ಜಗಳೂರು: ದೊಣೆಹಳ್ಳಿ VSSN ಸಿಇಒ ಹುದ್ದೆ ದಲಿತರಿಗೆ ವಂಚನೆ ಪ್ರತಿಭಟನೆ

Suddivijaya
Suddivijaya September 20, 2023
Updated 2023/09/20 at 1:39 PM

ಸುದ್ದಿವಿಜಯ,ಜಗಳೂರು: ತಾಲೂಕಿನ ದೊಣೆಹಳ್ಳಿ ಕೃಷಿ ಪತ್ತಿನ ಸಹಕಾರ(ವಿಎಸ್‍ಎಸ್‍ಎನ್) ಸಂಘಕ್ಕೆ ಮುಖ್ಯಕಾರ್ಯನಿರ್ವಹಣಾಧಿಕಾರಿಯ ಹುದ್ದೆಗೆ ಮೇಲ್ವರ್ಗದ ವ್ಯಕ್ತಿಯನ್ನು ಕಾನೂನು ಬಾಹೀರಾಗಿ ನೇಮಕ ಮಾಡಿ ದಲಿತ ನೌಕರನಿಗೆ ವಂಚಿಸಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು.

ದಸಂಸ ಸಂಚಾಲಯ ಬಿ.ಸತೀಶ್ ಮಾತನಾಡಿ, ವಿಎಸ್‍ಎಸ್‍ಎನ್ ನಲ್ಲಿ ಖಾಲಿ ಇರುವ ಸಿಇಒ ಹುದ್ದೆಗೆ ಅರ್ಹರನ್ನು ಪರಿಗಣಿಸದೇ ಕಾನೂನು ಬಾಹಿರವಾಗಿ ಅನರ್ಹ ಯುವಕನನ್ನು ನೇಮಕ ಮಾಡಿಕೊಳ್ಳಲಾಗಿದೆ.

ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಟೆಂಡರ್ ಮತ್ತು ಮಾರಾಟಗಾರ ಎ.ಟಿ.ತಿಪ್ಪೇಸ್ವಾಮಿ ಅವರಿಗೆ ವಂಚಿಸಲಾಗಿದೆ. ತಿಪ್ಪೇಸ್ವಾಮಿ ಅವರು ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸಿಇಒ ಹುದ್ದೆ ಕೊಡದೇ ಇರಲು ಕಾರಣವೇ ದಲಿತ ವ್ಯಕ್ತಿ ಎಂದು ನಿರಾಕರಿಸಲಾಗಿದೆ. ಜಗಳೂರು ತಾಲೂಕಿನ ತಹಶೀಲ್ದಾರ್ ಕಚೇರಿಯ ಮುಂದೆ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.ಜಗಳೂರು ತಾಲೂಕಿನ ತಹಶೀಲ್ದಾರ್ ಕಚೇರಿಯ ಮುಂದೆ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಇದಕ್ಕೆ ಕಾರಣರಾಗಿರುವ ಆಡಳಿತ ಮಂಡಳಿ ಮತ್ತು ಉಸ್ತುವಾರಿ ಸಹಕಾರ ಸಂಘಗಳ ಸಹಾಯಕ ನಿಭಂದಕರಾಗಿದ್ದು ಅವರ ವಿರುದ್ಧ ತಕ್ಷಣವೇ ಎಸ್ಸಿ,ಎಸ್ಟಿ ದೌರ್ಜನ್ಯ ಕಾಯ್ದೆ ಅನುಸಾರ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಡಿಎಸ್‍ಎಸ್ ಮುಖಂಡ ಸೂರಗೊಂಡನಹಳ್ಳಿ ಕುಬೇಂದ್ರಪ್ಪ ಮಾತನಾಡಿ, ಆಡಳಿತ ಮಂಡಳಿಯವರು ಅರ್ಹ ವ್ಯಕ್ತಿಯಾಗಿರುವ ತಿಪ್ಪೇಸ್ವಾಮಿ ಅವರಿಗೆ ವಂಚಿಸಿದ್ದಾರೆ. ಸಿಒಓ ಸ್ಥಾನಕ್ಕೆ ಎಸ್.ವಿ.ಮನೋಜ್ ಎಂಬ ಯುವಕನನ್ನು ಕಾನೂನಿಗೆ ವಿರುದ್ಧವಾಗಿ ನೇಮಕ ಮಾಡಲಾಗಿದ್ದು,

ನೇಮಕಾತಿಯಾಗಿರುವ ಯುವಕ ಅದೇ ಸಂಸ್ಥೆಯಲ್ಲಿ ನಾಲ್ಕು ವರ್ಷಗಳ ಕಾಲ ಅನುಭವ ಹೊಂದಿರಬೇಕು ಎಂಬ ನಿಯಮವಿದೆ. ಆದರೆ ಆ ಯುವಕನಿಗೆ ಅನುಭವವೇ ಇಲ್ಲ. ನಿಯಮಗಳನ್ನು ಗಾಳಿಗೆ ತೂರಲಾಗಿದೆ. ವಾಸ್ತವವಾಗಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು ಸೇರಿಕೊಂಡು ಕಾನೂನು ಬಾಹಿರವಾಗಿ ನೇಮಕ ಮಾಡಿಕೊಂಡಿದ್ದಾರೆ.

ತಕ್ಷಣವೇ ಎಸ್.ವಿ.ಮನೋಜ್ ಅವರನ್ನೇ ಸಿಇಓ ಹುದ್ದೆಗೆ ನೇಮಿಸಿದ್ದಾರೆ. ಆದರೆ 25 ವರ್ಷ ಅನುಭವವಿರುವ ತಿಪ್ಪೇಸ್ವಾಮಿಗೆ ಸಿಇಓ ಹುದ್ದೆ ಕೊಡದೇ ವಂಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ಓಬಳೇಶ್, ಗ್ಯಾಸ್ ಓಬಣ್ಣ, ಪೂಜಾರ್ ಸಿದ್ದಪ್ಪ, ಹೋರಾಟಗಾರ ಮಹಾಲಿಂಗಪ್ಪ ಮಾತನಾಡಿ ತಕ್ಷಣವೇ ಮನೋಜ್ ಸಿಇಒ ಹುದ್ದೆಯಿಂದ ಕೆಳಗಿಳಿಸಿ ಅವರ ಜಾಗಕ್ಕೆ ತಿಪ್ಪೇಸ್ವಾಮಿ ನೇಮಕ ಮಾಡಿ ಎಂದು ತಾಲೂಕು ಸಹಾಕರ ಸಂಘಗಳ ಅಭಿವೃದ್ಧಿ ಅಧಿಕಾರಿ ಹರೀಶ್‍ಕುಮಾರ್ ಅವರಿಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಸ್ಟೂರ್ ನಿಂಗಪ್ಪ, ಆರ್. ಬಸವರಾಜ್, ಪಲ್ಲಾಗಟ್ಟೆ ರವಿಚಂದ್ರ, ಕರಿಬಸಪ್ಪ, ಹನುಮಂತಪ್ಪ, ಜಗಜೀವನ್‍ರಾಮ್, ಕುಬೇರಪ್ಪ, ಮೈಲಾರಿ, ದುರುಗೇಶ್, ಕೆ.ವಸಂತ, ಬಿ.ಟಿ.ಪವನ್, ಎನ್.ನಾಗರಾಜ್ ಸೇರಿದಂತೆ ಅನೇಕ ದಲಿತ ಮುಖಂಡರು ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!