ಸುದ್ದಿವಿಜಯ, ಜಗಳೂರು: ತಾಲೂಕಿನ ದೊಣೆಹಳ್ಳಿಯಲ್ಲಿರುವ ಶಾಖಾ ಮಠವಾಗಿರವ ಶ್ರೀಶರಣ ಬಸವೇಶ್ವರ ಸ್ವಾಮಿ ದಾಸೋಹ ಮಠದ ದೇವಸ್ಥಾನದ ನೂತನ ಮಹಾದ್ವಾರ ಮತ್ತು ಕಲ್ಯಾಣಿ ನಿರ್ಮಾಣಕ್ಕೆ ಸೆ.4 ರಂದು ಸೋಮವಾರ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಕಾನಾಮಡುಗು ಶರಣ ಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿ ಐಮಡಿ ಶರಣಾರ್ಯರು ತಿಳಿಸಿದರು.
ಪಟ್ಟಣದ ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುರುಘಾ ಪರಂಪರೆಯ ಹಿನ್ನೆಲೆಯ ಮಠ ದೊಣೆಹಳ್ಳಿಯಲ್ಲಿದ್ದು, ಗ್ರಾಮದಲ್ಲಿ ಸೆ.4 ರಂದು ಬೆಳಿಗ್ಗೆ 9.15 ರಿಂದ 10.30ಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು.
ಪೂಜಾ ಕಾರ್ಯಕ್ರಮಕ್ಕೆ ಬೆಂಗಳೂರಿನ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ಪಟ್ಟಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ದೇವರು ಭಾಗವಹಿಸಲಿದ್ದಾರೆ.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನೂತನ ಮಠ ನಿರ್ಮಾಣ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಎಚ್.ಪಿ.ರಾಜೇಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಜೆ.ಎಸ್.ವೇಣುಗೋಪಾಲರೆಡ್ಡಿ, ಕಿತ್ತೂರು ಜಯ್ಯಣ್ಣ, ಮಾಲತೇಶಪ್ಪ, ಜಿಪಂ ಮಾಜಿ ಸದಸ್ಯ ಸಿದ್ದಿಹಳ್ಳಿ ರಾಮರೆಡ್ಡಿ,
ತಾಪಂ ಮಾಜಿ ಅಧ್ಯಕ್ಷ ಗಡಿಮಾಕುಂಟೆ ಶಿವಕುಮಾರ್, ಬಳ್ಳಾರಿ ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ್, ವೇದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಮಧುರೆ ರವಿಚಂದ್ರ, ಗ್ರಾಮದ ಮುಖಂಡರಾದ ಎಚ್.ಹನುಮಂತರೆಡ್ಡಿ, ಜಿ.ಬಸವರಾಜಪ್ಪ, ಆರ್.ವೀರೇಶ್, ಕೆ.ಗುರುಮೂರ್ತಿ, ಎಚ್.ಪ್ರಕಾಶ್ರೆಡ್ಡಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.
ಮಠದ ಮುಂದೆ ಇರುವ ಮಹಾದ್ವಾರ ಶಿಥಿಲಾವಸ್ಥೆಯಲ್ಲಿದ್ದು ಹೊಸ ಮಹಾದ್ವಾರ ನಿರ್ಮಾಣ ಸಂಪೂರ್ಣ ಕಲ್ಲಿನ ಮಹಾದ್ವಾರವಾಗಲಿದೆ. ಕಲ್ಯಾಣಿ ಮತ್ತು ಆಕರ್ಷಕ ಪ್ರಾಣ ಲಿಂಗ ನಿರ್ಮಾಣಕ್ಕೆ ಅಂದಾಜು 60 ಲಕ್ಷ ರೂ ವೆಚ್ಚವಾಗಲಿದೆ.
ಒಂದು ವರ್ಷದ ಒಳಗೆ ನೂತನ ಮಹಾದ್ವಾರ ಮತ್ತು ಕಲ್ಯಾಣಿ ನಿರ್ಮಾಣ ಸಂಕಲ್ಪ ತಪಟ್ಟಿದ್ದೇವೆ. ಅಷ್ಟೇ ಅಲ್ಲದೇ ಮಠದ ಆವರಣದಲ್ಲಿ ಎಲ್ಲ ಅನಾಥ ಶಾಲೆ, ವಿದ್ಯಾ ಸಂಸ್ಥೆ ಆರಂಭಿಸುವ ಉದ್ದೇಶ ಹೊಂದಿದ್ದೇವೆ. ಹೀಗಾಗಿ ಎಲ್ಲ ಸಮುದಾಯದ ಮುಖಂಡರು ಭಾಗವಹಿಸಿ ಮಠದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ದಾಸೋಹ ಮಠದ ನಿರ್ಮಾಣ ಸಮಿತಿ ಸಂಘಟನಾ ಕಾರ್ಯದರ್ಶಿ ದೊಣೆಹಳ್ಳಿ ಗುರುಮೂರ್ತಿ ತಿಳಿಸಿದರು.