ಸುದ್ದಿವಿಜಯ, ಜಗಳೂರು: ತಾಲೂಕಿನ ತೋರಣಗಟ್ಟೆ ಗ್ರಾಪಂ ನೂತನ ಅಧ್ಯಕ್ಷರಾಗಿ ದುರುಗಮ್ಮ ವೆಂಕಟೇಶ್ ಶುಕ್ರವಾರ ವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದೆ ಅಧ್ಯಕ್ಷೆಯಾಗಿದ್ದ ಚೌಡಮ್ಮ ಒಡಂಬಡಿಕೆಯಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎಸ್.ಸಿ (ಸಾಮಾನ್ಯ ಮಹಿಳೆ) ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಗ್ರಾಮ ಪಂಚಾಯತಿ ಸದಸ್ಯರಾದ ದುರುಗಮ್ಮ ವೆಂಕಟೇಶ್ ಇವರು ನಾಮಪತ್ರ ಸಲ್ಲಿಸಿದರು.
ಬೇರೆ ಯಾರು ಸಹ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಅವಿರೋಧ ಆಯ್ಕೆ ಯನ್ನು ಘೋಷಣೆ ಮಾಡಿದರು. ಆಯ್ಕೆಯ ವೇಳೆ 17 ಮಂದಿ ಸದಸ್ಯರಿದ್ದರು. ನೂತನ ಗ್ರಾಪಂ ಅಧ್ಯಕ್ಷೆಯಾಗಿ ದುರುಗಮ್ಮ ಆಯ್ಕೆಯಾಗುತ್ತಿದ್ದಂತೆ ಕಚೇರಿಯ ಹೊರಗೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿ, ಸಿಹಿ ತಿನಿಸಿ ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮರುಳಸಿದ್ದಪ್ಪ.ಟಿ. ಜಿ.ಬಾಲಪ್ಪ. ಜಿ.ಬಸವರಾಜಪ್ಪ. ಕಟ್ಟಿಗೆಹಳ್ಳಿ ಗ್ರಾಪಂ ಸದಸ್ಯೆ ಭಾರತಿ ಮಂಜುನಾಥ್, ವೀರಪ್ಪ, ಪಾಂಡುರಂಗಪ್ಪ.ಬಿ., ಬಾಲಪ್ಪ, ಈರಪ್ಪ, ಚೌಡಮ್ಮ, ರೂಪ, ಓಬಳೇಶ್ ಕೆ.ಬಿ., ಶ್ವೇತಾ ರಾಮಣ್ಣ, ಬಿಜೆಪಿ ಪಕ್ಷದ ಮುಖಂಡರಾದ ಲಿಂಗಣ್ಣನಹಳ್ಳಿ ಕೃಷ್ಣಮೂರ್ತಿ, ಸುಂಕಪ್ಪ, ಕಟ್ಟಿಗೆಹಳ್ಳಿ ಮಂಜಣ್ಣ, ಬಾಲರಾಜ್, ಅರಿಶಿನಗುಂಡಿ ಬಸಣ್ಣ, ಶರಣಪ್ಪ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಸತೀಶ್ ಸೇರಿದಂತೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಇದ್ದರು.
ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಪಂ ಅಧ್ಯಕ್ಷರಾಗಿ ಶುಕ್ರವಾರ ದುರುಗಮ್ಮ ವೆಂಕಟೇಶ್ ಆಯ್ಕೆಯಾದರು.