Suddivijayanews1/8/2024
ಸುದ್ದಿವಿಜಯ, ಜಗಳೂರು: ತಾಲೂಕಿನ ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಾಗರತ್ನಮ್ಮ ಅಜ್ಜಪ್ಪ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಂಚಾಯತಿಯಲ್ಲಿ ಒಟ್ಟು 18 ಸದಸ್ಯರಿದ್ದು ಎರಡನೇ ಅವಧಿಯ ಎರಡುವರೆ ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನವು ಪರಿಶಿಷ್ಠ ಜಾತಿ ವರ್ಗಕ್ಕೆ ಮೀಸಲಾಗಿತ್ತು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಬ್ಬರು ಮಹಿಳಾ ಸದಸ್ಯರು ಒಬ್ಬರು ಪುರುಷ ಸದಸ್ಯರಿದ್ದು ಎರಡುವರೆ ವರ್ಷದ ಮೊದಲನೇ ಅವಧಿಗೆ ಚಿಕ್ಕ ಉಜ್ಜಿನಿ ಗ್ರಾ.ಪಂ.ಸದಸ್ಯೆ ಈ ಹಿಂದೆ ಅಧ್ಯಕ್ಷರಾಗಿದ್ದ ಬಸಮ್ಮ ಮಂಜಣ್ಣ ಒಡಂಬಡಿಕೆಯಂತೆ ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು.
ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಗರತ್ನಮ್ಮ ಅಜ್ಜಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನಲೆ ಚುನಾವಣೆ ಅಧಿಕಾರಿಯಾದ ಕಾರ್ಯನಿರ್ವಹಿಸಿದ (ಮೀನುಗಾರಿಕೆ ಸಹಾಯಕ ನಿರ್ದೇಶಕ) ಮಲ್ಲೇಶ್ ನಾಯ್ಕ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಮೇಶ್, ಸದಸ್ಯರಾದ ನಾಗರಾಜ್ ಬಿ. ಹನುಮಂತಪ್ಪ, ರತ್ನಮ್ಮ, ಪಾರ್ವತಮ್ಮ, ಮಂಜಮ್ಮ, ರೇಣುಕಮ್ಮ, ಅಂಜಿನಮ್ಮ, ನಾಗರಾಜ್, ಹುಚ್ಚಪ್ಪ, ಡಿ.ಎಚ್ ಬಸವರಾಜ್ ಸೇರಿದಂತೆ ಮತ್ತಿತರಿದ್ದರು.