ಬಿಳಿಚೋಡು ಹೊಸ ಸೇತುವೆ ನಿರ್ಮಾಣಕ್ಕೆ ₹.12 ಕೋಟಿ ಪ್ರಸ್ತಾವನೆ

Suddivijaya
Suddivijaya August 5, 2024
Updated 2024/08/05 at 1:00 PM

suddivijayanews5/08/2024

ಸುದ್ದಿವಿಜಯ, ಜಗಳೂರು: ಮೊಳಕಾಲ್ಮೂರು-ಮಲ್ಪೆ ರಾಜ್ಯ ಹೆದ್ದಾರಿ ಹಾದು ಹೋಗಿರುವ ಬಿಳಿಚೋಡು ಸಮೀಪದ ನೂರು ವರ್ಷದ ಹಳೆಯ ಸೇತುವೆ ನಿರ್ಮಾಣಕ್ಕೆ ಸುಮಾರು 12 ಕೋಟಿ ವೆಚ್ಚದ ಕಾಮಗಾರಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಭರವಸೆ ನೀಡಿದರು.

ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಸೋಮವಾರ ತಾಲೂಕು ಕಚೇರಿಯ ನೂತನ ನಾಡ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಅನುದಾನಿಡುಗಡೆಯಾದ ಕೂಡಲೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು. ಮುಖ್ಯ ರಸ್ತೆಯಲ್ಲಿ ಸೇತುವೆ ನಿರ್ಮಾಣ ಬಹಳ ಮುಖ್ಯವಾಗಿದೆ. 50 ವರ್ಷದ ಮುಂದಾಲೋಚನೆ ಇಟ್ಟುಕೊಂಡು ಸೇತುವೆ ಮಾಡಲಾಗುವುದು ಎಂದರು.

ಪಾಳೆಗಾರರಿಂದ, ರಾಜಕೀಯವಾಗಿ ಸ್ವಾತಂತ್ರ ನಂತರ, ಸ್ವತಂತ್ರ ಪೂರ್ವ ವರೆಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಿಳಿಚೋಡು ಹೋಬಳಿ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಸುತ್ತಮುತ್ತಲೂ ಹತ್ತಾರು ಅನೇಕ ಹಳ್ಳಿಗಳು ಸಂಪರ್ಕವಿರುವುದರಿಂದ ಹೊಸ ನಾಡ ಕಚೇರಿಯನ್ನು ನಿರ್ಮಿಸಲಾಗಿದೆ.

 ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಸೋಮವಾರ ತಾಲೂಕು ಕಚೇರಿಯ ನೂತನ ನಾಡ ಕಚೇರಿ ಕಟ್ಟಡವನ್ನು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು.
 ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಸೋಮವಾರ ತಾಲೂಕು ಕಚೇರಿಯ ನೂತನ ನಾಡ ಕಚೇರಿ ಕಟ್ಟಡವನ್ನು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು.

ಶ್ರಾವಣ ಮಾಸದ ಮೊದಲ ಸೋಮವಾರ ನಾಡ ಕಚೇರಿ ಲೋಕಾರ್ಪಣೆಯಾಗುತ್ತಿರುವುದು ಬಹಳ ಸಂತಸವಾಗಿದೆ.

ಈ ಸಾರ್ವಜನಿಕರಿಗೆ ಈ ಕೆಲಸ ನಿರ್ವಿಗ್ನವಾಗಿ ನಡೆಯಲಿ, ಸರಕಾರದ ಉದ್ದೇಶದಂತೆ ಸಾರ್ವಜನಿಕರಿಗೆ ಕುಂದುಕೊರತೆ ಇಲ್ಲದೆ ಉತ್ತಮವಾಗಿ ಕೆಲಸ ಮಾಡಬೇಕು. ಸರಕಾರಿ ಕಚೇರಿಗಳು, ಆಸ್ಪತ್ರೆ ಸೇರಿದಂತೆ ಯಾವುದೇ ಸರಕಾರಿ ಇಲಾಖೆಗಳು ತಮಗಾಗಿ ಇದೆ ಎಂಬ ಭಾವನೆ ಸಾರ್ವಜನಿಕರಲ್ಲಿರಬೇಕು.

ಇಲಾಖೆ ಸಿಬ್ಬಂದಿಗಳೊಂದಿಗೆ ಸ್ನೇಹ ವಿಶ್ವಾಸದಿಂದ ಕೆಲಸ ಮಾಡಿಕೊಳ್ಳಬೇಕು, ಸಣ್ಣ ವಿಚಾರಗಳಿಗೆ ಗಲಾಟೆ, ದೌರ್ಜನ್ಯ ಮಾಡುವುದು ಬಿಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಸೊಕ್ಕೆ ಉಪ ತಹಸೀಲ್ದಾರ್ ಉಪೇಂದ್ರ, ರೂಪ, ಆರ್‍ಐ ಧನಂಜಯ್, ವಿಎ ಶಿವುಕುಮಾರ್, ಪಿಡಿಒ ನಂದಿ ಲಿಂಗೇಶ್ವರ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರ್,

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಕುರುಬ ಸಮಾಜದ ಅಧ್ಯಕ್ಷ ಓಮಣ್ಣ, ಗ್ರಾ.ಪಂ ಸದಸ್ಯ ಅಜಾಮುಲ್ಲಾ, ಪ.ಪಂ ಮಾಜಿ ಅಧ್ಯಕ ಮಂಜುನಾಥ್, ಮುಖಂಡರಾದ ಶಂಭುಲಿಂಗಪ್ಪ, ವೆಂಕಟೇಶ್, ರಂಗಸ್ವಾಮಿ, ತಾನಾಜಿ ಗೋಸಾಯಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕೆಂಚೋಳ್, ಗ್ಯಾರಂಟಿ ಯೋಜನೆ ಸದಸ್ಯ ರಮೇಶ್ ಸೇರಿದಂತೆ ಮತ್ತಿತರರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!