ಸುದ್ದಿವಿಜಯ, ಜಗಳೂರು: ರಾಜೇಶ್ ಅವರು 2008ರಲ್ಲಿ ಸೋತರು, 2011ರಲ್ಲಿ ಪಕ್ಷದ ಪರ ಸ್ಪರ್ಧಿಸು ಬಾ ಎಂದು ಕರೆದೆವು. ಆದರೆ ಪಕ್ಷೇತರ ಅಭ್ಯಾರ್ಥಿಯಾಗಿ ಸ್ಪರ್ಧಿಸಿ ಅವರು ಸೂತರು. 2013ರ ಚುನಾವಣೆಯಲ್ಲಿ ಪಕ್ಷಕ್ಕೆ ಕರೆ ತಂದು ಅವರನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಿದೆವು ಆದರೆ 2018ರಲ್ಲಿ ಸೋಲುತ್ತಾರೆ ಎಂದು ಗೊತ್ತಿದ್ದರೂ ಅವರಿಗೆ ಟಿಕೆಟ್ ಕೊಟ್ಟೆವು. 29 ಸಾವಿರ ಮತಗಳ ಅಂತರದಿಂದ ಸೋತರು. ಈ ಬಾರಿ ನಿಮಗೆ ಟಿಕೆಟ್ ಕೊಡಲ್ಲ ಎಂದು ಹೇಳಿದ್ದೆವು ಎಂದು ರಾಜೇಶ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪಟ್ಟಣದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜೇಶ್ ಅವರು ಸುಳ್ಳು ಹೇಳಿ ಮತ್ತೆ ಕಾಂಗ್ರೆಸ್ ವಿರುದ್ಧವೇ ಅವರು ಕಣಕ್ಕಿಳಿದಿದ್ದಾರೆ ಅವರನ್ನು ಮತದಾರರು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಟಿಕೆಟ್‍ಗಾಗಿ ಪಾಲಯ್ಯ, ದೇವೇಂದ್ರಪ್ಪ ಅರ್ಜಿ ಸಲ್ಲಿಸಿದ್ದರು. ಆದರೆ ದೇವೇಂದ್ರಪ್ಪ ಅವರನ್ನು ನಮ್ಮ ವರಿಷ್ಠರು ಆಯ್ಕೆ ಮಾಡಿದರು. ಟಿಕೆಟ್ ಸಿಗಲಿಲ್ಲ ಎಂದು ಪಾಲಯ್ಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದಿತ್ತು. ಅವರಲ್ಲಿ ಪಕ್ಷ ನಿಷ್ಠೆಯಿದೆ.
ಆದರೆ ರಾಜೇಶ್ ಟಿಕೆಟ್ ಸಿಗಲಿಲ್ಲ ಎಂದು ಹೊರ ಹೋಗಿದ್ದಾರೆ. ಪಕ್ಷ ಟಿಕೆಟ್ ಕೊಟ್ಟರೆ ವರಿಷ್ಠರು ಒಳ್ಳೆಯವರು. ಕೊಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಅವರ ಸ್ವಾರ್ಥ ಅಲ್ಲವೇ ಎಂದು ಪ್ರಶ್ನಿಸಿದರು.