ಸುದ್ದಿವಿಜಯ, ಭರಮಸಾಗರ: ಪಟ್ಟಣದ ಕೆನರಾ ಬ್ಯಾಂಕ್‍ನಲ್ಲಿ ಮಂಗಳವಾರ ಮಧ್ಯಾಹ್ನ 2.15 ಲಕ್ಷ ರೂ ಹಣ ಡ್ರಾ ಮಾಡಿಕೊಂಡು ಹೊರ ಬಂದ ಹಿರಿಯ ಪತ್ರಕರ್ತ ಮಂಜುನಾಥ್ ಅವರ ಗಮನ ಬೇರೆಡೆ ಸೆಳೆದು ಚಾಲಾಕಿ ಕಳ್ಳರು ಅಷ್ಟೂ ಹಣವನ್ನು ಸಿನಿಮಿಯ ರೀತಿ ಎಗರಿಸಿ ಪರಾರಿಯಾಗಿದ್ದಾರೆ.
ಹಣ ಡ್ರಾ ಮಾಡಿಕೊಂಡು ಬೈಕ್‍ನ ಸೈಡ್ ಬ್ಯಾಗ್‍ನಲ್ಲಿ ಹಣ ಇರಿಸಿ ಬೈಕ್ ಸ್ಟ್ರಾಟ್ ಮಾಡಿ ಮುಂದೆ ಸಾಗಿದ್ದಾರೆ. ಅಷ್ಟರಲ್ಲಿ ಮತ್ತೊಂದು ಬೈಕ್ ಅಡ್ಡ ಬರುವಂತೆ ಮಾಡಿ ಕೃತಕ ಟ್ರಾಫಿಕ್ ಸೃಷ್ಟಿಸಿ ಗಮನ ಬೇರೆಡೆ ಸೆಳೆದು ಬ್ಯಾಗ್‍ನಲ್ಲಿದ್ದ ಹಣವನ್ನು ಎಗರಿಸಿದ್ದಾರೆ.
ಹಣ ಕಳೆದುಕೊಂಡ ಪತ್ರಕರ್ತ ಮಂಜುನಾಥ್ ಭರಮಸಾಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬ್ಯಾಂಕ್‍ನ ಮುಂದೆ ಸಿಸಿಟಿವಿ ಅಳವಡಿಸಲಾಗಿದೆ.
ಆದರೆ ಸಿಸಿಟಿವಿ ಅಳವಡಿಸಿದ ಜಾಗದಲ್ಲೇ ವಿವಿಧ ಬಗೆಯ ಜಾಹೀರಾತು ಫ್ಲಕ್ಸ್ ಹಾಕಿರುವ ಕಾರಣ ಸಿಸಿಟಿವಿಯಲ್ಲಿ ಕಳ್ಳನ ಕೃತ್ಯ ಸೆರೆಯಾಗಿಲ್ಲ. ಹೀಗಾಗಿ ಕಳ್ಳನನ್ನು ಹಿಡಿಯುವುದು ಪೊಲೀಸರಿಗೂ ತಲೆ ನೋವಾಗಿದೆ.ಚಿತ್ರದುರ್ಗ ಮಾರ್ಗದ ಪೆಟ್ರೋಲ್ ಬಂಕ್ ಸೇರಿದಂತೆ ಅನೇಕ ಕಡೆ ಅಳವಡಿಸಿದ ಸಿಸಿಟಿವಿಗಳಲ್ಲಿ ಬೈಕ್‍ನಲ್ಲಿ ಹೋಗುವ ಕಳ್ಳನ ದೃಶ್ಯ ಸಿಕ್ಕಿದೆಯಾದರೂ ಅಸ್ಪಷ್ಟವಾಗಿದೆ.
ಬ್ಯಾಂಕ್ ವ್ಯವಸ್ಥಾಪಕರು ಮಾಡಿದ ಎಡವಟ್ಟಿನಿಂದ ಕಳ್ಳನ ಗುರುತು ಪತ್ತೆಯಾಗಿಲ್ಲ ಎಂದು ಎಲ್ಲ ಪತ್ರಕರ್ತರು ಸೇರಿ ವ್ಯವಸ್ಥಾಪಕರನ್ನು ಪ್ರಶ್ನಿಸಿದರು.
ಸ್ಥಳಕ್ಕೆ ಸಿಪಿಐ ನಿಂಗನಗೌಡ್ರು ಭೇಟಿ ನೀಡಿ ಪರಿಶೀಲಿಸಿದರು. ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಿ ನಿಮಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಪರ್ತಕರ್ತ ಮಂಜುನಾಥ್ ಮತ್ತು ಕರಿಬಸಪ್ಪ, ಶೀಘ್ರವೇ ಕಳ್ಳನನ್ನು ಪತ್ತೆ ಹಚ್ಚದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುತ್ತೇವೆ.
ವ್ಯವಸ್ಥಾಪಕರು ಮಾಡಿರುವ ಎಡವಟ್ಟಿನಿಂದ ಬ್ಯಾಂಕ್ ಮೇಲಾಧಿಕಾರಿಗಳಿಗೂ ದೂರು ನೀಡುತ್ತೇವೆ ಎಂದು ಹೇಳಿದರು.