ʼದೇವರನಾಡಿನಲ್ಲಿʼ ಮತ್ತೊಂದು ಭೀಕರ ವೈರಸ್‌ ಪತ್ತೆ. ಜನರೇ ಎಚ್ಚರ.. ಎಚ್ಚರ..!

Suddivijaya
Suddivijaya July 14, 2022
Updated 2022/07/14 at 6:33 AM

ಸುದ್ದಿವಿಜಯ, ತಿರುವನಂತಪುರ: ದೇವರನಾಡು ಎಂದೇ ಖ್ಯಾತಿಯಾಗಿರುವ ಕೇರಳದಲ್ಲಿ ಈಗ ಮತ್ತೊಂದು ಸೋಂಕು ತಾಂಡವಾಡುತ್ತಿದೆ. ಕೋವಿಡ್‌ ನಂತರದಲ್ಲಿ ಮತ್ತೊಂದು ವೈರಸ್‌ ಪತ್ತೆಯಾಗಿದೆ. ಇದರಿಂದ ಜನ ಭಯ ಭೀತರಾಗಿದ್ದಾರೆ. ಹೌದು ನೆರೆಯ ಕೇರಳ ರಾಜ್ಯದಲ್ಲಿ ಶಂಕಿತ ಮಂಕಿಪಾಕ್ಸ್ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ವಿದೇಶದಿಂದ ಆಗಮಿಸಿದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ಸೋಂಕಿನ ರೋಗಲಕ್ಷಣಗಳು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಶಂಕಿತ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯ ಮಾದರಿಯನ್ನು ರಾಷ್ಟ್ರೀಯ ವೈರಾಣು ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಫಲಿತಾಂಶ ಬಂದ ಬಳಿಕವಷ್ಟೇ ರೋಗದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ರೋಗಿಯ ಕುರಿತಂತೆ ಹೆಚ್ಚಿನ ಮಾಹಿತಿ ನೀಡದ ವೀಣಾ ಜಾರ್ಜ್, ಆತ ವಿದೇಶದಲ್ಲಿ ಮಂಕಿ ಪಾಕ್ಸ್ ರೋಗಿಯ ಸಂಪರ್ಕಕ್ಕೆ ಬಂದಿರುವುದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಝೂನೊಸಿಸ್ ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್ ಆಗಿದ್ದು, ಸಿಡುಬು ರೋಗಿಗಳಲ್ಲಿ ಹಿಂದೆ ಕಂಡುಬರುತ್ತಿದ್ದ ರೋಗಲಕ್ಷಣಗಳನ್ನು ಹೋಲುತ್ತದೆ. ಆದರೂ ಇದು ಪ್ರಾಯೋಗಿಕವಾಗಿ ಕಡಿಮೆ ತೀವ್ರತೆ ಹೊಂದಿರುತ್ತದೆ.

ರೋಗ ಲಕ್ಷಣಗಳು:

ಮಂಕಿಫಾಕ್ಸ್‌ ವೈರಸ್‌ನಿಂದ ಮೈಯಲ್ಲಿ ಗುಳ್ಳಿಯಾಕಾರದ ದದ್ದುಗಳು ಕಾಣಿಸಿಕೊಳ್ಳುತ್ತವೆ. ಕೆರೆತದ ಜೊತೆಗೆ ಉರಿ ಹೆಚ್ಚಾಗಿರುತ್ತದೆ. ಹೀಗಾಗಿ ಜನರು ಮಂಗಳು ಮತ್ತು ನಾಯಿ ಹೀಗೆ ವಿವಿಧ ಪ್ರಾಣಿಗಳಿಂದ ದೂರವಿರಬೇಕು. ನಿತ್ಯ ಸ್ನಾನದ ನಂತರ ಕೊಬ್ಬರಿ ಎಣ್ಣೆಯನ್ನು ಮೈ ಮೇಲೆ ಸವರಿಕೊಳ್ಳಬೇಕು ಹಾಗಾದಾಗ ಮಾತ್ರ ಈ ಸೊಂಕು ಹತ್ತಿರಕ್ಕೂ ಸುಳಿಯುವುದಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.

2018 ಮತ್ತು 2019ರಲ್ಲಿ ಕಂಡುಬಂದಿದ್ದ ಮಂಕಿಪಾಕ್ಸ್ ವೈರಸ್‌ನ ರೂಪಾಂತರ ತಳಿಗಳ ಸಂಖ್ಯೆಗಿಂತ ಈಗ ಹತ್ತು ಪಟ್ಟು ಹೆಚ್ಚು ಇದೆ. ಈ ರೂಪಾಂತರಿ ವೈರಸ್ ತಳಿ ಬಹಳ ವೇಗದಲ್ಲಿ ವಿಕಾಸ ಹೊಂದುತ್ತಿರುವುದರ ಸುಳಿವು ಇದು ಎನ್ನುತ್ತಾರೆ ಈ ಪೋರ್ಚುಗಲ್ ವಿಜ್ಞಾನಿಗಳು.

ಈ ರೂಪಾಂತರಿ ಮಂಕಿಪಾಕ್ಸ್ ವೈರಾಣುಗಳು ಎಷ್ಟರಮಟ್ಟಿಗೆ ಅಪಾಯಕಾರಿ ಎಂಬುದು ಗೊತ್ತಾಗಿಲ್ಲ. ಸೋಂಕಿನ ವೇಗ ಹೆಚ್ಚಿಸಲು ಈ ರೂಪಾಂತರಿಗಳು ಸಹಾಯವಾಗುತ್ತವಾ ಎಂಬುದೂ ತಿಳಿದುಬಂದಿಲ್ಲ.ಪೋರ್ಚುಗಲ್‌ನ ವಿಜ್ಞಾನಿಗಳು ಒಟ್ಟು 15 ಮಂಕಿಪಾಕ್ಸ್ ವೈರಸ್‌ನ ಜಿನೋಮ್ ಸೀಕ್ವೆನ್ಸ್‌ಗಳನ್ನು ಸಂಗ್ರಹಿಸಿ, ಅವುಗಳ ತಳಿ ದತ್ತಾಂಶವನ್ನು ಪುನರಾಚರಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!