ಸುದ್ದಿವಿಜಯ, ಜಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾ ಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಭದ್ರಾ ಮೇಲ್ದಂಡೆ ಯೋಜನೆಗೆ ಶನಿವಾರ ಭೂಮಿ ಪೂಜೆ ನೆರವೇರಲಿದೆ ಎಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಂತರ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಶುಕ್ರವಾರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಪಟ್ಟಣದ ಬಯಲು ರಂಗ ಮಂದಿರದಲ್ಲಿ 12 ಗಂಟೆಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದರು.
ಅಲ್ಲದೇ ಬಯಲು ಸೀಮೆಯ 165 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ 482 ಕೋಟಿ ರೂಗಳ ಸಂತೆಮುದ್ದಾಪುರ ಗ್ರಾಮದ ಬಳಿ ಬೃಹತ್ ಯೋಜನೆಗೂ ಅವರು ಚಾಲನೆ ನೀಡಲಿದ್ದಾರೆ.
ಲೋಕಪಯೋಗಿ ಇಲಾಖೆಯಿಂದ 15.75 ಕೋಟಿ ರೂ, ನಿರ್ಮಿತಿ ಕೇಂದ್ರದಿಂದ 4.5 ಕೋಟಿ ರೂ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ, ಜಗಳೂರು ಕ್ಷೇತ್ರಕ್ಕೆ ಒಳ ಪಡುವ ಅರಸಿಕೆರೆ ಭಾಗದ ಕಂಬತ್ತಹಳ್ಳಿ, ಚಟ್ನಳ್ಳಿ, ಕಂಬತ್ತಹಳ್ಳಿ, ರಾಮಘಟ್ಟ, ಅರಸಿಕೆರೆಯಲ್ಲಿ ಕೋಲ ಶಾಂತ ಭವನ ನಿರ್ಮಾಣಕ್ಕಾಗಿ,
ಜಗಳೂರಿನಲ್ಲಿ ಕನ್ನಡ ಭವನ ನಿರ್ಮಾಣ , ಓಬ್ಬವ ಭವನ ನಿರ್ಮಾಣಕ್ಕೆ ಒಟ್ಟು 2.60 ಕೋಟಿ ರೂಗಳ ಕಾಮಗಾರಿಗೆ ಚಾಲನೆ ನೀಡಲಾಗುವುದು. ಬಿಸ್ತುವಳ್ಳಿ, ಗುರುಸಿದ್ದಾಪುರ, ಐನಳ್ಳಿ, ಮಾದ ಮುತ್ತಿಹಳ್ಳಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಜೀಣೋದ್ಧಾರಕ್ಕೂ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು. ಆರ್ ಡಿಪಿ ಆರ್ ಇಲಾಖೆಯಿಂದ 11 ಕೋಟಿ ರೂ ವಿವಿಧ ಕಾಮಗಾರಿಗಳಿಗೆ ಉದ್ಘಾಘಟನೆ ಕಾರ್ಯಕ್ರಮ ನೆರವೇರಲಿದೆ ಎಂದರು.
ಮಂಡಲ್ ಬಿಜೆಪಿ ಅಧ್ಯಕ್ಷ ಎಚ್.ಸಿ. ಮಹೇಶ್ ಮಾತನಾಡಿ, ಜಗಳೂರು ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಎಸ್.ವಿ.ರಾಮಚಂದ್ರ ಅವರ ಕೊಡುಗೆ ಅಪಾರವಾದುದು. 3500 ಕೋಟಿಗೂ ಅಧಿಕ ಹಣ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಸೊಕ್ಕೆ ನಾಗರಾಜ್, ಪಾಪಂ ಸದಸ್ಯ ಎಚ್. ನಾಗರಾಜ್, ಇಂದಿರೇಶ್, ಆರ್. ತಿಪ್ಪೇಸ್ವಾಮಿ, ಡಿ.ವಿ.ನಾಗಪ್ಪ, ಕಟ್ಟಿಗೆಹಳ್ಳಿ ಮಂಜುನಾಥ್, ಲಿಂಗಣ್ಣನಹಳ್ಳಿ ರವಿ, ಯುವ ಮುಖಂಡ ರಾಜೇಶ್ ಸೇರಿದಂತೆ ಅನೇಕರು ಇದ್ದರು.