ಸುದ್ದಿವಿಜಯದ ಮೂಲಕ ಜ್ಞಾನಾರ್ಜನೆಗೆ ದಾರಿಯಾಗಲಿ: ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಆಶಯ

Suddivijaya
Suddivijaya June 3, 2022
Updated 2022/06/03 at 4:36 AM

ಸುದ್ದಿವಿಜಯ, ಜಗಳೂರು: ಸಾಮಾಜಿಕ ಜಾಲತಾಣಗಳು ದುರುಪಯೋಗವಾಗದೇ, ಒಳ್ಳೆಯತನಗಳನ್ನಿಟ್ಟುಕೊಂಡು ಸಮಾಜಕ್ಕೆ ಬೇಕಾದ ತಿಳುವಳಿಕೆಗಳನ್ನು ಕೊಡಲಿಕ್ಕೆ ಇಂತಹ ಮಾಧ್ಯಮಗಳು ಬೇಕಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನಡೆದ ಸುದ್ದಿ ವಿಜಯ ಪ್ರಾರಂಭೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವೈಜ್ಞಾನಿಕ ಅವಿಷ್ಕಾರಗಳು ನಿರಂತರವಾಗಿ ಬೆಳದಂತೆಲ್ಲಾ ದೃಶ್ಯ ಮಾಧ್ಯಮ ಪ್ರಬಲವಾಗುತ್ತದೆ. ಇಂದು ಬೆಳಗ್ಗೆ ಪತ್ರಿಕೆಗಳನ್ನು ಓದುವವರ ಸಂಖ್ಯೆ ಅತ್ಯಂತ ಕ್ಷೀಣವಾಗಿದೆ.

ಉಪನ್ಯಾಸಕನಾಗಿದ್ದಾಗ ಎರಡು ಪತ್ರಿಕೆಗಳನ್ನು ಓದುತ್ತಿದ್ದೆ, ನಿವೃತ್ತಿಯ ನಂತರ ವೃತ್ತಿ ಬದುಕಿನ ಜತೆಗೆ ಒಂದು ಪತ್ರಿಕೆ ಓದಲು ಸಾದ್ಯವಾಗುತ್ತಿಲ್ಲ, ಕಾರಣ ಕ್ಷಣ ಕ್ಷಣಕ್ಕೂ ಮೊಬೈಲ್‌ನಲ್ಲಿ ಮಾಹಿತಿ ಸಿಗುತ್ತಿದೆ, ಜಗತ್ತಿನ ಎಲ್ಲಾ ವಿಷಯಗಳನ್ನು ಕೇವಲ ಒಂದು ನಿಮಿಷದಲ್ಲಿ ಅನಾವರಣವಾಗುತ್ತಿವೆ. ಹಾಗಾಗಿ ಹೊಸ ಅವಿಷ್ಕಾರದ ನಾಗಲೋಟಕ್ಕೆ ಪ್ರತಿಯೊಬ್ಬರು ಹೊಂದಿಕೊಳ್ಳುತ್ತಿದ್ದೆವೆ ಎಂದರು.
ವ್ಯವಸ್ಥೆಗಳಿಗೆ ತಕ್ಕಂತೆ ಮಾಧ್ಯಮಗಳು ಪ್ರಭಾವವಾಗುತ್ತಿದ್ದು, ಇದರ ಜತೆಗೆ ಮನುಷ್ಯರು ಬದುಕಬೇಕು ಎನ್ನುವ ಕಾರಣಕ್ಕಾಗಿ ಇಂದು ಜಗತ್ತಿನ ಎಲ್ಲಾ ವಿಚಾರಗಳನ್ನು ಜನರಿಗೆ ಮುಟ್ಟಿಸಲು ಈ ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳು ಎಚ್ಚು ಪ್ರಭಾವ ಬೀರಿವೆ, ಆದರೆ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ವಿಚಾರಕ್ಕೆ ಶೇ.೩೦ ಬಳಿಸಿದರೆ, ಶೇ.೬೦ರಷ್ಟು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾಧಿಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!