ಸುದ್ದಿವಿಜಯ,ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಲೀಕತ್ವದ ವಿದ್ಯಾ ಸಂಸ್ಥೆಗೆ ಬಾಂಬ್ ಇಡಲಾಗಿದೆ ಎಂದು ನನ್ನ ಇ-ಮೇಲ್‌ಗೆ ಬೆದರಿಕೆ ಬಂದಿದೆ. ಅದು ಹುಚ್ಚ ವೆಂಕಟ್ ಹೆಸರಿನಲ್ಲಿಯೇ ಬಂದಿದೆ ಎಂದು ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಧ್ಯಕ್ಷ ಆಗಿರುವ ಸಂಸ್ಥೆಗೆ ಮೇಲ್ ಬಂದಿದೆ. ಕೂಡಲೇ ಎಲ್ಲ ಮಕ್ಕಳನ್ನು ಸ್ಥಳಾಂತರ ಮಾಡಿ, ಬೆದರಿಕೆ ಕರೆ ಬಗ್ಗೆ ಪೊಲೀಸರಿಗೆ ತಿಳಿಸಲಾಗಿದೆ.
ವಿದ್ಯಾಸಂಸ್ಥೆಗೆ ಹೈ ಸೆಕ್ಯೂರಿಟಿ ಇದೆ. ಹಾಗಿದ್ದರೂ ಮಕ್ಕಳನ್ನು ಹೊರಗಡೆ ಕಳಿಸಿ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಹುಚ್ಚ ವೆಂಟಕ್ ಹೆಸರಿನಲ್ಲಿ ಮೇಲ್ ಬಂದಿದೆ. ಇದನ್ನು ಪೊಲೀಸರಿಗೆ ತಿಳಿಸಲಾಗಿದೆ. ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದೇ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಆರ್ ಆರ್ ನಗರದ ಶಾಲೆಗೆ ಬಾಂಬ್ ಕರೆ ಹಿನ್ನಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಿದೆ ಎಂದು ತಿಳಿಸಿದರು. ವಿದ್ಯಾಸಂಸ್ಥೆಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಬಾಂಬ್ ಸ್ಕ್ವಾಡ್ ಹೋಗಿ ಸರ್ಚ್ ಮಾಡುತ್ತಿದೆ.
ಈ ಹಿಂದೆಯೂ ಶಾಲೆಗಳಿಗೆ ಇಂತಹ ಕರೆ ಬಂದಿತ್ತು. ಆ ಬಳಿಕ ಬಾಂಬ್ ಬೆದರಿಕೆ ಕರೆ ಹುಸಿಯಾಗಿತ್ತು ಎಂದರು. ಇವತ್ತು ಕಾಲೇಜಿಗೆ ಬಂದ ಬೆದರಿಕೆ ಕರೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಎಲ್ಲಿಂದ ಬಂದಿದೆ ಯಾರಿಂದ ಬಂದಿದೆ ಎಂದು ಸರ್ಚ್ ಮಾಡುತ್ತಿದ್ದಾರೆ ಎಂದು ತಿಳಿಸಿದರು.