ಸುದ್ದಿವಿಜಯ:ದಾವಣಗೆರೆ: ಚನ್ನಗಿರಿ ತಾಲೂಕು ರಾಷ್ಟ್ರೀಯ ಹೆದ್ದಾರಿ 13ರ ಚಿತ್ರದುರ್ಗ-ಚನ್ನಗಿರಿ ಮಾರ್ಗವಾಗಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4,39,185 ರೂ. ವೌಲ್ಯದ 2340 ಲೀಟರ್ ಬಿಯರ್ ಅನ್ನು ಅಬಕಾರಿ ಅಧಿಕಾರಿಗಳು ಶುಕ್ರವಾರ ಸಂಜೆ ವಶಪಡಿಸಿಕೊಂಡಿದ್ದಾರೆ.
ಮಾದಾಪುರ ಚೆಕ್ ಪೊಸ್ಟ್ನಲ್ಲಿ ಶುಕ್ರವಾರ ಸಂಜೆ 6.30ರ ಸುಮಾರಿಗೆ ವಾಹನ ಬಂದಿದ್ದು, ವಾಹನ ತಡೆದು ಪರಿಶೀಲಿಸಿದಾಗ 300 ಬಾಕ್ಸ್ ಬಿಯರ್ ಪತ್ತೆಯಾಗಿದೆ.
ದಾಖಲೆಗಳ ಪ್ರಕಾರ ವಾಹನವು ದುದ್ದ-ಅರಸೀಕೆರೆ -ಕಡೂರು -ಚನ್ನಗಿರಿ -ದಾವಣಗೆರೆ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗಬೇಕಿತ್ತು.ಆದರೆ ವಾಹನವು ಚನ್ನಗಿರಿ ಮಾರ್ಗವಾಗಿ ದಾವಣಗೆರೆಗೆ ಹೊಗುವ ಬದಲು ಚನ್ನಗಿರಿ ತಾಲೂಕಿನ ಮಾದಾಪುರ ಚೆಕ್ ಪೋಸ್ಟ್ ಮೂಲಕ ಹಾದು ಹೋಗುತ್ತಿತ್ತು.
ನಿಯಮ ಬಾಹಿರವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಉಲ್ಲಂಘನೆ ಆಗಿದ್ದು, ಬಿಯರ್ ಬಾಕ್ಸ್ಗಳು ಹಾಗೂ ವಾಹನ ಜಪ್ತಿ ಮಾಡಲಾಗಿದೆ.
ವಾಹನ ಚಾಲಕ ಟಿ.ಎಸ್. ರಂಜಿತ್, ಸಹಚಾಲಕ ಎಸ್.ಕೆ. ಪ್ರವೀಣಗೌಡ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂಧು ಪ್ರಕಟಣೆ ತಿಳಿಸಿದೆ.