ಸುದ್ದಿವಿಜಯ, ಜಗಳೂರು: ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದು ಮಾರ್ಚ್ ಒಳಗೆ ಜಾರಿಯಾಗಲಿದೆ ಎಂದು ತಾಲೂಕು ಸರಕಾರಿ ನೌರಕರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಗಳೂರು ತಾಲೂಕು ಶಾಖೆ ವತಿಯಿಂದ ನೂತನ ಪದಾಧಿಕಾರಿಗಳಿಗೆ ಗುರುವಾರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಿಕಾ ಮಾಧ್ಯಮ ನಾಲ್ಕನೇ ಅಂಗವಾಗಿದ್ದು, ಪೆನ್ನಿನಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಸಾದರಪಡಿಸಿದೆ. ಸರಕಾರಿ ನೌರಕರರು ಜನ ಸ್ನೇಹಿಯಾಗಿ ಕೆಲಸ ಮಾಡೋಣ. ಏಳನೇ ಯೋಗದಿಂದ ಹೆಚ್ಚು ನೌಕರರಿಗೆ ಲಾಭವಾಗಿದೆ. ನೌಕರರರ ವೈದ್ಯಕೀಯ ವೆಚ್ಚಕ್ಕೆ 40 ಲಕ್ಷ ರೂ ಬಿಡುಗಡೆಯಾಗಿದೆ. ಶಿಸು ಪಾಲನಾ ರಜೆ ಸೇರಿ ಅನೇಕ ಸೌಲಭ್ಯಗಳು ಇರುವುದರಿಂದ ಅವುಳನ್ನು ಸದುಪಯೋಗ ಪಡೆದುಕೊಳ್ಳುಬೇಕು.
ನೌಕರರ ಸಮಸ್ಯೆ ಬಗೆ ಹರಿಸಲು ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಸೇರಿ ಅನೇಕ ಅಧಿಕಾರಿಗಳ ಜೊತೆ ಪ್ರತಿ ಮೂರು ತಿಂಗಳಿಗೊಮ್ಮೆ ಜಂಟಿ ಸಮಾಲೋಚನಾ ಸಭೆ ಕರೆದು ಕುಂದು ಕೊರತೆ ನೀಗಿಸುವ ಕೆಲಸ ಮಾಡುತ್ತೇನೆ ಎಂದರು. ನೌಕರರಿಗೆ ಡಿಸೆಂಬರ್ ನಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗುವುದು. ಎನ್‍ಪಿಎಸ್ ರದ್ದತಿ ಅತ್ಯಂತ ಅಮಾನುಷ. ಅದನ್ನು ತೆಗೆದು ಹಾಕಲು ಹೋರಾಡೋಣ ಎಂದರು.
ರಾಜ್ಯ ಪರಿಷತ್ ಸದಸ್ಯ ಡಿ.ಎಸ್.ಬಣಕಾರ್ ಮಾತನಾಡಿ, ನೌಕರರ ಯಾವುದೇ ಸಮಸ್ಯೆ ಬಂದರೂ ನಾವೆಲ್ಲರೂ ಜೊತೆಯಾಗಿ ನಿಲ್ಲೋಣ ಎಂದರು.
ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತೇಶ್, ಸರಕಾರದ ಯಾವುದೇ ಸೌಲಭ್ಯ ಪಡೆಯಲು ಕ್ರಿಯಾಶೀಲತೆ ಮತ್ತು ಬದ್ಧತೆ ಬಹಳ ಮುಖ್ಯ, ಏಳನೇ ವೇತನ ಆಯೋಗ ನಿರೀಕ್ಷೆ ಯಂತೆ ಕೈಸೇರಲಿ, ನೌಕರರ ಸಣ್ಣ ಪುಟ್ಟ ಸಮಸ್ಯೆ ಬಗೆ ಹರಿಸಕು ಸಂಘ ಮುಂದಾಗಬೇಕು. ಯಾವುದೇ ಸಮಸ್ಯೆಯಿಲ್ಲದೇ ಕಾರ್ಯನಿರ್ವಸುವಂತಹ ಪರಿಸರ ನಿರ್ಮಾಣ ವಾಗಬೇಕು ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ ಮಾತನಾಡಿ, ನೌರರ ಸಮಸ್ಯೆಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ. ತಪ್ಪಿದ್ದರೆ ತಿದ್ದುವ ವೃತ್ತಿ ನಮ್ಮದು ಹೀಗಾಗಿ ಸಮಾಜದಲ್ಲಿ ಅಂಕು ಡೊಂಕುಗೊಳನ್ನು ತಿದ್ದುವ ಕೆಲಸ ಮಾಡುತ್ತೇವೆ. ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಏಳನೇ ವೇತನ ಆಯೊಗದ ಜಾರಿಗೆ ಹೋರಾಟ ಮಾಡುತ್ತಿದ್ದು ಅವರ ಹೋರಾಟಕ್ಕೆ ಜಯಸಿಗಲಿ ಎಂದರು.
ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ್, ಖಜಾಂಚಿ ಸಿ.ಬಿ.ನಾಗರಾಜ್, ಜಿಲ್ಲಾ ಸಂಘದ ಕಾರ್ಯದರ್ಶಿ ಆನಂದಪ್ಪ, ರಾಜ್ಯ ಪರಿಷತ್ ಸದಸ್ಯ ಡಿ.ಎಸ್.ಬಣಕಾರ್, ಉಪಾಧ್ಯಕ್ಷ ಜಿ.ಟಿ.ಉಮೇಶ್, ಕಾರ್ಯದರ್ಶಿ ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿ ಪಿ.ಎಂ.ರುದ್ರೇಶ್, ಭಾರತೀಯ ಪತ್ರಿಕಾ ಮಂಡಳಿ ಸದಸ್ಯ ಅಣಬೂರು ಮಠದ ಕೊಟ್ರೇಶ್ ಸೇರಿದಂತೆ ಅನೇಕರನ್ನು ಅಭಿನಂದಿಸಲಾಯಿತು.