ಮಾಜಿ ಶಾಸಕ HPR ಜನ್ಮದಿನ, ಮಕ್ಕಳಿಗೆ ಬ್ಯಾಗ್ ವಿತರಣೆ

Suddivijaya
Suddivijaya July 12, 2024
Updated 2024/07/12 at 12:55 PM

suddivijayanews12/07/2024
ಸುದ್ದಿವಿಜಯ, ಜಗಳೂರು: ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಎಚ್.ಪಿ.ರಾಜೇಶ್ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಮುಖಂಡರು ಬುಳ್ಳೇನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿ ಸಿಹಿ ಹಂಚಿದರು.

ಬಿಜೆಪಿ ಮುಖಂಡ ಕಾನನಕಟ್ಟೆ ಕೆ.ಎಸ್.ಪ್ರಭು ಮಾತನಾಡಿ, ಕ್ಷೇತ್ರದಲ್ಲಿ ಜಾರಿಯಾದ ಎರಡು ಮಹತ್ವದ ನೀರಾವರಿ ಯೋಜನೆಗಳಾದ 57 ಕೆರೆಗಳಿಗೆ ತುಂಗಭದ್ರ ನೀರು ತುಂಬಿಸುವ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳಿಗೆ ಮಾಜಿ ಶಾಸಕ ಎಚ್.ಪಿ.ರಾಜೇಶ್ ಕೊಡುಗೆ ಅಪಾರವಾಗಿದೆ.

2013 ರಿಂದ 2018 ರವರಿಗಿನ ಅವರ ಆಡಳಿತ ಸುವರ್ಣ ಯುಗದಂತೆ ಇತ್ತು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್ಸಿ-ಎಸ್ಟಿ ಹಾಗು ಸಾಮಾನ್ಯ ವರ್ಗದ ಕಾಲೋನಿಗಳಿಗೆ ಸಿಸಿ ರಸ್ತೆಗಳು ನಿರ್ಮಾಣ, ಶುದ್ದಕುಡಿಯುವ ನೀರಿನ ಘಟಗಳ ನಿರ್ಮಾಣ, ಎರಡು ಸಾವಿರ ರೈತರಿಗೆ ಭೂಮಿ ಹಕ್ಕುಪತ್ರ ವಿತರಣೆ ಗ್ರಾಮ ವಿಕಾಸ ಯೋಜನೆಯಡಿ ಸಮಗ್ರ ಗ್ರಾಮ ಅಭಿವೃದ್ಧಿ,

ಜಗಳೂರು ತಾಲೂಕಿನ ಮಾಜಿ ಶಾಸಕ ಎಚ್.ಪಿ.ರಾಜೇಶ್ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಬುಳ್ಳೇನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿದರು.
ಜಗಳೂರು ತಾಲೂಕಿನ ಮಾಜಿ ಶಾಸಕ ಎಚ್.ಪಿ.ರಾಜೇಶ್ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಬುಳ್ಳೇನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿದರು.

ಕೃಷಿ ಹೋಂಡ, ಪಾಲಿಹೌಸ್, ಪಶುಭಾಗ್ಯ, ಸರಕಾರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಹಲವಾರು ಯೋಜನೆಗಳನ್ನ ಸಮರ್ಪಕವಾಗಿ ಅಭಿವೃದ್ಧಿ ಪಡಿಸಿದ ಕೀರ್ತಿ ಎಚ್.ಪಿ.ರಾಜೇಶ್ ಅವರಿಗೆ ಸಲ್ಲುತ್ತದೆ ಎಂದರು.

ಹುಟ್ಟುಹಬ್ಬವನ್ನು ಆಡಂಬರವಾಗಿ ಆಚರಿಸಿ ಅನಗತ್ಯ ದುಂದು ವೆಚ್ಚದ ಬದಲು ಸರಕಾರಿ ಶಾಲಾ ಮಕ್ಕಳಿಗೆ ಪ್ರೊತ್ಸಾಹ ನೀಡುವ ಮೂಲಕ ಅಭಿಮಾನಿ ಬಳಗದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಎಂದರು.

ಬಳಗದ ಮುಖಂಡ ಬಿ.ಲೋಕೇಶ್ ಮಾತನಾಡಿ, ಅಧಿಕಾರ ಇಲ್ಲದೆ ಇರಬಹುದು. ಆದರೆ ಕ್ಷೇತ್ರದ ಮತದಾರರ ಅಭಿಮಾನ ಗಳಿಸಿರುವುದು ಅವರ ವ್ಯಕ್ತಿತ್ವ ಎತ್ತಿತೋರುತ್ತದೆ.

ಭಗವಂತ ಅವರಿಗೆ ಆರೋಗ್ಯ ಆಯುಷ ಕರುಣಿಸಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಮುಖಂಡರಾದ ಪಿ.ರೇವಣ್ಣ, ದೊಣ್ಣೆಹಳ್ಳಿ ನಾಗರಾಜಯ್ಯ, ತಿಪ್ಪೇಸ್ವಾಮಿ, ಹೊನ್ನೂರು ಸ್ವಾಮಿ, ಅಭಿಲಾಶ್, ಬುಳ್ಳನಹಳ್ಳಿ ಗಾದ್ರಿಲಿಂಗಪ್ಪ, ಹನುಮಂತಪ್ಪ, ರವಿಕುಮಾರ್, ಮುಖ್ಯಶಿಕ್ಷಕರು ಟೀಪು ಸುಲ್ತಾನ್, ಶಿಕ್ಷಕಿಯರು ಮೀನಾಕ್ಷಮ್ಮ, ಶಕುಂತಲಮ್ಮ, ಹಾಲಮ್ಮ ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!