ಜಗಳೂರು:ವಿದ್ಯಾರ್ಥಿಗಳು ಸದೃಢವಾಗಲು ಕರಾಟೆ ಕಲಿಯಿರಿ-ಮಾಜಿ ಶಾಸಕ ಎಚ್.ಪಿ.ರಾಜೇಶ್

Suddivijaya
Suddivijaya September 3, 2022
Updated 2022/09/03 at 11:45 AM

ಸುದ್ದಿವಿಜಯ, ಜಗಳೂರು: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ದೇಹಾರೋಗ್ಯ ಅತ್ಯಂತ ಮುಖ್ಯ. ಕನಸನ್ನು ನನಸಗಿಸಲು ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಅಭಿಪ್ರಾಯಪಟ್ಟರು.

ತಾಲೂಕು ಆಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಪಪಂ, ತಾಪಂ, ಕ್ಷೇತ್ರ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸರಕಾರಿ ಪದವಿ ಪೂರ್ವ ಕಾಲೇಜಿ ಮತ್ತು ದಾವಣಗೆರೆಯ ಕರಾಟೆ ಕೇಸರಿ ಅಸೋಸಿಯೇಷನ್, ಸುದ್ದಿವಿಜಯ ವೆಬ್ ನ್ಯೂಸ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಅಮೃತ ವನಿತಾ ಉಚಿತ ಕರಾಟೆ ಶಿಬಿರ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್
ಮಾಜಿ ಶಾಸಕ ಎಚ್.ಪಿ.ರಾಜೇಶ್

ಕರಾಟೆ ಮತ್ತು ಮಾರ್ಷಲ್ ಆಟ್ರ್ಸ್ ಕಲೆಗಳನ್ನು ನಾವು ಕಲಿಯುವ ಅಗತ್ಯವಿದೆ. ಕಬಡ್ಡಿ, ಕುಸ್ತಿಯಂತೆಯೇ ಅದು ಸಹ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಇಂತಹ ಕಲೆ ಅತ್ಯಂತ ಅವಶ್ಯಕವಾಗಿದೆ.

ಒಂದು ಅಧ್ಯಯನದ ಪ್ರಕಾರ ಪುರಷರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ ಎಂದು ತಿಳಿದು ಬಂದಿದೆ. ಆದರೆ ಮಹಿಳೆಯರು ಮಾನಸಿಕವಾಗಿ ಸದೃಢವಾಗಿರುವುದುಕ್ಕೆ ಜಾನ್ಸಿರಾಣಿ ಲಕ್ಷ್ಮಿಭಾಯಿ, ಒನಕೆ ಓಬಬ್ಬ, ಕಿತ್ತೂರು ರಾಣಿ ಚನ್ನಮ್ಮ ರಂತಹ ವೀರ ಮಹಿಳೆಯರು ಬ್ರಿಟೀಷರ ವಿರುದ್ಧ ಹೋರಾಟಿ ಈ ದೇಶ ರಕ್ಷಣೆಗೆ ಶ್ರಮಿಸಿದ ವೀರ ವನಿತೆಯರು.

ಅವರಂತೆ ನೀವು ಸಹ ಸದೃಢರಾಗಬೇಕು. ನಿಮ್ಮಲ್ಲಿ ಮಾನಸೀಕ ಒತ್ತಡಗಳು ಉಂಟಾದರೆ ಗುರುಗಳು, ಪೋಷಕರು ಮತ್ತು ಸ್ನೇಹಿತರ ಬಳಿ ಹಂಚಿಕೊಳ್ಳಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ, ಬಾಹ್ಯವಾಗಿ ಗಂಡು ಹೆಣ್ಣು ಎಂದು ವರ್ಗೀಕರಣ ಮಾಡಿಕೊಂಡಿದ್ದೇವೆ. ಆದರೆ ಒಗಿರುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ. ಅವರರವರ ಸಾಮಥ್ರ್ಯದ ಮೇಲೆ ಅವರರವರ ವ್ಯಕ್ತಿತ್ವ, ಜೀವನ ರೂಪುಗೊಂಡಿರುತ್ತದೆ. ಆತ್ಮರಕ್ಷಣೆ ಕಲೆ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು. ಸಮಾಜದಲ್ಲಿರುವ ದುಷ್ಟ ಶಕ್ತಿಗಳನ್ನು ಸಧೆ ಬಡೆಯಬೇಕಾದರೆ ನಿಮ್ಮಲ್ಲಿರುವ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದರು.

ಜಗಳೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಮೃತ ವನಿತಾ ಸಮರ ಕಲೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಜಗಳೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಮೃತ ವನಿತಾ ಸಮರ ಕಲೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಭಾರತಿ ಅಕ್ಕ ಮಾತನಾಡಿ, ಹೆಣ್ಣು ಈ ಸಮಾಜದಲ್ಲಿ ಸಬಲರಾಗಬೇಕಾದರೆ, ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕಾದರೆ ಮಾರ್ಷಲ್ ಆಟ್ರ್ಸ್‍ಗಳನ್ನು ಹೆಚ್ಚು ಕಲಿಯಬೇಕು. ಸಮಾಜದಲ್ಲಿ ದುಷ್ಟ ಶಕ್ತಿಗಳ ನಿರ್ಮೂಲನೆಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಅಗತ್ಯವಿದೆ ಎಂದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಜಗಳೂರು ಪಟ್ಟಣದಲ್ಲಿ ಇಂತಹ ಶಿಬಿರವನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಾರೂ ಆಯೋಜನೆ ಮಾಡಿರಲಿಲ್ಲ. ಮಹಿಳಾ ಸಬಲೀಕರಣಕ್ಕೆ ಅತ್ಯಂತ ಉಪಯುಕ್ತವಾದ ಅಭ್ಯಾಸವಾಗಿದೆ ಎಂದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಮಾತನಾಡಿ, ವಿದ್ಯಾರ್ಥಿನಿಯರು ಇಂತಹ ಕಲೆಗಳನ್ನು ಮೈಗೂಡಿಸಿಕೊಂಡರೆ ಪೊಲೀಸ್ ಇಲಾಖೆಗೆ ಒತ್ತಡ ಕಡಿಮೆಯಾಗುತ್ತದೆ. ಸಮಾಜದಲ್ಲಿರುವ ದುಷ್ಟ ಶಕ್ತಿಗಳಿಗೆ ನೀವೇ ಪಾಠ ಕಲಿಸಲು ಇದು ಸಹಕಾರಿಯಾಗಲಿದೆ ಎಂದರು.


ಸರಕಾರಿ ಕಾಲೇಜಿನ ಉಪಪ್ರಾಂಶುಪಾಲ ಡಿ.ಡಿ.ಹಾಲಪ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ, ಹಿರಿಯ ಪತ್ರಕರ್ತರಾದ ಅಣಬೂರು ಮಠದ ಕೊಟ್ರೇಶ್, ಬಿ.ಪಿ.ಸುಭಾನ್, ಡಿ.ಶ್ರೀನಿವಾಸ್, ಕರಾಟೆ ಕೇಸರಿ ಕಾರ್ಯದರ್ಶಿ ಕುಬೇರ್‍ನಾಯ್ಕ್, ನಾಗರಾಜ್ ನಾಯ್ಕ್ ಧ್ಯನ್ಯಕುಮಾರ್, ಪಪಂ ಆರೋಗ್ಯಾಧಿಕಾರಿ ಕಿಫಾಯತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರು ದಿನಗಳ ಕಾಲ ಕರಾಟೆ ಕಲಿತ ವಿದ್ಯಾರ್ಥಿಗಳು ತಮ್ಮ ಕರಾಟೆ ಪ್ರದರ್ಶಿಸಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!