suddivijayanews26/08/2024
ಸುದ್ದಿವಿಜಯ, ಜಗಳೂರು: ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ದೇಹದಾಢ್ರ್ಯ ಮತ್ತು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಪ್ರೌಢ ಶಾಲಾ ಶಿಕ್ಷಕ ಆರ್.ಎಸ್.ಓಬಳೇಶ್ಗೆ ಸನ್ಮಾನಿಸಲಾಯಿತು.
ಪಟ್ಟಣದ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಸೋಮವಾರ ಸನ್ಮಾನ ಕಾರ್ಯಕ್ರಮದಲ್ಲಿ ತಪಸ್ಸು ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಮಂಜುನಾಥ್ ಗುರುಜಿ ಮಾತನಾಡಿ,
ನಮ್ಮ ತಾಲೂಕಿನ ಸಣ್ಣ ಗ್ರಾಮವಾದ ಖಿಲಾಕಣ್ವಕುಪ್ಪೆ ಗ್ರಾಮದ ರೈತರ ಮಗ ಆರ್.ಎಸ್.ಓಬಳೇಶ್ ಬಡತನ ಕುಟುಂಬದಲ್ಲಿ ಬೆಳೆದು ಪ್ರೌಢ ಶಾಲೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾ ದೇಹದಾಢ್ರ್ಯ ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿರುವುದು ಸಂತೋಷ ತಂದಿದೆ.
ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಾ, ಬಿಡುವಿನ ಸಮಯದಲ್ಲಿ ದೇಹಕ್ಕೆ ಕಸರತ್ತು ಮಾಡಿ ದೇಹವನ್ನು ಉರಿಗೊಳಿಸಿ ದೇಹದಾಢ್ಯ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿಯೇ ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಪ್ರಥಮ ಸ್ಥಾನ ಪಡೆದು ಈಗಿನ ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ.
ಮುಂದೆ ರಾಷ್ಟ್ರಮಟ್ಟ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಸ್ಪರ್ಧೆಯಲ್ಲಿ ಗೆಲುವು ಕಾಣಲಿ ಎಂದು ಆಶಿಸಿದರು.
ಉಪ ಪ್ರಾಂಶುಪಾಲ ಡಿ.ಡಿ.ಹಾಲಪ್ಪ ಮಾತನಾಡಿ, ಆರ್.ಓಬಳೇಶ್ ರವರು ನಮ್ಮ ಶಾಲಾ ವತಿಯಿಂದ ಪ್ರತಿನಿಧಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವುದು ನಮ್ಮ ಶಾಲೆಗೂ ಕೀರ್ತಿ ತಂದಿದೆ. ಮುಂದಿನ ರಾಷ್ಟ್ರಮಟ್ಟದ ಸ್ಪರ್ಧೆಗೆ ತಯಾರಿ ನಡೆಸಲು ನಮ್ಮಿಂದ ಸಂಪೂರ್ಣ ಸಹಕಾರ ಇರುತ್ತದೆ ಎಂದರು.
ದೇಹದಾಢ್ಯ ಜಿಮ್ ಟ್ರೈನರ್ ಜಗದೀಶ್ ಕೆಳಗೋಟೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವ ಜನತೆ ದುಶ್ಚಟಗಳಿಗೆ ದಾಸರಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾ ಇದ್ದಾರೆ. ದುಶ್ಚಟ ಹಾಗೂ ವ್ಯಸನಗಳಿಂದ ದೂರವಾಗಲು ವ್ಯಾಯಾಮ ಉತ್ತಮ ಮಾರ್ಗವಾಗಿದೆ ಇದನ್ನು ಎಲ್ಲರೂ ಅನುಸರಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಮ್ ನ ತಾಲೀಮು ಪಟುಗಳಾದ ಮಲೆಮಾಚಿಕೆರೆ ಬಿ.ಸತೀಶ್, ಜಗಜೀವನ್ ರಾಮ್ ಆರ್.ಎಲ್, ದರ್ಶನ್ ಸಂಗೊಳ್ಳಿ, ಚಂದ್ರು ರೂಢಪಲ್, ಮುರುಗೇಶ್, ನಾಗರಾಜ್, ಸಂದೀಪ್,
ಶೋಖತ್, ಪಾತಲಿಂಗ ಹಾಗೂ ಶಿಕ್ಷಕರಾದ ಆರ್.ರಮೇಶ್, ಎನ್ ಸುರೇಶ್, ಆರ್.ರಾಣಿ, ಮಹಮದ್ ಶರೀಫ್, ಜೆ.ಎಂ.ಮುನ್ನಾಸಾಬ್, ಜಾತಪ್ಪ, ಸಿ.ಮಹೇಶ್, ಬಿ.ಟಿ. ಶೋಭಾ ಸೇರಿದಂತೆ ಶಿಕ್ಷಕರ ವರ್ಗ, ಶಾಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.