ಜಗಳೂರು: ಬಂಜಾರ ಸಮುದಾಯ ಮೇಲೆ ದಬ್ಬಾಳಿಕೆ ಸಹಿಸುವುದಿಲ್ಲ: ಸೇವಾಲಾಲ್ ಸರ್ದಾರ್ ಸ್ವಾಮೀಜಿ

Suddivijaya
Suddivijaya October 6, 2022
Updated 2022/10/06 at 4:01 PM

ಸುದ್ದಿವಿಜಯ, ಜಗಳೂರು: ಅನ್ಯ ಧರ್ಮಿಯರು ಬಂಜಾರ (ಲಂಬಾಣಿ) ಬುಡಕಟ್ಟು ಸಂಸ್ಕøತಿಯ ಮೇಲೆ ದಬ್ಬಾಳಿಕೆ ಮಾಡುವ ಮೂಲಕ ಮತಾಂತರ ಮಾಡುವ ಷಡ್ಯಂತ್ರಗಳು ನಡೆಯುತ್ತಿವೆ ಎಂದು ಚಿತ್ರದುರ್ಗದ ಶ್ರೀ ಸೇವಲಾಲ್ ಸಂಸ್ಥಾನ ಬಂಜಾರ ಗುರುಪೀಠದ ಸೇವಾಲಾಲ್ ಸರ್ದಾರ್ ಸ್ವಾಮೀಜಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮತಾಂತರ ಹೋಲಾಡಿಸುವ ನಿಟ್ಟಿನಲ್ಲಿ ಜಾಗೃತಿಗಾಗಿ ಐತಿಹಾಸಿಕ ಸ್ಥಳ ಚಿತ್ರದುರ್ಗದಲ್ಲಿ ಅಕ್ಟೋಬರ್ 10 ಮತ್ತು 11 ರಂದು ಬಂಜಾರ ಬುಡಕಟ್ಟು ಸಂಸ್ಕøತಿ ಉತ್ಸವ, ಯುವ ಜಾಗೃತಿ ಸಮಾವೇಶ, ಲೋಕ ಕಲ್ಯಾಣಾರ್ಥಕವಾಗಿ ಶ್ರೀ ಸೇವಲಾಲ್ ಬೋಗ್ ಸಾಮೂಹಿಕ ಪೂಜೆ ಪ್ರಾರ್ಥನೆ ನಡೆಯಲಿದೆ.

ಲಂಬಾಣಿ ಸಮಾಜ ತನ್ನದೇ ಸಂಸ್ಕøತಿ, ಪರಂಪರೆ ಹೊಂದಿದ್ದು. ಇತ್ತೀಚೆಗೆ ಕಣ್ಮರೆಯಾಗುತ್ತಿವೆ ಈ ನಿಟ್ಟಿನಲ್ಲಿ ಜಾಗೃತಿ ಅಗತ್ಯವಾಗಿದೆ ಎಂದರು.

ಬಂಜಾರ್ ನಿಗಮ, ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿ, ಕೆಲವರಿಗೆ ಎಂಎಲ್‍ಸಿ, ಎಂಎಲ್ ಎ ಸೇರಿದಂತೆ ರಾಜಕೀಯ ಸ್ಥಾನಮಾನಗಳು ಲಭಿಸಿವೆ ಸರಕಾರ ಬೇಡಿಕೆ ಈಡೇರಿಸಿದ್ದು ಸ್ವಾಗತರ್ಹ. ಆದರೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ತಮ್ಮ ಹೊಟ್ಟೆಪಾಡಿಗಾಗಿ ಅನ್ಯ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದು. ನಮ್ಮ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಕೊಡಲಿಪಟ್ಟು ಬಿದ್ದಿದೆ.

 06ಜೆಎಲ್‍ಆರ್‍ಚಿತ್ರ2ಎ: ಜಗಳೂರು ಪಟ್ಟಣ ಪ್ರವಾಸಿ ಮಂದಿರದಲ್ಲಿ ಶ್ರೀ ಸೇವಲಾಲ್ ಸಂಸ್ಥಾನ ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸರ್ದಾರ್ ಸ್ವಾಮೀಜಿಯವರನ್ನು ತಾಲ್ಲೂಕು ಬಂಜಾರ, ಸೇವಾಲಾಲ್ ಸಂಘದಿಂದ ಸನ್ಮಾನಿಸಲಾಯಿತು.
ಜಗಳೂರು ಪಟ್ಟಣ ಪ್ರವಾಸಿ ಮಂದಿರದಲ್ಲಿ ಶ್ರೀ ಸೇವಲಾಲ್ ಸಂಸ್ಥಾನ ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸರ್ದಾರ್ ಸ್ವಾಮೀಜಿಯವರನ್ನು ತಾಲ್ಲೂಕು ಬಂಜಾರ, ಸೇವಾಲಾಲ್ ಸಂಘದಿಂದ ಸನ್ಮಾನಿಸಲಾಯಿತು.

ಆದ್ದರಿಂದ ವಸತಿ ಶಾಲೆಗಳನ್ನು ತೆರಯಬೇಕು ಹಾಗೂ ಇತರೆ ಬೇಡಿಕೆಗಳನ್ನು ಕಾರ್ಯಕ್ರಮದ ಮೂಲಕ ಮನವಿಮಾಡಲಾಗುವುದು. ಕುಗ್ರಾಮ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಅನುಮೋದನೆ ಸಿಕ್ಕಿದ್ದು ಶೀಘ್ರ ಅನುಷ್ಠಾನಗೊಳಿಸಬೇಕಿದೆ. ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಪ್ರಭು ಚವ್ಹಾಣ್, ಸಂಸದ ಜಿ.ಎಂ ಸಿದ್ದೇಶ್ವರ್, ಶಾಮನೂರು ಶಿವಶಂಕರಪ್ಪ, ಪಿ.ರಾಜೀವ್, ನಟ ದೊಡ್ಡಣ್ಣ, ಸೇರಿದಂತೆ ಹಾಲಿ ಮತ್ತು ಮಾಜಿ ಶಾಸಕರು ಸಂಸದರು. ಮತ್ತು ಗಣ್ಯರು ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ಲಂಬಾಣಿ ಸಮಾಜದ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ ನಾಯ್ಕ ಮಾತನಾಡಿ, ಚಿತ್ರದುರ್ಗದಲ್ಲಿ ಅಕ್ಟೋಬರ್ 10 ಮತ್ತು 11 ರಂದು ಬಂಜಾರ (ಲಂಬಾಣಿ) ಬುಡಕಟ್ಟು ಸಂಸ್ಕøತಿ ಉತ್ಸವ, ಯುವ ಜಾಗೃತಿ ಸಮಾವೇಶಕ್ಕೆ ತಾಲ್ಲೂಕಿನಿಂದ ಎಲ್ಲಾ ನಮ್ಮ ಸಮಾಜ ಬಾಂಧವರು ನೆರೆಹೊರೆಯ ಜಿಲ್ಲೆ ಹಾಗೂ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಲಂಬಾಣಿ ಸಂಘದ ಕಾರ್ಯದರ್ಶಿ ಸುರೇಶ್‍ನಾಯ್ಕ್, ಅಣಬೂರು ಶಿವು, ಸತೀಶ್‍ನಾಯ್ಕ, ದತ್ತು, ಅಣ್ಣಪ್ಪ, ಸಿದ್ದೇಶ್, ಪ್ರಶಾಂತ್, ಕುಮಾರ್ ಸೇರಿದಂತೆ ಇತರರು ಇದ್ದರು.

ಹಣದ ಆಮಿಷ:

ಮೂಢನಂಬಿಕೆಗಳ ಹೆಸರಿನಲ್ಲಿ ಪ್ರಚೋದನೆ ನೀಡಿ ಹಣದ ಆಮಿಷಗಳೊಡ್ಡಿ ಕೆಲ ಧರ್ಮಗಳು ನಮ್ಮ ಸಮುದಾಯದ ಮಹಿಳೆಯರು ಯುವಕರಿಗೆ ಮತಾಂತರಗೊಳಿಸುತ್ತಿರುವ ಹುನ್ನಾರ ನಡೆಸುತ್ತಿವೆ. ಹೀಗಾಗಿ ಹಳ್ಳಿ ಹಳ್ಳಿಗಳಿಗೂ ಜಾಗೃತಿ ಮೂಡಿಸಲಾಗುವುದು. ಅಲ್ಲದೆ ಮದ್ಯಪಾನ ಜಾಗೃತಿ ಮೂಡಿಸಲಾಗುವುದು. ರಾಜ್ಯದಲ್ಲಿ 35ಕ್ಕೂ ಅಧಿಕ ಲಕ್ಷ ಜನಸಂಖ್ಯೆಯನ್ನು ಬಂಜಾರ ಸಮಾಜ ಹೊಂದಿದೆ ಎಂದು ಸೇವಾಲಾಲ್ ಸ್ವಾಮೀಜಿ ಉತ್ತರಿಸಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!