ಸುದ್ದಿವಿಜಯ,ದಾವಣಗೆರೆ: ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತೆಗೆದುಕೊಂಡು ಬೊಲೆರೊದಲ್ಲಿ ಸಾಗಿಸುತ್ತಿದ್ದ ವೇಳೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಭಾವಚಿತ್ರ ಇರುವ 7,19,820 ಮೌಲ್ಯದ ಅಡುಗೆ ಸಲಕರಣೆಗಳಿರುವ 180 ಬಾಕ್ಸ್‍ಗಳನ್ನು ಕೆಟಿಜೆ ನಗರ ಠಾಣೆಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜನರ ದೂರಿನ ಮೇರೆಗೆ ಭಗತ್‍ಸಿಂಗ್ ನಗರದ ಬನ್ನಿಮಹಾಂಕಾಳಿ ದೇವಾಲಯದ 1ನೇ ಕ್ರಾಸ್ ಬಳಿ ದಾಳಿ ನಡೆಸಿದ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು 4ಲಕ್ಷ ಮೌಲ್ಯದ ಬೊಲೊರೊ ಹಾಗೂ 3999 ಮುಖಬೆಲೆಯ 180 ಬಾಕ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಕ್ಸ್ ಮೇಲೆ ರುಪ್ರಾಟನ್ ಗಿಫ್ಟ್ ಸೆಟ್ ಎಂದು ಬರೆದಿದೆ. ಬಾಕ್ಸ್‍ನೊಳಗೆ ದೋಸಾ ತವಾ, ಒಂದು ಕಂಡಾಲ್. ಫ್ರೈ ಪ್ಯಾನ್ ಹಾಗೂ ಎಸ್‍ಎಸ್‍ಎಲ್‍ಐಡಿ ಸೆಟ್‍ಗಳು ಇವೆ.
ಕುಕ್ಕರ್ ಗಳ ಮೇಲೆ ಎಸ್.ಎಸ್ ಮತ್ತು ಎಸ್.ಎಸ್.ಎಂ ಅಭಿಮಾನಿಗಳ ಬಳಗ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ನಮೂದಿಸಲಾಗಿದೆ. ಕಾಡಜ್ಜಿ ಗ್ರಾಮದ ಹನುಮಂತ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.