ಸುದ್ದಿವಿಜಯ,ಜಗಳೂರು: ಹಿಂದೂ-ಮುಸ್ಲೀಂ ಸಮುದಾಯಗಳು ಸಹೋದರತೆಯಲ್ಲಿ ಶಾಂತಿ, ಸೌಹಾರ್ಧತೆಯಿಂದ ಬದುಕಲು ಶಿಕ್ಷಣದ ಅರಿವು ಅಗತ್ಯ ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ಇಲ್ಲಿನ ಅಶ್ವತ್ಥ ಬಡಾವಣೆಯಲ್ಲಿ ಬುಧವಾರ ಇಹ್ಸಾನ್ ಕರ್ನಾಟಕ ಎಜು ಮತ್ತು ಚಾರಿಟೆಬಲ್ ಟ್ರಸ್ಟ್‍ವತಿಯಿಂದ ಬುಧವಾರ ಮಾಝಿನ್ ಹೆರಿಟೇಜ್ ದಾರುಲ್ ಉಲೂಂ ಇಹ್ಸಾನಿಯ್ಯಾ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮುಸ್ಲೀಂ ಸಮುದಾಯದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಕಾಣುವ ಉದ್ದೇಶದಿಂದ ಇಹ್ಸಾನ್ ಕರ್ನಾಟಕ ಸಂಸ್ಥೆಯೂ ರಾಜ್ಯಾಧ್ಯಂತ ಶಾಲೆಗಳನ್ನು ಪ್ರಾರಂಭಿಸುತ್ತಾ ಶೈಕ್ಷಣಿಕ ಕ್ರಾಂತಿಯನ್ನು ಎಬ್ಬಿಸುತ್ತಿದೆ. ಕುಟುಂದದಲ್ಲಿ ಎಷ್ಟೆ ಶ್ರೀಮಂತಿಕೆ ಅಥವಾ ಬಡತನವಿರಲೀ ಪ್ರತಿ ಮಕ್ಕಳಿಗೂ ಶಿಕ್ಷಣವನ್ನು ಕೊಡಿಸುವುದರಿಂದ ವಿದ್ಯಾವಂತರಾಗಿ ಉತ್ತಮ ನಾಗರೀಕನಾಗಿ ಬದುಕಲು ಸಾದ್ಯವಾಗುತ್ತದೆ ಎಂದರು.
ಜಗಳೂರು ತಾಲೂಕಿನಲ್ಲಿ ಮುಸ್ಲೀಂ ಸಮುದಾಯದ ಅನೇಕರು ಬಡವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿವೆ, ಶಿಕ್ಷಣ ಕೊಡಿಸಲು ಸಾದ್ಯವಾಗದೇ ಕೂಲಿ ಕಳಿಸಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅಂತಹ ಮಕ್ಕಳಿಗೆ ಈ ಸಂಸ್ಥೆ ಬೆಳಕಾಗಿ ನಿಲ್ಲಲಿ ಎಂದು ಸಲಹೆ ನೀಡಿದರು.
ವಕ್ಫ್ ಮಂಡಳಿ ರಾಜ್ಯಾಧ್ಯಕ್ಷ ಎನ್.ಕೆ ಎಂ ಶಾಫಿ ಸಅದಿ ಮಾತನಾಡಿ, ಬರದನಾಡಿನಲ್ಲಿ ಸುನ್ನಿ ಮಕ್ಕಳ ಮದರಸ ಶಿಕ್ಷಣದ ಕನಸ್ಸು ನನಸಾಗಿಸಲು ನೂತನ ಕಟ್ಟಡ ನಿರ್ಮಾಣವಾಗಿರುವುದು ಸಂತಸ ತಂದಿದೆ, ದಶಕಗಳ ಹಿಂದೆ ಎಸ್‍ಎಸ್‍ಎಫ್ ಕಾರ್ಯಕರ್ತರಿಗೆ ಸ್ಥಳಿಯವಾಗಿ ಸಂಘಟನೆ ಉದ್ದೇಶದ ಮಾಹಿತಿ ಕೊರತೆಯಿಂದ ವಿರೋಧ ವ್ಯಕ್ತವಾಗಿ ಪ್ರಕರಣ ಗಳು ದಾಖಲಾಗಿದ್ದವು. ನಾವು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ ಪರಿಣಾಮ ಸಂಘಟನೆ ಬಲವರ್ಧನೆ ಗೊಂಡು ಸಂಸ್ಥೆ ಆರಂಭವಾಗಿದೆ ಎಂದರು.
ಹಝ್ರತ್ ಡಾ. ಮಹಮದ್, ಫಾಝಿಲ್ ರಝ್ಜಿ ಕಾವಳಕಟ್ಟೆ ಮಾತನಾಡಿ, ಸಂಘಟನೆಯ ನಿರೀಕ್ಷೆಯಂತೆ ರಾಜ್ಯದ ಕೆಲವೆಡೆ ಲಕ್ಷಾಂತರ ಮೌಲ್ಯದ ಜಮೀನುಗಳನ್ನು ಯಾರೊಬ್ಬರೂ ಉಚಿತವಾಗಿ ನೀಡಲು ಸಾದ್ಯವಿಲ್ಲ. ಮುಸ್ಲಿಂರು ಧಾರ್ಮಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದು. ದೀನ್ ಕೆ ಬಾರೆಮೆ ಶ್ರಮದಲ್ಲಿ ಒಂದು ಪಾಲು ಸಮುದಾಯದ ಮಕ್ಕಳ ಧಾರ್ಮಿಕ ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಮಾತನಾಡಿ, ಶಿಕ್ಷಣ ಮತ್ತು ಧರ್ಮ ಮನುಷ್ಯನಿಗೆ ಸಂಸ್ಕಾರಗಳನ್ನು ಪಡೆಯಲು ಪೂರಕವಾಗಿವೆ. ಸಮಾಜದ ಮಧ್ಯೆ ಧರ್ಮ ಸೌಹಾರ್ಧತೆ ಮೂಡಿಸಬೇಕಿದೆ. ದೇವ ಒಬ್ಬ ನಾಮ ಹಲವು ಎಂಬುದನ್ನು ಮನಗಾಣಬೇಕು ಎಂದರು.
ಕೆಸಿಎಫ್ ನ ಸುಫಿಯಾನ್ ಸಅದಿ, ಎಂ.ಐ.ಅಬ್ದುಲ್ ಹಫೀಳ್ ಸಅದಿ ಮಾತನಾಡಿದರು. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಸಿದ್ದಪ್ಪ, ಜ್ಞಾನ ತರಂಗಿಣಿ ವಿದ್ಯಾಸಂಸ್ಥೆಯ ಪಿ.ಎಸ್.ಅರವಿಂದನ್, ಕೆಸಿಎಫ್ ಮುಖಂಡರಾದ ಡಾ.ಅಬ್ದುಲ್ ರಶೀದ್, ಆರಿಫ್ ಕೋಡಿ, ಸೈಫುಲ್ಲಾಸಾಬ್, ಜನಾಬ್ ಉಬೈದುಲ್ಲಾ ಸಖಾಫಿ, ಜನಾಬ್ ಸಮೀರ್ ಉಸ್ತಾದ್, ಸಲೀಂ ಮಿಸ್ಬಾ, ಪ.ಪಂ ಸದಸ್ಯರಾದ ಶಕೀಲ್ ಅಹಮ್ಮದ್, ಲುಕ್ಮಾನ್ ಖಾನ್, ರವಿಕುಮಾರ್, ಪಾಪಲಿಂಗಪ್ಪ, ಮುಖಂಡರಾದ ಅನ್ವರ್ ಸಾಹೇಬ್, ದಾದಖಲಂದರ್, ಅಬ್ದುಲ್ ಹಫೀಜ್ ಸೇರಿದಂತೆ ಭಾಗವಹಿಸಿದ್ದರು.