮ.ಟಿ, ಎನ್ ನಾಗರಾಜ್, ಸದಸ್ಯರುಗಳಾದ ರತ್ನಮ್ಮ.ಅಜ್ಜಪ್ಪ.ಗೌರಿಪುರ ಸಿದ್ದೇಶ್ವರನ್ .
ಪಾರ್ವತಮ್ಮ.ಹೇಮಣ್ಣ .ಗೌರಿಪುರ ತಾತಪ್ಪ.ಚಿಕ್ಕ ಉಜ್ಜನಿ ಹನುಮಂತಪ್ಪ,ಉಚ್ಚಪ್ಪ, ರೇವಣ್ಣ, ಮರಿಕುಂಟೆನಾಗರಾಜ್, .ಸುದಾ, ಅಂಜಿನಪ್ಪ ಸೇರಿದಂತೆ ಮತ್ತಿತರಿದ್ದರು.