ಸುದ್ದಿ ವಿಜಯ, ಜಗಳೂರು: ತಾಲೂಕಿನ 22 ಗ್ರಾಪಂಗಳಲ್ಲಿ 2020-21 ಮತ್ತು 2021-22ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆ ಅಡಿ ಸರಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ವೆಚ್ಚವನ್ನು ಆನ್‌ಲೈನ್‌ನಲ್ಲಿ ದಾಖಲಿಸದ ಕಾರಣ ತನಿಖೆ ಕೈಗೊಳ್ಳಲು ಜಿಲ್ಲಾ ಪಂಚಾಯಿತಿಯಿಂದ ಲೆಕ್ಕಾಧಿಕಾರಿಗಳ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.
ಭೇಟಿ ಕೊಡುವ ಅಧಿಕಾರಿಗಳು
ಕ್ಯಾಸೇಹಳ್ಳಿ, ಹೊಸಕೆರೆ, ಕೆಚ್ಚೇನಹಳ್ಳಿ ಗ್ರಾಪಂಗಳಿಗೆ ಎಂ.ಎ.ವೆಂಕಟೇಶ್, ಎನ್.ನವ್ಯಶೀ ಅವರನ್ನು ನೇಮಿಸಲಾಗಿದೆ. ಬಿಳಿಚೋಡು, ದೇವಿಕೆರೆ, ಹಾಲೇಕಲ್ಲು ಗ್ರಾಪಂಗಳಿಗೆ ಆರ್.ಆರ್ ವಂದನಾ ಮತ್ತು ಎಚ್.ತಿಪ್ಪೇಸ್ವಾಮಿ ಅವರನ್ನು ತನಿಖೆ ಮಾಡಲು ನೇಮಿಸಲಾಗಿದೆ, ಬಿದರಕೆರೆ, ತೋರಣಗಟ್ಟೆ, ಬಿಸ್ತುವಳ್ಳಿ, ಗುತ್ತಿದುರ್ಗ ಗ್ರಾಪಂಗಳಿಗೆ ಸಿ.ನಾಗರಾಜ್, ರಹೀಂ ಖಾನ್ ಅವರನ್ನು ನಿಯೋಜನೆ ಮಾಡಲಾಗಿದೆ. ಅಸಗೋಡು, ಪಲ್ಲಾಗಟ್ಟೆ, ಸೊಕ್ಕೆ ಮತ್ತು ಗುರುಸಿದ್ದಾಪುರ ಗ್ರಾಪಂಗಳಿಗೆ ಬಿ.ಎ.ಮನೋಹರ್, ಜಿ.ಷಂಷುನ್ನೀಸ್ ಅವರನ್ನು ನಿಯೋಜಿಸಲಾಗಿದೆ. ಬಸವನಕೋಟೆ, ದಿದ್ದಿಗೆ, ದೋಣೆಹಳ್ಳಿ ಮತ್ತು ಹಿರೇಮಲ್ಲನಹೊಳೆ ಗ್ರಾಪಂಗಳಿಗೆ ಎಚ್.ರಮೇಶ್‌ಕುಮಾರ್, ಅಪರ್ಣ ಸುರೇಶ್ ಅಕ್ಕಿ ಅವರನ್ನು ನೇಮಿಸಲಾಗಿದೆ. ಅಣಬೂರು, ಹನುಮಂತಾಪುರ ಮುಸ್ಟೂರು ಮತ್ತು ಕಲ್ಲೇದೇವರಪುರ ಗ್ರಾಪಂ ಗಳಿಗೆ ಸುಮಿತ್ರಾ ಹಾಗೂ ಕೆ.ಎಂ.ವನಿತಾ ಅವರನ್ನು ನೇಮಿಸಲಾಗಿದೆ.
ಆಯಾ ಗ್ರಾಪಂಗಳಿಗೆ ನಿಗದಿತ ದಿನಾಂಕಗಳಂದು ಅಧಿಕಾರಿಗಳು ಆಗಮಿಸಲಿದ್ದಾರೆ. ಪಂಚಾಯಿತಿ ಕಾರ್ಯಾಲಯಗಳಿಗೆ ಭೇಟಿ ನೀಡಲಿರುವ ತನಿಖಾಧಿಕಾರಿಗಳಿಗೆ ಪಿಡಿಒಗಳು ಕಚೇರಿಯಲ್ಲಿ ಹಾಜರಾಗಿ ಸೂಕ್ತ ದಾಖಲೆಗಳನ್ನು ಲೆಕ್ಕ ತಪಾಸಣೆಗೆ ಒದಗಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇರ ಹೊಣೆಗಾರ‍್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ ಮುಖ್ಯಲೆಕ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
15ನೇ ಹಣಕಾಸು ಯೋಜನೆ ಅಡಿ ವೆಚ್ಚಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ವೆಚ್ಚಗಳನ್ನು ತುಂಬ ಬೇಕು. ಆದರೆ ಅದನ್ನು ತುಂಬುತ್ತಿಲ್ಲ. ಹೀಗಾಗಿ ಮುಖ್ಯ ಲೆಕ್ಕಾಧಿಕಾರಿಗಳಿಗೆ ಪರಿಶೀಲನೆ ಮಾಡಿ ಆನ್‌ಲೈನ್‌ನಲ್ಲಿ ದಾಖಲಿಸುವಂತೆ ಸೂಚನೆ ನೀಡಲಾಗಿದೆ. ನಿಯಮಾನುಸಾರ ದಾಖಲೆಗಳ್ನು ಅಪ್‌ಲೋಡ್ ಮಾಡುವುದು ಕರ್ತವ್ಯವಾಗಿದೆ ಹೀಗಾಗಿ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ.
ಡಾ.ಚನ್ನಪ್ಪ, ಜಿಪಂ, ಸಿಇಒ ದಾವಣಗೆರೆ