ಸುದ್ದಿವಿಜಯ, ಜಗಳೂರು: ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದ ಮುಸ್ಟೂರು ಗ್ರಾಮದಲ್ಲಿ ಮನೆ ಕುಸಿದು ಕೆಂಚಮ್ಮ ಎಂಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಆಕೆಯ ಪತಿ ನಿಂಗಪ್ಪ ಅವರ ಕಾಲಿಗೆ ತೀವ್ರ ಪೆಟ್ಟಾಗಿದ್ದು ಜಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ತೀವ್ರವಾಗಿ ಗಾಯಗೊಂಡಿರುವ ಕೆಂಚಮ್ಮ ಅವರನ್ನು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಜಗಳೂರು ತಹಶಿಲ್ದಾರ್ ಜಿ. ಸಂತೋಷ್ ಕುಮಾರ್ ಮತ್ತು ಕಂದಾಯ ಅಧಿಕಾರಿ ಕುಬೇರ್ ನಾಯ್ಕ ಅವರು ಮುಸ್ಟೂರು ಗ್ರಾಮಕ್ಕೆ ತೆರಳಿ ವೀಕ್ಷಿಸಿದರು.
ಸಂಜೆ 5 ಗಂಟೆಗೆ ಆರಂಭವಾದ ಧಾರಾಕಾರ ಮಳೆಗೆ ಹಳೆಯ ಮನೆಯ ಛಾವಣಿ ಕುಸಿದಿದ್ದು, ಸ್ಥಳೀಯರ ಸಹಾಯದಿಂದ ರಕ್ಷಿಸಿದ್ದಾರೆ.