ಸುದ್ದಿವಿಜಯ,ಜಗಳೂರು: ಹೊಸ ಟ್ಯಾಕ್ಟರ್ ತರಲು ಹೋಗಿದ್ದ ತಾಲೂಕಿನ ಲಿಂಗಣ್ಣನಹಳ್ಳಿ ಗ್ರಾಮದ ಓಬಯ್ಯ ಎಂಬುವರ ಪುತ್ರ ರುದ್ರಪ್ಪ (44) ಎಂಬ ವ್ಯಕ್ತಿ ಅದೇ ಟ್ಯಾಕ್ಟರ್ನ ಗಾಲಿಗೆ ಬಿದ್ದು ಮೃತಪಟ್ಟಿದ್ದಾರೆ. ಸೋಮವಾರ ಮಧ್ಯಾಹ್ನ ಅಣಜಿ ಮತ್ತು ಮೆಳ್ಳೆಕಟ್ಟೆ ಗ್ರಾಮದ ಮಧ್ಯೆಈ ಘಟನೆ ನಡೆದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ದಸಾರ ಆಯುಧ ಪೂಜೆಗೆ ದಾವಣಗೆರೆ ಶೋ ರೂಂವೊಂದರಿಂದ ನೂತನ ಟ್ಯಾಕ್ಟರ್ ಖರೀದಿಸಿ ರುದ್ರೇಶ್ ತರುತ್ತಿದ್ದರು. ಮೃತ ವ್ಯಕ್ತಿಯ ಸಂಬಂಧಿ ಟ್ಯಾಕ್ಟರ್ ಓಡಿಸುತ್ತಿದ್ದರು. ಟ್ಯಾಕ್ಟರ್ ಬಂಪರ್ ಮೇಲೆ ರುದ್ರಪ್ಪ ಕುಳಿತ್ತಿದ್ದರು. ಚಾಲಕ ಗುಂಡಿ ತಪ್ಪಿಸಲು ಹೋದಾಗ ಆಯ ತಪ್ಪಿ ಟ್ಯಾಕ್ಟರ್ ಗಾಲಿಗೆ ಬಿದ್ದು ಸ್ಥಳದಲ್ಲೇ ರುದ್ರಪ್ಪ ಸಾವನ್ನಪ್ಪಿದ್ದಾರೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ದೇಹವನ್ನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇತ್ತ ಲಿಂಗಣ್ಣನಹಳ್ಳಿಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.