suddivijayanews27/08/2024
ಸುದ್ದಿವಿಜಯ, ಜಗಳೂರು: ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಕಳೆದ ವರ್ಷ ಪ್ರತಿಷ್ಠಾಪನೆಗೊಂಡಿರುವ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಭವ್ಯ ಮೂರ್ತಿಗೆ ಬೆಂಗಳೂರಿನ ಸದಾಶಿವನಗರದ ಹಿಮಗಿರಿ ಗ್ರೂಪ್ಸ್ ಮಾಲೀಕರಾದ ಶ್ರೀ ರಾಘವೇಂದ್ರ ಮತ್ತು ಕುಟುಂಬದಿಂದ 5.75 ಲಕ್ಷ ರೂ ವೆಚ್ಚದ ಬೆಳ್ಳಿ ಕಿರೀಟವನ್ನು ಸಮರ್ಪಿಸಿದ್ದಾರೆ ಎಂದು ಮಂದಿರದ ಟ್ರಸ್ಟಿ ಪ್ರೊ.ಜೆ.ಎಂ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ತಾಲೂಕಿನ ಏಕೈಕ ಮಂದಿರವಾಗಿರು ಶ್ರೀ ಶಿರಡಿ ಸಾಯಿ ಬಾಬಾ ಮಂದಿರ ನಿರ್ಮಾಣದಿಂದ ನಿತ್ಯ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿ ಸೋಮವಾರ ಮತ್ತು ಗುರುವಾರ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ದೇವಸ್ಥಾನ ಉದ್ಘಾಟನೆ ನಂತರ ಕೆ.ಆರ್.ಪೇಟೆ ಮೂಲದ ಭಾರತಿ ಸಿಟಿ ಬಿಲ್ಡರ್ಸ್ ಅಂಡ್ ಡೆವಲಪರ್ಸ್‍ನ ಎಂಡಿ ನವೀನ್ ಕುಮಾರ್ 4.25 ಕೆಜಿಯ ಬೆಳ್ಳಿ ಕವಚವನ್ನು ದೇವಸ್ಥಾನದ ಗಣಪತಿ ಮೂರ್ತಿಗೆ ನೀಡುವ ಮೂಲಕ ಹರಕೆ ತೀರಿಸಿದ್ದರು.ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಶ್ರೀ ಶಿರಡಿ ಸಾಯಿ ಬಾಬಾ ಮಂದರದ ಬಾಬಾರ ಮೂರ್ತಿಗೆ ಹಿಮಗಿರಿ ಗ್ರೂಪ್ಸ್ ಶ್ರೀ ರಾಘವೇಂದ್ರ ಮತ್ತು ಕುಟುಂಬ ವರ್ಗದಿಂದ 5.75 ಲಕ್ಷ ರೂ ವೆಚ್ಚದ ಬೆಳ್ಳಿ ಕಿರೀಟವನ್ನು ಸಮರ್ಪಿಸಿದರು.
ಅನೇಕ ಭಕ್ತರ ಇಷ್ಟಾರ್ಥಗಳನ್ನು ಶ್ರೀ ಸಾಯಿ ಬಾಬಾ ಈಡೇರಿಸುತ್ತಿದ್ದು ದಿನದಿಂದ ದಿನಕ್ಕೆ ಸಾಯಿ ಬಾಬಾರಿಗೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಾರೆ ಎಂದು ಹೇಳಿದರು.
ದೇವಸ್ಥಾನ ನಿರ್ಮಾಣವಾದ ಮೇಲೆ ಪ್ರಮುಖ ಧಾರ್ಮಿಕ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಸಾಯಿ ಮಂದಿರಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಅಷ್ಟೇ ಅಲ್ಲ ದೇವಸ್ಥಾನ ಆರಂಭವಾದ ಮೇಲೆ ಗ್ರಾಮದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು ಶಿರಡಿಗೆ ಹೋಗಲು ಸಾಧ್ಯವಾಗದ ಭಕ್ತರು ಸೊಕ್ಕೆ ಗ್ರಾಮಕ್ಕೆ ಆಗಮಿಸಿ ಶ್ರೀ ಸಾಯಿ ಬಾಬಾರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಎಂದರು.
ಅನಂತ ಧನ್ಯವಾದಗಳು:
ಸೊಕ್ಕೆ ಗ್ರಾಮದ ಶ್ರೀ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಬರುವ ಭಕ್ತರಲ್ಲಿ ಬೆಂಗಳೂರಿನ ರಾಘವೇಂದ್ರ ಮತ್ತು ಕುಟುಂಬದವರು ಒಬ್ಬರಾಗಿದ್ದಾರೆ. ಶಿರಡಿ ಸಾಯಿಬಾಬಾ ಮೂರ್ತಿಗೆ 5.75 ಲಕ್ಷ ರೂ ಮೌಲ್ಯದ ಬೆಳ್ಳಿಕಿರೀಟವನ್ನು ಸಮರ್ಪಣೆ ಮಾಡಿರುವ ಅವರ ಕುಟುಂಬ ವರ್ಗಕ್ಕೆ ಶ್ರೀ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ ಹಾಗೂ ಸೊಕ್ಕೆ ಗ್ರಾಮಸ್ಥರು ಹಾಗೂ ಸಮಸ್ತ ಸಾಯಿ ಸದ್ಭಕ್ತರ ಪರವಾಗಿ ಅನಂತ ಅನಂತ ಧನ್ಯವಾದಗಳು.
ಸಾಯಿಬಾಬಾ ಸಕಲ ಸನ್ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸುವುದಾಗಿ ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ರಸ್ಟಿ ಹಾಗೂ ದಿಶಾ ಕಮಿಟಿ ಮಾಜಿ ಸದಸ್ಯೆ ಸ್ವಾತಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.