ಜಗಳೂರು: ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಮಕ್ಕಳ ಶಿಕ್ಷಣಕ್ಕೆ ಒತ್ತುಕೊಡಿ

Suddivijaya
Suddivijaya February 28, 2023
Updated 2023/02/28 at 3:45 PM

ಸುದ್ದಿವಿಜಯ,ಜಗಳೂರು: ಸವಿತಾ ಸಮಾಜದವರು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಮುಖ್ಯವಾಹಿನಿಗೆ ಬರಬೇಕಿದೆ ಎಂದು
ಚಿತ್ತಾಪುರ ತಾಲೂಕು ಕೊಂಚೂರು ಗ್ರಾಮದ ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಸವಿತಾನಂದನಾಥ ಮಹಾಸ್ವಾಮಿ ಕರೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಸವಿತಾ ಸಮಾಜದಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಹೊಟ್ಟೆ ಹಸಿವಗಿಂತ ಮಸ್ತಕದ ಹಸಿವು ನೀಗಿಸಿಕೊಳ್ಳಬೇಕು.ಜೊತೆಗೆ ಮಂಗಳವಾರ ಕಾಯಕ ರಜಾದಿನ ವಾರಪೂರ್ತಿ ಶ್ರಮದ ಹಣವನ್ನು ವಿನಾಕಾರಣ ವ್ಯಯಮಾಡದೆ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಲು ಮಹಿಳೆಯರು ಜಾಗೃತರಾಗಬೇಕಿದೆ ಅಲ್ಲದೆ. ಸಮಾಜದ ಬಗ್ಗೆ ರಾಜಕಾರಣಿಗಳಲ್ಲಿ ತಾತ್ಸಾರ ಮನೋಭಾವವಿದೆ.

ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಸವಿತಾ ಸಮಾಜದಿಂದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು‌.
ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಸವಿತಾ ಸಮಾಜದಿಂದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು‌.

ಈ‌ಮಧ್ಯೆ ಆಂತರಿಕ ವೈಶ್ಯಮದಿಂದ ಸವಿತಾ ಸಮಾಜ ಸಂಘಟನೆ ವಿಮುಖಗೊಳ್ಳುತ್ತಿರುವುದು ಬೇಸರ ಸಂಗತಿ ಎಂದರು.

ಮಹಿಳೆಯರು ಪ್ರತಿವಾರಕ್ಕೊಮ್ಮೆ ನೆರೆಹೊರೆಯ ಮನೆಗಳಲ್ಲಿ  ಸೇರಿಕೊಂಡು ಗಾಯಿತ್ರಿ ಮಂತ್ರ ಪಠಿಸಿ ಉಪಾಸನೆ ಪ್ರಸಾದ ಸ್ವೀಕರಿಸಿ ನಂತರ ಸಮುದಾಯದ ಮಹಿಳೆಯರು ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.

ಏಪ್ರಿಲ್ 11 ರಂದು ಸವಿತಾ ಪೀಠ ಮಹಾಸಂಸ್ಥಾನದಲ್ಲಿ  ಸವಿತಾ ಮಹರ್ಷಿ ಜಯಂತಿ‌ ಹಾಗೂ ಗುರುವಂದನಾ ರಾಜ್ಯಮಟ್ಟದ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದರು.

ಸವಿತಾ ಸಮಾಜದ ಬಗ್ಗೆ ಸಮಾಜ ಕೀಳಿರಿಮೆ ತೊರೆಯಬೇಕು.ಬೌದ್ದ,ಸನಾತನ,ಲಿಂಗಾಯತ ಧರ್ಮಪ್ರಚಾರಕರಲ್ಲಿ ನಮ್ಮ ಪಾತ್ರವಿದೆ.

ತ್ರಿವರ್ಣ ಧ್ವಜದ ಅಶೋಕ ಚಕ್ರ,ರಾಷ್ಟ್ರ ಲಾಂಛನದಲ್ಲಿನ ಪ್ರತೀಕವಾಗಿರುವ ಸಾಮ್ರಾಟ್ ಅಶೋಕ ನಮ್ಮ ಸಮಾಜದವನು ಎಂಬುದನ್ನು ಮನಗಾಣಬೇಕಿದೆ.

ಜಗಳೂರಿನ ಅಚ್ಚುಕಟ್ಟಿನ ಇಂದಿನ  ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ.ಆದರೆ ನಮಗೆ ನಮ್ಮ ತಂದೆ ತಾಯಿ,ದೇಶದ ರೈತರು, ಸೈನಿಕರು ನಿಜವಾದ ಹೀರೊಗಳಾಗಬೇಕಿದೆ ಎಂದು ಕಿವಿಮಾತು ಹೇಳಿದರು.

ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ  ಕೆ.ಪಿ. ಪಾಲಯ್ಯ,ಸವಿತಾ ಸಮಾಜದ ಪೂಜ್ಯ ಗುರುಗಳ ಆಶೀರ್ವಾದ ಪಡೆದು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕು.

ವೇದಿಕೆ‌ ಮೇಲೆ ಹಾಲಿ ಮಾಜಿ ಶಾಸಕರ ಗೈರಿಗೆ ಕಾರಣ ತಮ್ಮ ಒಗ್ಗಟ್ಟಿನಲ್ಲಿ ಕೊರತೆ ಕಂಡಿದೆ ಮುಂದಿನ ದಿನಗಳಲ್ಲಿ ಸಮುದಾಯ ಸಂಘಟಿಸಬೇಕು.ವೃತ್ತಿಯಲ್ಲಿ ಶ್ರಮಜೀವಿಗಳಾಗಿರುವ ತಮ್ಮ ಕಾಯಕ ಶ್ಲಾಘನೀಯ ಎಂದರು.

ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ,ಗಾಯಿತ್ರಿ ಮಂತ್ರವನ್ನು ಧಾರೆ ಎರೆದ ಶೋಷಿತ ಸಮುದಾಯ ಸವಿತಾಸಮಾಜವಾಗಿದೆ.ಎಲ್ಲಾ ಸಮಾಜದ ದಾರ್ಶನಿಕರ ಜಯಂತಿಗಳಲ್ಲಿ  ಕುಣಿದು ಕುಪ್ಪಳಿಸದೆ ಅವರ ಆದರ್ಶಗಳನ್ನು ವೇದಿಕೆ

ಕಾರ್ಯಕ್ರಮಗಳ ಮೂಲಕ  ಯುವ ಪೀಳಿಗೆಗೆ ಪಸರಿಸಬೇಕು ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ,ಸಂಘಟನೆ ,ಹೊರಾಟ ನಡೆಸಬೇಕಿದೆ ವಂಶಪರಂಪರೆ ಕಾಯಕ ತೊರೆದು ಮಕ್ಕಳು ಉನ್ನತ ಉದ್ಯೋಗ ಅವಲಂಬಿಸಬೇಕು ಡಿ ಗ್ರೂಪ್ ನೌಕರನ ಮಗ ಐಎಎಸ್ ಅಧಿಕಾರಿಯಾಗಿರುವುದಕ್ಕೆ ನಾನೇ ಕಣ್ಣಮುಂದಿನ ಸಾಕ್ಷಿ ಎಂದು ಮಾರ್ಮಿಕವಾಗಿ ವ್ಯಕ್ತಪಡಿಸಿದರು.

ವೆಂಕಟಚಲಾಶಾಸ್ತ್ರಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತ,ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಪಂಚಾಯಿತಿ ಆವರಣದವರೆಗೆ ಸಾರೋಟಿನಲ್ಲಿ ಸರಸ್ವತ ಸ್ವಾಮೀಜಿಯವರ ಹಾಗೂ ಸವಿತಾ ಮಹರ್ಷಿ ಭಾವಚಿತ್ರದ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು.

ಸಂದರ್ಭದಲ್ಲಿ ಸವಿತಾಸಮಾಜದ ಜಿಲ್ಲಾಧ್ಯಕ್ಷ ಬಾಲರಾಜ್,ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ,ಪಟ್ಟಣ ಪಂಚಾಯಿತಿ ಸದಸ್ಯರಾದ ಲುಕ್ಮಾನ್ ಖಾನ್,ಪಾಪಲಿಂಗಪ್ಪ,ರಮೇಶ್ ರೆಡ್ಡಿ,ವಿಎಸ್ ಎಸ್ ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು,ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್
ಚಿದಾನಂದ,

ಮುಖಂಡರಾದ ಓಬಳೇಶ್, ವಕೀಲ ಹನುಮಂತಪ್ಪ,ರಮೇಶ್,ಗೌರಿಪುರ ಶಿವಣ್ಣ,ರೇವಣ್ಣ,ಹೊನ್ನೂರು ಸ್ವಾಮಿ,ತಿಪ್ಪೇಸ್ವಾಮಿ,ಶಾಂತಪ್ಪ,ಪುಟ್ಟಣ್ಣ,ತಾನಾಜಿ ಗೊಸಾಯಿ,ಧನ್ಯಕುಮಾರ,ಸತೀಶ್,ಬಸವನಕೋಟೆ ಸತೀಶ್ ಸೇರಿದತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!